ಮಾರ್ಚ್ 1, 2024
पटौदी इंटरप्राइजेज एवं अलगोजा रिसोर्ट - बूंदी
पटौदी इंटरप्राइजेज एवं अलगोजा रिसोर्ट कीऔर से बूंदी वासियों को दीपावली की हार्दिक बधाई व शुभकामनाएं
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು 'ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ- ಕರ್ನಾಟಕ'ದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಗಾನಂ ಶ್ರೀಕಂಠಯ್ಯ ಅವರು ಮಾತನಾಡಿದರು.
ಕಾಂತರಾಜು ಆಯೋಗದ ವರದಿಯನ್ನು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗಡೆ ರವರು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿದ ವರದಿಯನ್ನು ರಾಜ್ಯ ಒಕ್ಕಲಿಗರ ಹೋರಾಟ ಸಮಿತಿಯು ವಿರೋಧ ವ್ಯಕ್ತಪಡಿಸುತ್ತದೆ ಎಂದು ಶ್ರೀಕಂಠಯ್ಯ ಅವರು ಮಾಧ್ಯಮಗಳಿಗೆ ತಿಳಿಸಿದರು.
ವಿರೋಧ ವ್ಯಕ್ತಪಡಿಸುವ ಪ್ರಮುಖ ಅಂಶಗಳು:
1. ಕಾಂತರಾಜ್ ಆಯೋಗದ ದತ್ತಾಂಶಗಳು ಯಾವುದೇ ಮನೆಮನೆಗೂ ಸರ್ವೆ ಮಾಡಿ ಮಾಹಿತಿಯನ್ನು ಪಡೆದಿರುವುದಿಲ್ಲ.
2. ನಮ್ಮ ಸಮಾಜದ ಪರಮಪೂಜ್ಯ ಶ್ರೀಗಳು, ಮಾಜಿ ಪ್ರಧಾನಿಗಳಾದ ಎಚ್ ಡಿ ದೇವೇಗೌಡರವರು, ಮಾಜಿ ಮುಖ್ಯಮಂತ್ರಿಗಳು, ಮಾನ್ಯ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ರವರು, ಸಚಿವರು, ಸಂಸದರು ಶಾಸಕರು ಸಮಾಜದ ಹಿರಿಯರು ಸಹಿಯನ್ನು ಮಾಡಿ ಮನವಿ ಸಲ್ಲಿಸಿದರೂ ಕೂಡ ಆಯೋಗ ವರದಿಯನ್ನು ಸರಿಪಡಿಸದೆ ಸರ್ಕಾರಕ್ಕೆ ಸಲ್ಲಿಸಲಾಗಿದೆ.
3. ಕಾಂತರಾಜು ಆಯೋಗ ವರದಿಯು 2014-2015ನೇ ಸಾಲಿನಲ್ಲಿ ದತ್ತಾಂಶದ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.ಕರ್ನಾಟಕ ಹಿಂದುಳಿ ವರ್ಗಗಳ ಆಯೋಗದ ಕಾಯಿದೆ 1995ರ ಕಲಂ 9 (ii) ಮತ್ತು ಕಲಂ 11 ರ ಪ್ರಕಾರ ಪ್ರತಿ 10 ವರ್ಷಕ್ಕೊಮ್ಮೆ ಸಾಮಾಜಿಕ ಹಾಗು ಶೈಕ್ಷಣಿಕ ಸಮೀಕ್ಷೆಯನ್ನು ನೀಡಬೇಕಾಗುತ್ತದೆ. ಈ ವರದಿ ಸಂಗ್ರಹಿಸಿ ಸುಮಾರು 10 ವರ್ಷಗಳು ಕಳೆದು ಹೋಗಿರುವುದರಿಂದ ಈ ವರದಿಯನ್ನು ತಿರಸ್ಕರಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ.
4. ನಮ್ಮ ಒಕ್ಕಲಿಗ ಸಮಾಜದ ಎಲ್ಲಾ ಉಪಪಂಗಡಗಳನ್ನು ಒಟ್ಟಿಗೆ ಸೇರಿಸಿ ವರದಿಯನ್ನು ನೀಡಬೇಕೆಂದು ಆಯೋಗಕ್ಕೆ ಮನವಿ ಮಾಡಲಾಗಿದ್ದರು ಕೂಡ ಆಯೋಗ ಪರಿಗಣಿಸಿಲ್ಲ.
5. ಕಾಂತರಾಜ್ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಮಯದಲ್ಲಿ ಜಾತಿ ಜನಗಣತಿಯನ್ನು ಸಹ ಮಾಡಿಸಿದೆ ಎಂದು ತಿಳಿದು ಬಂದಿದೆ, ಜಾತಿ ಜನಗಣತಿ ಭಾರತದ ಸಂವಿಧಾನ ಆರ್ಟಿಕಲ್ 246 ರ ಪ್ರಕಾರ ಶೆಡ್ಯೂಲ್ VII ರ ವಿಷಯದಲ್ಲಿ ಜನಗಣತಿಯನ್ನು ಸಮೀಕ್ಷೆ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಒಕ್ಕಲಿಗ ಸಮಾಜ ವಿರೋಧ ವ್ಯಕ್ತಪಡಿಸುತ್ತದೆ. ಸಂಪೂರ್ಣ ವರದಿಯನ್ನು ಪಡೆದು ಪರಮಪೂಜ್ಯರು ಶ್ರೀಗಳು ಹಾಗೂ ಸಚಿವರು ಶಾಸಕರು, ಸಂಸದರು ಹಾಗೂ ಸಮಾಜದ ಹಿರಿಯರ ಸಫಿಯಲ್ಲಿ ಚರ್ಚಿಸಿ ಮುಂದಿನ ಹೋರಾಟದ ಬಗ್ಗೆ ರೂಪುರೇಷೆಗಳನ್ನು ನಿರ್ಧರಿಸಲಾಗುವುದು ಎಂದು
ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ-ಕರ್ನಾಟಕ ಪ್ರಧಾನ ಸಂಚಾಲಕರಾದ ಆಡಿಟರ್ ನಾಗರಾಜ್ ಯಲಚವಾಡಿ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸಂಚಾಲಕರುಗಳಾದ ಸಿ ಎಚ್, ಶಿವಲಿಂಗೇಗೌಡ, ಟಿ ವೆಂಕಟೇಶ್ ಹಾಗೂ ರಾಮಚಂದ್ರ ಉಪಸ್ಥಿತರಿದ್ದರು.