ಏಪ್ರಿಲ್ 22, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು "ಕರ್ನಾಟಕ ಆದಿಜಾಂಬವ (ಮಾದಿಗ) ಸಂಘಟನೆಗಳ ಒಕ್ಕೂಟ"ದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

    ಈ ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಆದಿಜಾಂಬವ ಮಹಾಸಭಾದ ರಾಜ್ಯದ್ಯಕ್ಷರಾದ ಡಾ. ಭೀಮರಾಜು ಅವರು ಮಾತನಾಡಿದರು.

 ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲುವಂತೆ ಮಾಡಬೇಕೆಂದು ಕರೆ ನೀಡಿದರು. ಯಾವುದೇ ಕಾರಣಕ್ಕೂ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಮತ ನೀಡಬಾರದು ಎಂದು ಡಾ. ಭೀಮರಾಜು ಅವರು ಹೇಳಿದರು.