ಮೇ 24, 2024
ಬೆಂಗಳೂರಿನಲ್ಲಿ ಖಾಸಗಿ ಹೋಟೆಲ್ ನಲ್ಲಿ "ರೆಂಟ್ ಆಂಡ್ಯ್ ಗೋ" ಹೆಸರಿನ 'ಕಾರ್ ರೆಂಟಲ್ ಆ್ಯಪ್'ನ್ನು ಅವಧೂತರಾದ ಶ್ರೀ. ವಿನಯ್ ಗುರೂಜಿ ಅವರು ಲೋಕಾರ್ಪಣೆ ಮಾಡಿದರು.
"ಟ್ರಾವೆಲ್ ಮೇಟ್" ಸಂಸ್ಥೆಯು ಈ 'ಕಾರ್ ರೆಂಟಲ್ ಆ್ಯಪ್' ನ್ನು ಅಭಿವೃದ್ಧಿಪಡಿಸಿದೆ. ನಗರ ಸಾರಿಗೆ ದಟ್ಟನೆಗೆ ಆಧುನಿಕ ತಂತ್ರಜ್ಞಾನ ಬಳಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಶ್ರೀ ರಾಕೇಶ್ ಸಿಂಗ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಡಾ.ಜಿ ಸಿ ಪ್ರಕಾಶ್ ಮತ್ತು ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ.ಎನ್.ವಿ. ಪ್ರಕಾಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.