ಬೆಂಗಳೂರಿನಲ್ಲಿ ಅತ್ಯಾಧುನಿಕ ಕಾರ್ಡಿಯಾಲಜಿ ಸ್ಪೆಷಾಲಿಟಿ ಕ್ಲಿನಿಕ್ ಅನ್ನು ಪ್ರಾರಂಭಿಸಿದ ಬೆಲೆನಸ್ ಚಾಂಪಿಯನ್ ಹಾಸ್ಪಿಟಲ್ಸ್
ಬೆಂಗಳೂರು, ಮೇ 3, 2024 - ಬೆಲೆನಸ್ ಚಾಂಪಿಯನ್ ಹಾಸ್ಪಿಟಲ್ಸ್ ಇಂದು ತನ್ನ ಹೊಸ ಕಾರ್ಡಿಯಾಲಜಿ ಸ್ಪೆಷಾಲಿಟಿ ಕ್ಲಿನಿಕ್ ಅನ್ನು ಉದ್ಘಾಟಿಸಿತು. ಆರೋಗ್ಯ ಸೇವಾ ಕ್ಷೇತ್ರದ ಗಣ್ಯರು ಮತ್ತು ಸ್ಥಳೀಯ ಆಡಳಿತದ ಪ್ರಮುಖ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸುಧಾರಿತ ಚಿಕಿತ್ಸೆ ಮತ್ತು ಸಮಗ್ರ ಆರೋಗ್ಯ ಸೇವೆ ಪ್ಯಾಕೇಜ್ ಗಳನ್ನು ಒದಗಿಸುವ ಮೂಲಕ ಈ ಕ್ಲಿನಿಕ್ ಹೃದಯ ಚಿಕಿತ್ಸಾ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟುಮಾಡುವ ಉದ್ದೇಶ ಹೊಂದಿದೆ.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಎಚ್ಎಎಲ್ ಓಲ್ಡ್ ಏರ್ ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ರಂಜನ್ ಶೆಟ್ಟಿ ಅವರು ಹೊಸ ಕ್ಲಿನಿಕ್ ಅನ್ನು ಶ್ಲಾಘಿಸುತ್ತಾ ಮಾತನಾಡಿ, "ಬೆಲೆನಸ್ ಚಾಂಪಿಯನ್ ಹಾಸ್ಪಿಟಲ್ಸ್ ರೋಗಿಗಳನ್ನು ಕೇಂದ್ರೀಕರಿಸಿ ಚಿಕಿತ್ಸೆ ನೀಡುವುದರ ಜೊತೆ ಆಧುನಿಕ ತಂತ್ರಜ್ಞಾನವನ್ನು ಸಂಯೋಜಿಸುತ್ತಿದೆ. ಅದನ್ನು ನೋಡುವುದು ಸ್ಫೂರ್ತಿದಾಯಕವಾಗಿದೆ. ಈ ಕ್ಲಿನಿಕ್ ಅನ್ನು ಹೃದಯದ ಆರೋಗ್ಯ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸಲೆಂದು ಆರಂಭಿಸಲಾಗಿದೆ" ಎಂದು ಹೇಳಿದರು.
ಸ್ಥಳೀಯ ಬಿಜೆಪಿ ಅಧ್ಯಕ್ಷ ಮನೋಹರ್ ರೆಡ್ಡಿ ಕ್ಲಿನಿಕ್ ಉದ್ಘಾಟನೆಯನ್ನು ಮೆಚ್ಚಿಕೊಂಡು, "ಈ ಕ್ಲಿನಿಕ್ ನಮಗೆ ದೊರಕುತ್ತಿರುವ ಆರೋಗ್ಯ ಸೇವೆಗಳು ಪ್ರಗತಿ ಹೊಂದುತ್ತಿರುವುದರ ಸೂಚಕವಾಗಿದೆ. ಇದು ಉನ್ನತ ಗುಣಮಟ್ಟದ ಆರೋಗ್ಯ ಸೇವೆಯನ್ನು ಎಲ್ಲರಿಗೂ ಒದಗಿಸುವಂತೆ ಮಾಡುವಲ್ಲಿ ಒಂದು ಹೆಜ್ಜೆ ಮುಂದಿದೆ" ಎಂದು ಹೇಳಿದರು.
ಬೆಲೆನಸ್ ಚಾಂಪಿಯನ್ ಹಾಸ್ಪಿಟಲ್ಸ್ ಸಂಸ್ಥಾಪಕ ಡಾ. ಮಂಜುನಾಥ್ ಎಚ್ ಚಿಕಿತ್ಸಾಲಯದ ಬದ್ಧತೆಯ ಕುರಿತು ಮಾತನಾಡುತ್ತಾ, "ನಾವೀನ್ಯತೆ ಮತ್ತು ಸಹಾನುಭೂತಿ ಒದಗಿಸುತ್ತಾ ಮುನ್ನಡೆಯುವುದು ನಮ್ಮ ಗುರಿಯಾಗಿದೆ. ಈ ಕಾರ್ಡಿಯಾಲಜಿ ಸ್ಪೆಷಾಲಿಟಿ ಕ್ಲಿನಿಕ್ ಕೇವಲ ವೈದ್ಯಕೀಯ ಸೌಲಭ್ಯ ಮಾತ್ರವೇ ಅಲ್ಲ, ಇದು ಭರವಸೆ ಮತ್ತು ಗುಣಪಡಿಸುವಿಕೆಯನ್ನು ಬಯಸುವ ಎಲ್ಲರಿಗೂ ಜೀವಸೆಲೆಯಾಗಿ ಕಾರ್ಯನಿರ್ವಹಿಸಲಿದೆ" ಎಂದು ಹೇಳಿದರು.
ಸಹ-ಸಂಸ್ಥಾಪಕರಾದ ಡಾ. ಕಿಶೋರ್ ಕುಮಾರ್ ಎಂ ಜಿ ಮಾತನಾಡಿ, "ನಾವು ವೈಯಕ್ತೀಕರಿಸಿದ ಆರೈಕೆ ಮತ್ತು ವೈದ್ಯಕೀಯ ಪರಿಣತಿಯನ್ನು ಜೊತೆಯಾಗಿಸುತ್ತೇವೆ. ಪ್ರತಿ ರೋಗಿ ಕೂಡ ಉತ್ತಮ ಫಲಿತಾಂಶ ಪಡೆಯುವಂತೆ ನೋಡಿಕೊಳ್ಳುತ್ತೇವೆ. ನಮ್ಮ ಹೊಸ ಪ್ಯಾಕೇಜ್ಗಳು ರೋಗಿಗಳಿಗೆ ಸಮಗ್ರವಾದ ಹೃದಯ ಸಂಬಂಧಿ ಚಿಕಿತ್ಸೆಗಳನ್ನು ನೀಡುತ್ತದೆ.
ಆ ಮೂಲಕ ಎಲ್ಲರ ಅಗತ್ಯಗಳನ್ನು ಪೂರೈಸುತ್ತವೆ" ಎಂದು ಹೇಳಿದರು.
ಕನ್ಸಲ್ಟೆಂಟ್ ಮತ್ತು ಇಂಟರ್ವೆನ್ಷನಲ್ ಕಾರ್ಡಿಯಾಲಜಿ ಹೆಡ್ ಡಾ. ಕೆ. ಭರತನಂದನ್ ರೆಡ್ಡಿ, ಮತ್ತು ಇಂಟರ್ವೆನ್ಷನಲ್ ಕಾರ್ಡಿಯಾಲಜಿ ಕನ್ಸಲ್ಟೆಂಟ್ ಡಾ. ಪ್ರಜಿತ್ ಪಸಮ್ ₹6,499 ಬೆಲೆಯ ವಿಶೇಷ ಆಂಜಿಯೋಗ್ರಾಮ್ ಪ್ಯಾಕೇಜ್ ಅನ್ನು ಪರಿಚಯಿಸಿದರು. ಈ ಪ್ಯಾಕೇಜ್ ಸಂಕೀರ್ಣ ರೋಗನಿರ್ಣಯದ ಸೇವೆಗಳನ್ನು ಕೈಗೆಟುಕುವ ದರದಲ್ಲಿ ಒದಗಿಸಲಿದೆ.
ಸಿಇಓ ಪ್ರಶಾಂತ್ ಎಸ್ ದೇಸಾಯಿ ಅವರು ಭವಿಷ್ಯದ ಕುರಿತು ಮಾತನಾಡುತ್ತಾ, "ಆರೋಗ್ಯ ಸೇವೆಯಲ್ಲಿ ಉತ್ಕೃಷ್ಟತೆ ಸಾಧಿಸುವ ನಮ್ಮ ಪ್ರಯಾಣದಲ್ಲಿ ಇದೊಂದು ಪ್ರಮುಖ ಮೈಲಿಗಲ್ಲಾಗಿದೆ. ನಾವು ಭವಿಷ್ಯದ ಕುರಿತು ಮತ್ತು ಆರೋಗ್ಯ ಸೇವಾ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುವ ಕುರಿತು ಉತ್ಸುಕರಾಗಿದ್ದೇವೆ" ಎಂದು ಹೇಳಿದರು.
ಇದೆಲ್ಲದರ ಜೊತೆ, ರೋಗಿಗಳ ಆರೋಗ್ಯಕ್ಕೆ ಆದ್ಯತೆ ನೀಡುವ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಕ್ಲಿನಿಕ್, ಯಾರಾದರೂ ಎದೆ ನೋವು ಇರುವವರು ತಕ್ಷಣ ಕ್ಲಿನಿಕ್ ಗೆ ತೆರಳಿ ಉಚಿತ ಇಸಿಜಿ ಚಿಕಿತ್ಸೆ ಪಡೆಯಬಹುದು ಎಂದು ಘೋಷಿಸಿದೆ. ಆ ಮೂಲಕ ಸಕಾಲಿಕ ವೈದ್ಯಕೀಯ ನೆರವನ್ನು ಪಡೆಯಬಹುದು ಎಂದೂ ತಿಳಿಸಿದೆ.
ಕಾರ್ಡಿಯಾಲಜಿ ಸ್ಪೆಷಾಲಿಟಿ ಕ್ಲಿನಿಕ್ ಮೂಲಭೂತ ತಪಾಸಣೆಗಳಿಂದ ಹಿಡಿದು ಸಮಗ್ರ ಆರೈಕೆ ಯೋಜನೆಗಳವರೆಗೆ ವಿಶೇಷವಾದ ಆರೋಗ್ಯ ಪ್ಯಾಕೇಜ್ಗಳನ್ನು ಹೊಂದಿದೆ. ರೋಗಿಗಳು ತಮ್ಮ ನಿರ್ದಿಷ್ಟ ಅಗತ್ಯಗಳಿಗೆ ಸರಿಹೊಂದುವ ಚಿಕಿತ್ಸೆಯನ್ನು ಇಲ್ಲಿ ಪಡೆಯಲಿದ್ದಾರೆ. ಚಿಕಿತ್ಸಾಲಯವು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸುಸಜ್ಜಿತವಾಗಿದೆ ಮತ್ತು ಇಲ್ಲಿ ಹೆಸರಾಂತ ಹೃದ್ರೋಗ ತಜ್ಞರು ಮತ್ತು ಆರೋಗ್ಯ ಸೇವಾ ವೃತ್ತಿಪರರ ತಂಡ ಅತ್ಯುನ್ನತ ಗುಣಮಟ್ಟದ ಆರೈಕೆಯನ್ನು ಒದಗಿಸಲಿದ್ದಾರೆ.