ಮಾರ್ಚ್ 22, 2024
ಯುಗಾದಿ ಮಹೋತ್ಸವದ ಅಂಗವಾಗಿ ಆಂಧ್ರಪ್ರದೇಶದ ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀಶೈಲ ದೇವಸ್ಥಾನದಲ್ಲಿ ಭಕ್ತರಿಗಾಗಿ ಮಾರ್ಚ್ 27ರಿಂದ ಏಪ್ರಿಲ್ 5 ರವರೆಗೆ ಶ್ರೀ ಸ್ವಾಮಿಯವರ ಸ್ಪರ್ಶ ದರ್ಶನ ಕಾರ್ಯಕ್ರಮ ನಡೆಯಲಿದೆ. ಶ್ರೀಸ್ವಾಮಿ ಅವರ ಸ್ಪರ್ಶದರ್ಶನಕ್ಕೆ ₹500/- ನಿಗದಿಪಡಿಸಲಾಗಿದೆ.
10 ದಿನಗಳ ಕಾಲ ನಡೆದಿರುವ ಸ್ಪರ್ಶದರ್ಶನ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗೆ ಉಚಿತವಾಗಿ ಅನೇಕ ಸೇವೆಗಳನ್ನು ಶ್ರೀಶೈಲ ದೇವಸ್ಥಾನದ ಆಡಳಿತ ಮಂಡಳಿ ಕಲ್ಪಿಸಲಿದೆ. ಭಕ್ತರಿಗಾಗಿ ಉಚಿತ ಬಸ್ ಸೇವೆ, ಅನ್ನದಾನ ಕಾರ್ಯಕ್ರಮಗಳು ಹಾಗೂ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.