ಜೂನ್ 13, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು 'ಡಾ|| ಬಿ.ಆರ್. ಅಂಬೇಡ್ಕರ್ ದಲಿತ ಸಂಘಟನೆಗಳ ಒಕ್ಕೂಟ'ದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು 

 ಈ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀಧರ ಕಲಿವೀರ ಅವರು ಮಾತನಾಡಿದರು. 

 ಕರ್ನಾಟಕ ಸರ್ಕಾರದ ಅಧೀನದ "ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ"ಗೆ ಸೇರಿದ 48 ಕೋಟಿ ಹಣ ಭ್ರಷ್ಟಾಚಾರ ಎಸೆಗಿರುವ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಶ್ರೀಧರ ಕಲಿವೀರ ಅವರು ಒತ್ತಾಯಿಸಿದರು.

 ಸದರಿ ಭ್ರಷ್ಟಾಚಾರ ಹಗರಣ ನಡೆದ 2019 - 2020ರ ಅವಧಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದರು. ಬಸವರಾಜ್ ಬೊಮ್ಮಾಯಿ ಅವರು ಸದರಿ ಮಂಡಳಿ ವ್ಯಾಪ್ತಿಗೆ ಸೇರಿದ ಸಹಕಾರ ಇಲಾಖೆಯ ಸಚಿವರಾಗಿದ್ದರು ಎಂದು ಶ್ರೀಧರ ಕಲಿವೀರ ಅವರು ಹೇಳಿದರು.

ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಅಂದಿನ ಎಂ.ಡಿ ಆಗಿದ್ದ ಐ.ಎ.ಎಸ್ ಅಧಿಕಾರಿ ಕರೀಗೌಡ ಅವರು ಸದರಿ ಮಂಡಳಿ ಗೆ ಸೇರಿದ ಆಂಧ್ರ ಬ್ಯಾಂಕಿನಲ್ಲಿ ಇಟ್ಟಿದ್ದ 100 ಕೋಟಿ ನಿಶ್ಚಿತ ಠೇವಣಿ ಹಣವನ್ನು ಕಾನೂನು ಬಾಹಿರವಾಗಿ ಅಂದಿನ ಸಿಂಡಿಕೇಟ್ ಬ್ಯಾಂಕ್ (ಇಂದಿನ ಕೆನರಾ ಬ್ಯಾಂಕ್) ಉತ್ತರಹಳ್ಳಿ ಶಾಖೆಗೆ ವರ್ಗಾಯಿಸುವಂತೆ 18-11-2019 ರಂದು ಆದೇಶಿಸಿದ್ದರು ಎಂದು ಶ್ರೀಧರ ಕಲಿವೀರ ಅವರು ಹೇಳಿದರು. 

  20-01-2020 ರಂದು ಎಂಡಿ ಕರಿಗೌಡರು ಸದರಿ ಬ್ಯಾಂಕಿನಲ್ಲಿ ಈ ಕುರಿತು ವಿಚಾರಿಸಿದಾಗ ಬ್ಯಾಂಕಿನವರು 100 ಕೋಟಿ ಪೈಕಿ 52 ಕೋಟಿ ನಿಶ್ಚಿತ ಠೇವಣಿ ಸರ್ಟಿಫಿಕೇಟ್ ಅಸಲಿ ಆಗಿದೆ ಎಂದು ಉಳಿದ 48 ಕೋಟಿ ನಿಶ್ಚಿತ ಠೇವಣಿ ಸರ್ಟಿಫಿಕೇಟ್ ನಕಲಿ ಎಂದು ತಿಳಿಸಿದ್ದರು ಎಂದು ಶ್ರೀಧರ ಕಲಿವೀರ ಅವರು ಹೇಳಿದರು. 

 ರಾಜ್ಯ ಸರ್ಕಾರ ಈ ಪ್ರಕರಣದ ಬಗ್ಗೆ ಕೂಲಂಕುಶವಾಗಿ ತನಿಖೆ ನಡೆಸಿ ತಪ್ಪು ಮಾಡಿರುವ ಅಧಿಕಾರಿಗಳಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಶ್ರೀಧರ ಕಲಿವೀರ ಅವರು ಒತ್ತಾಯಿಸಿದರು. 

 ಈ ಪತ್ರಿಕಾಗೋಷ್ಠಿಯಲ್ಲಿ ಭೀಮ್ ಆರ್ಮಿಯ ರಾಜ್ಯಾಧ್ಯಕ್ಷರಾದ ಡಿ.ಎಸ್. ರಾಜಗೋಪಾಲ್ ಅವರು ಉಪಸ್ಥಿತರಿದ್ದರು.