ಮಾರ್ಚ್ 15, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಬಿ) ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಡಾ|| ಎನ್. ಮೂರ್ತಿ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾರ್ಚ್ 18ರಿಂದ ಏಪ್ರಿಲ್ 1ರವರೆಗೆ "ಸಂವಿಧಾನ ಜಾರಿ ಆಂದೋಲನ" ಆಯೋಜಿಸಲಾಗಿದೆ ಎಂದು ಡಾ|| ಎನ್. ಮೂರ್ತಿ ಅವರು ಮಾಧ್ಯಮಗಳಿಗೆ ತಿಳಿಸಿದರು.
ತುಮಕೂರು, ಚಿತ್ರದುರ್ಗ, ದಾವಣಗೆರೆ, ಗದಗ ಕೊಪ್ಪಳ ಬಾಗಲಕೋಟೆ, ವಿಜಯಪುರ, ಕಲ್ಬುರ್ಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಬೆಳಗಾವಿ ಮತ್ತು ಮೈಸೂರು ಜಿಲ್ಲೆಗಳಲ್ಲಿ ಸಂವಿಧಾನ ಜಾರಿ ಆಂದೋಲನ ನಡೆಯಲಿದೆ ಎಂದು ಡಾ|| ಎನ್. ಮೂರ್ತಿ ಅವರು ತಿಳಿಸಿದರು.
2024ರ ಲೋಕಸಭಾ ಚುನಾವಣೆಗೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಬಿ) ಪಕ್ಷವು ಸಾಕಷ್ಟು ಸಿದ್ಧತೆ ನಡೆಸುತ್ತಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಬಿ) ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಡಾ|| ಎನ್. ಮೂರ್ತಿ ಅವರು ತಿಳಿಸಿದರು.
ಸಂವಿಧಾನ ಜಾರಿಗೊಳಿಸುವುದೇ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಬಿ) ಪಕ್ಷದ ಪ್ರಮುಖ ಪ್ರಣಾಳಿಕೆಯಾಗಿದೆ ಎಂದು ಡಾ|| ಎನ್. ಮೂರ್ತಿ ಮೂರ್ತಿಯವರು ತಿಳಿಸಿದರು.