ಏಪ್ರಿಲ್ 13, 2024 

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ಶಾಸ್ತ್ರೀಯ ಸಂಗೀತ ಒಕ್ಕೂಟ ಟ್ರಸ್ಟ್' ನ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

 ಈ ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿಯಾದ ವಿದ್ವಾನ್ ಪ್ರಶಾಂತ್ ಅಯ್ಯಂಗಾರ್ ಅವರು ಮಾತನಾಡಿದರು. 

  ಗ್ರಾಮಾಂತರ ಪ್ರದೇಶಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಸಬಲೀಕರಣ ಗೊಳಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ವಿದ್ವಾನ್ ಪ್ರಶಾಂತ್ ಅಯ್ಯಂಗಾರ್ ಅವರು ಮಾಧ್ಯಮಗಳಿಗೆ ತಿಳಿಸಿದರು. 

 ಪತ್ರಿಕಾಗೋಷ್ಠಿಯಲ್ಲಿ ಸಮಾಜ ಸೇವಕರು ಹಾಗೂ ಸಂಗೀತ ವಿದ್ವಾಂಸರಾದ ರೇವತಿ ಕಾಮತ್ ಅವರು ಮಾತನಾಡಿದರು. 

 ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಸಂಗೀತದ ಬಗ್ಗೆ ಹೆಚ್ಚು ಆಸಕ್ತಿಯಿದೆ. ಹಾಗಾಗಿ ಸಂಗೀತ ಕ್ಷೇತ್ರದ ಪ್ರತಿಭಾನ್ವಿತ ಮಕ್ಕಳನ್ನು ಪತ್ತೆ ಹಚ್ಚುವ ಕೆಲಸವನ್ನು ಕರ್ನಾಟಕ ಶಾಸ್ತ್ರೀಯ ಸಂಗೀತ ಒಕ್ಕೂಟ ಟ್ರಸ್ಟ್ ಮಾಡಲಿದೆ ಎಂದು ರೇವತಿ ಕಾಮತ್ ರವರು ತಿಳಿಸಿದರು. 

 ಜೊತೆಗೆ ಈ ಸಂದರ್ಭದಲ್ಲಿ ರೇವತಿ ಕಾಮತ್ ರವರು ಕರ್ನಾಟಕ ಶಾಸ್ತ್ರೀಯ ಸಂಗೀತ ಒಕ್ಕೂಟ ಟ್ರಸ್ಟ್ ಗೆ ₹2.50 ಲಕ್ಷ ದೇಣಿಗೆ ನೀಡಿದರು.