ಜೂನ್ 22, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ'ದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.  

ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷರಾದ ಎನ್. ರಾಜಗೋಪಾಲ್ ಅವರು ಮಾತನಾಡಿದರು. 

 ರಾಜ್ಯ ಸರ್ಕಾರವು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಎನ್. ರಾಜಗೋಪಾಲ್ ಅವರು ಒತ್ತಾಯಿಸಿದರು. 

 ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಎಂ.ಕೆ. ರಾಜು, ರಾಜ್ಯ ಖಜಾಂಚಿಯಾದ ಹೆಚ್.ಎಸ್. ರಮೇಶ್, ಕಾರ್ಯಧ್ಯಕ್ಷರಾದ ಶ್ರೀನಿವಾಸ್, ಉಪಾಧ್ಯಕ್ಷರಾದ ಸಿ. ಮುತ್ತಯ್ಯ ಅವರು ಮಾತನಾಡಿದರು.

ಅನುದಾನಿತ ಶಾಲಾ ಶಿಕ್ಷಕರ ನ್ಯಾಯಯುತವಾದ ಬೇಡಿಕೆಗಳು;

1) ಶಿಕ್ಷಕರ ಮತ್ತು ಮಕ್ಕಳ ಅನುಪಾತವನ್ನು ಆ‌ರ್.ಟಿ.ಐ. ಆಕ್ಟ್ ಮತ್ತು ನ್ಯಾಯಾಲಯದ ತೀರ್ಪಿನಂತೆ 30:1 ನ್ನು ಜಾರಿಗೆ ತರುವುದು.

2) ಹೆಚ್ಚುವರಿ ಶಿಕ್ಷಕರ ನೆಪ ಒಡ್ಡಿ ಶಿಕ್ಷಕರ ನೇಮಕಾತಿಯನ್ನು ತಡೆಹಿಡಿಯಲಾಗಿದೆ. ಈಗ ಮತ್ತೆ ನೇಮಕಾತಿಗೆ ಅವಕಾಶವನ್ನು ಕಲ್ಪಿಸುವುದು

3) ಹಳೆ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದು

4) ಕಾಲ್ಪಿನಿಕ ವೇತನ ಜಾರಿಗೊಳಿಸುವುದು

5) ನಮ್ಮ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಜ್ಯೋತಿ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸುವುದು.

6) ನಮ್ಮ ಅನುದಾನಿತ ಶಾಲಾ ಮಕ್ಕಳಿಗೂ ಸಮವಸ್ತ್ರ, ಶೂ, ಸಾಕ್ಸ್ ನೀಡುವುದು.

7) ನಮ್ಮ ಅನುದಾನಿತ ಪ್ರಾಥಮಿಕ ಶಾಲೆಗಳಿಗೂ ಶಾಲಾನುದಾನವನ್ನು ಈ ಹಿಂದೆ ನೀಡುತ್ತಿದ್ದಂತೆ ನೀಡುವುದು

8) ಈ ಹಿಂದೆ ನೀಡುತ್ತಿದ್ದ ಶಾಲಾ ನಿರ್ವಹಣ ಅನುದಾನವನ್ನು (ಎಂ.ಜಿ.ಗ್ರಾಂಟ್ಸ್) ಮತ್ತೆ ಪ್ರಾರಂಭಿಸುವುದು.

9) ಅನುದಾನಿತ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೂ ಮುಖ್ಯ ಶಿಕ್ಷಕರ ವೇತನ ಶ್ರೇಣಿಯನ್ನು ನೀಡುವುದು.

10) ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ವೈದ್ಯಕೀಯ ಭತ್ಯೆ 200 ರೂಗಳನ್ನು ನೀಡುವುದು.

11)ಮಾನ್ಯತೆ ನವೀಕರಣವನ್ನು ಸರಳೀಕರಿಸುವುದು.

12) ಅನುದಾನಿತ ಪ್ರಾಥಮಿಕ ಶಾಲೆ ಶಿಕ್ಷಕಿಯರಿಗೂ ಶಿಶುಪಾಲನಾ ರಜೆಯನ್ನು ಮಂಜೂರು ಮಾಡುವುದು.

13)ಅನುದಾನಿತ ಪ್ರಾಥಮಿಕ ಶಾಲೆ ಶಿಕ್ಷಕರಿಗೂ ಹಬ್ಬದ ಮುಂಗಡವನ್ನು ನೀಡುವುದು

14) ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ನೀರು ಮತ್ತು ವಿದ್ಯುತ್ ಸರಬರಾಜು ಮಾಡುವ ಆದೇಶವು ಅನುದಾನಿತ ಕನ್ನಡ ಪ್ರಾಥಮಿಕ ಶಾಲೆಗಳನ್ನು ನಡೆಸುತ್ತಿರುವ ಕಟ್ಟಡಗಳಿಗೂ ಅನ್ವಯವಾಗಲಿ.

ಚುನಾವಣಾ ವೇಳಾಪಟ್ಟಿ

ತಾಲೂಕು ಮಟ್ಟದ ಚುನಾವಣೆ

1) ದಿನಾಂಕ : 24/06/2024 00 ಗಂಟೆ 29/06/2024

2) ನಾಮಪತ್ರ ಹಿಂಪಡೆಯುವುದು ದಿನಾಂಕ: 01/07/2024

3) ಚುನಾವಣೆ ದಿನಾಂಕ ಮತ್ತು ಫಲಿತಾಂಶ ಪ್ರಕಟಣೆ ದಿನಾಂಕ: 07/07/2024

ಜಿಲ್ಲಾ ಮಟ್ಟದ ಚುನಾವಣೆ

1) ದಿನಾಂಕ : 15/07/2024 00 ಗಂಟೆ 19/07/2024

2) ನಾಮಪತ್ರ ಹಿಂಪಡೆಯುವುದು ದಿನಾಂಕ: 20/07/2024

3) ಚುನಾವಣೆ ಮತ್ತು ಫಲಿತಾಂಶ ದಿನಾಂಕ: 21/07/2024

ರಾಜ್ಯ ಮಟ್ಟದ ಚುನಾವಣೆ:

1) ನಾಮಪತ್ರ ಸಲ್ಲಿಕೆ ದಿನಾಂಕ: 22/07/2024 ರಿಂದ 27/07/2024

2) ನಾಮಪತ್ರ ಹಿಂಪಡೆಯುವುದು ದಿನಾಂಕ: 29/07/2024

3) ಚುನಾವಣೆ ಮತ್ತು ಫಲಿತಾಂಶ ದಿನಾಂಕ: 04/08/2024