ಬೆಂಗಳೂರು, ಮೇ 08, 2024:
ವಿಶ್ವ ಥಲಸ್ಸೇಮಿಯಾ ದಿನದಂದು ಚಿರಾಗ್ ಅವರನ್ನು ಭೇಟಿ ಮಾಡಲು ಜರ್ಮನಿಯಿಂದ ಭಾರತಕ್ಕೆ ಬಂದ ರೋಮನ್
ಒಂದು ಅತ್ಯಂತ ಅಚ್ಚರಿಯ ಸಂಗತಿಯೆಂದರೆ, ಥಲಸೇಮಿಯಾ ಸಂತ್ರಸ್ತ 17 ವರ್ಷ ಚಿರಾಗ್ ತನಗೆ ಸ್ಟೆಮ್ ಸೆಲ್ ದಾನ ಮಾಡುವ ಮೂಲಕ, ಮರುಜೀವ ನೀಡಿದ ಜರ್ಮನಿಯ ರೋಮನ್ ಸಿಮ್ನಿಝ್ಕಿ ಅನ್ನು ಭೇಟಿ ಮಾಡಿದ್ದಾರೆ. ರೋಗಿಯ ಜೀವನ ಗುಣಮಟ್ಟದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವ ಆನುವಂಶೀಯ ರಕ್ತ ಸಮಸ್ಯೆಯಾದ ಥಲಸ್ಸೇಮಿಯಾದಿಂದ ಚಿರಾಗ್ ಬಳಲುತ್ತಿದ್ದರು. ತನ್ನ ಬಹುತೇಕ ಬಾಲ್ಯಕಾಲದಿಂದಲೂ ಚಿರಾಗ್ ರಕ್ತ ಟ್ರಾನ್ಸ್ಫ್ಯೂಷನ್ಗಳ ಜೊತೆಗೆ ಬಳಲಿಕೆ ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಚಿರಾಗ್ ಎದುರಿಸಬೇಕಾಯಿತು.
ಹತ್ತು ವರ್ಷಗಳವರೆಗೆ ಅವರ ಕುಟುಂಬ ಸರಿಯಾದ ದಾನಿಗೆ ಹುಡುಕಾಟ ನಡೆಸುತ್ತಿತ್ತು. ಕೊನೆಗೂ 2016 ರಲ್ಲಿ ಈ ಹುಡುಕಾಟಕ್ಕೆ ಒಂದು ಅಂತ್ಯ ಸಿಕ್ಕಿತು. ಡಿಕೆಎಂಎಸ್ನ ಡೇಟಾಬೇಸ್ ಮೂಲಕ ಜರ್ಮನಿಯ ಮುನ್ಸಿಂಜೆನ್ನ 29 ವರ್ಷದ ರೋಮನ್ ಸರಿಯಾದ ಹೊಂದಾಣಿಕೆಯಾದರು.
“ರೋಮನ್ ಅವರನ್ನು ಭೇಟಿ ಮಾಡಿದ್ದು ಒಂದು ಅದ್ಭುತ ಅನುಭವವಾಗಿದೆ ಎಂದು ಚಿರಾಗ್ ಹೇಳುತ್ತಾರೆ. ಅವರ ನಿಸ್ವಾರ್ಥ ಸೇವೆ ಎಷ್ಟು ಆಭಾರಿಯಾಗಿದ್ದೇನೆ ಎಂಬುದನ್ನು ನಾನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಅವರು ಬರಿ ಸ್ಟೆಮ್ ಸೆಲ್ ದಾನ ಮಾಡಲಿಲ್ಲ. ಬದಲಿಗೆ ಅವರು ನನಗೆ ಜೀವ ನೀಡಿದ್ದಾರೆ” ಎಂದು ಚಿರಾಗ್ ಹೇಳಿದ್ದಾರೆ.
ಚಿರಾಗ್ ಅವರನ್ನು ಭೇಟಿ ಮಾಡಲು ಭಾರತಕ್ಕೆ ಆಗಮಿಸಿದ್ದ ರೋಮನ್ ತನ್ನ ಭಾವನೆಗಳನ್ನು ಹಂಚಿಕೊಂಡರು. “ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಖುಷಿಗಿಂತ ಬೇರೇನೂ ಇಲ್ಲ. ಚಿರಾಗ್ ಅವರನ್ನು ಆರೋಗ್ಯವಂತರನ್ನಾಗಿ ನೋಡುವುದರಲ್ಲಿನ ಖುಷಿಗಿಂತ ಬೇರೊಂದಿಲ್ಲ.”
ಕೃತಜ್ಞತೆ ಮತ್ತು ಸಂತೋಷದಿಂದ ತುಂಬಿದ ಭಾವನಾತ್ಮಕ ಭೇಟಿ ಚಿರಾಗ್ ಮತ್ತು ರೋಮನ್ ಮಧ್ಯೆ ನಡೆಯಿತು. ಅವರ ಜೀವನ ಬದಲಾವಣೆಯ ಪಯಣದ ಅಮೋಘ ಸನ್ನಿವೇಶಕ್ಕೆ ಇದು ಸಾಕ್ಷಿಯಾಯಿತು. ಚಿರಾಗ್, ಈಗ ಥಲಸ್ಸೆಮಿಯಾದ ಸಮಸ್ಯೆಯಿಂದ ಮುಕ್ತವಾಗಿದ್ದು, ಉಜ್ವಲ ಭವಿಷ್ಯದ ಕನಸು ಕಾಣುವಂತಾಗಿದೆ. ಸ್ವ್ಯಾಬ್ ಅನ್ನು ಮತ್ತು ನಂತರ ರಕ್ತದ ಸ್ಟೆಮ್ ಸೆಲ್ ದಾನ ಮಾಡಿರುವುದು ಇನ್ನೊಂದು ಖಂಡದಲ್ಲಿರುವ ಒಂದು ಜೀವವನ್ನು ರಕ್ಷಿಸಿದೆ. ತಮ್ಮ ಮಗನ ಹೋರಾಟ ಮತ್ತು ಚೇತರಿಕೆಯನ್ನು ಕಣ್ಣಾರೆ ಕಂಡ ಚಿರಾಗ್ ಅವರ ಪೋಷಕರು ರೋಮನ್ ಅವರ ನಿಸ್ವಾರ್ಥ ಸೇವೆಗೆ ಹೃತ್ಪೂರ್ವಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಚಿರಾಗ್ಗೆ ಚಿಕಿತ್ಸೆ ನೀಡಿದ ವೈದ್ಯೆ ಚೆನ್ನೈನ ಅಪೊಲೊ ಹಾಸ್ಪಿಟಲ್ಸ್ನ ಪೀಡಿಯಾಟ್ರಿಕ್ ಹೆಮಟಾಲಜಿಸ್ಟ್ ಡಾ.ರೇವತಿ ರಾಜ್ ಮಾತನಾಡಿ “ನಮ್ಮ ದೇಶದಲ್ಲಿ ಥಲಸ್ಸೆಮಿಯಾ ಸಮಸ್ಯೆ ಗಮನಾರ್ಹವಾಗಿ ವ್ಯಾಪಿಸಿದೆ. ಪ್ರತಿ ವರ್ಷ 10,000 ಕ್ಕೂ ಹೆಚ್ಚು ಮಕ್ಕಳಿಗೆ ಜನಿಸುತ್ತಲೇ ಈ ಕಾಯಿಲೆ ಇರುತ್ತದೆ. ಬೀಟಾ-ಥಲಸ್ಸೆಮಿಯಾ ಮೇಜರ್ ಹಂತವು ಈ ಕಾಯಿಲೆಯ ತೀವ್ರ ಸ್ವರೂಪವಾಗಿದ್ದು, ಇದಕ್ಕೆ ನಿರ್ದಿಷ್ಟ ದಿನಗಳಿಗೊಮ್ಮೆ ರಕ್ತ ನೀಡಬೇಕಿರುತ್ತದೆ. ಸ್ಟೆಮ್ ಸೆಲ್ ಕಸಿಯೇ ಇದಕ್ಕೆ ಪರಿಹಾರವಾಗಿರುತ್ತದೆ. ಇಂದು ಚಿರಾಗ್ ಚೇತರಿಸಿಕೊಂಡಿದ್ದು ಉಜ್ವಲ ಭವಿಷ್ಯ ಕಾದಿದೆ ಎಂದು ನನಗೆ ಖುಷಿಯಾಗಿದೆ. ರೋಮನ್ನಂತಹ ಹೆಚ್ಚಿನ ಜನರು ಸ್ಟೆಮ್ ಸೆಲ್ ದಾನಿಗಳಾಗಿ ನೋಂದಾಯಿಸಿಕೊಳ್ಳಬೇಕಿದೆ. ಇದರಿಂದ ಹೆಚ್ಚಿನ ರೋಗಿಗಳಿಗೆ ಜೀವ ನೀಡಿದಂತಾಗುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
ಸ್ಟೆಮ್ ಸೆಲ್ ಕಸಿಯಲ್ಲಿ, ಸ್ಟೆಮ್ ಸೆಲ್ ಹೊಂದಾಣಿಕೆಯಾಗುವ ವ್ಯಕ್ತಿಯಿಂದ ಆರೋಗ್ಯಕರ ಸ್ಟೆಮ್ ಸೆಲ್ಗಳನ್ನು ರೋಗಿಗಳಿಗೆ ಅಳವಡಿಸಲಾಗುತ್ತದೆ. ಇದರಿಂದ ಆರೋಗ್ಯಕರವಾಗಿ ರಕ್ತ ಉತ್ಪಾದನೆಯಾಗಲು ಸಹಾಯವಾಗುತ್ತದೆ. ರೋಗಿಯ ಹ್ಯೂಮನ್ ಲ್ಯೂಕೊಸೈಟ್ ಆಂಟಿಜೆನ್ (ಎಚ್ಎಲ್ಎ) ಮತ್ತು ದಾನಿಯ ಎಚ್ಎಲ್ಎ ಹೊಂದಿಕೆಯಾದಾಗ ಸ್ಟೆಮ್ ಸೆಲ್ ಕಸಿ ಮಾಡಬಹುದಾಗಿರುತ್ತದೆ. ಇದು ಬ್ಲಡ್ ಗ್ರೂಪ್ಗಳನ್ನು ಹೋಲಿಸುವುದಕ್ಕಿಂತಲೂ ಹೆಚ್ಚು ಸಂಕೀರ್ಣ ಪ್ರಕ್ರಿಯೆಯಾಗಿದೆ. 30% ರೋಗಿಗಳಿಗೆ ಕುಟುಂಬದಲ್ಲೇ ಎಚ್ಎಲ್ಎ ಹೊಂದಿಕೆಯಾಗುವ ದಾನಿ ಸಿಗುತ್ತಾರೆ. ಆದರೆ, ಉಳಿದ 70% ರೋಗಿಗಳಿಗೆ, ಹೊಂದಾಣಿಕೆಯಾಗುವ ಎಚ್ಎಲ್ಎ ಹುಡುಕುವುದಕ್ಕಾಗಿ ದಾನಿಯನ್ನು ಕಂಡುಕೊಳ್ಳಬೇಕಾಗುತ್ತದೆ.
DKMS-BMST ಥಲಸ್ಸೆಮಿಯಾ ಕಾರ್ಯಕ್ರಮದ ಕುರಿತು ಮಾತನಾಡಿದ DKMS-BMST ಸಿಇಒ ಪ್ಯಾಟ್ರಿಕ್ ಪಾಲ್, “ಭಾರತದಲ್ಲಿ ಥಲಸ್ಸೇಮಿಯಾ ರೋಗಿಗಳಿಗೆ ಬೆಂಬಲ ನೀಡಲು, ನಾವು DKMS-BMST ಥಲಸ್ಸೆಮಿಯಾ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಈ ಕಾರ್ಯಕ್ರಮದ ಅಡಿಯಲ್ಲಿ, DKMS-BMST ಸ್ಥಳೀಯ ಎನ್ಜಿಒಗಳು ಮತ್ತು ಟ್ರಾನ್ಸ್ಪ್ಲಾಂಟೇಶನ್ ಕ್ಲಿನಿಕ್ಗಳ ಜೊತೆಗೆ ಸಹಭಾಗಿತ್ವ ಸಾಧಿಸುತ್ತದೆ. ಥಲಸ್ಸೆಮಿಯಾ ಹೊಂದಿರುವ ಸಣ್ಣ ವಯಸ್ಸಿನ ರೋಗಿಗಳು ಮತ್ತು ಅವರ ಕುಟುಂಬಗಳನ್ನು ದೂರದ ಸ್ಥಳಗಳಿಂದ ಕರೆತರಲಾಗುತ್ತದೆ. ಕೆಲವೊಮ್ಮೆ ಬೇರೆ ದೇಶಗಳಲ್ಲೂ ಶಿಬಿರಗಳನ್ನು ಆಯೋಜಿಸಿ, ಎಚ್ಎಲ್ಎ ಟೈಪಿಂಗ್ಗಾಗಿ ಬುಕ್ಕಲ್ ಸ್ವ್ಯಾಬ್ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ಈ ಮಾದರಿಗಳನ್ನು ಜರ್ಮನಿಯ ಮೂಲದ DKMS ಪ್ರಯೋಗಾಲಯದಲ್ಲಿ ವಿಶ್ಲೇಷಿಸಲಾಗುತ್ತದೆ ಮತ್ತು ಅದರ ಕ್ಲಿನಿಕಲ್ ಮ್ಯಾಚಿಂಗ್ ವರದಿಗಳನ್ನು ಒದಗಿಸಲಾಗುತ್ತದೆ. ಅನಾರೋಗ್ಯ ಹೊಂದಿರುವ ಮಗುವಿಗೆ ಕುಟುಂಬದಲ್ಲಿ HLA ಮ್ಯಾಚಿಂಗ್ ಸಿಗದೇ ಇದ್ದಾಗ, ನಾವು ದಾನಿಗಳ ಹುಡುಕಾಟ ನಡೆಸಲು ಸಹಾಯ ಮಾಡುತ್ತೇವೆ.
“ಸ್ಟೆಮ್ ಸೆಲ್ಗಳನ್ನು ದಾನ ಮಾಡುವುದು ಗಂಭೀರವಾಗಿ ಅನಾರೋಗ್ಯ ಪೀಡಿತ ವ್ಯಕ್ತಿಗೆ ಐಕಮತ್ಯವನ್ನು ಸಾಧಿಸುವ ಒಂದು ಕೃತ್ಯವಾಗಿದೆ. ಕಸಿ ಅಗತ್ಯವಿರುವ ಭಾರತೀಯ ರೋಗಿಗಳಿಗೆ ಹೊಂದಾಣಿಕೆಯಾಗುವ ಸ್ಟೆಮ್ ಸೆಲ್ಗಳನ್ನು ದಾನ ಮಾಡುವ ದಾನಿಗಳನ್ನು ಹುಡುಕುವುದು ಸವಾಲಿನ ಸಂಗತಿಯಾಗಿದೆ. ಭಾರತದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ, ಹೆಚ್ಚಿನ ಜನರನ್ನು ಸ್ಟೆಮ್ ಸೆಲ್ ದಾನಿಗಳಾಗಿ ನೋಂದಾಯಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು ಬಹಳ ಮುಖ್ಯ.