ಫೆಬ್ರವರಿ 28, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು ಹೈಕೋರ್ಟ್ ವಕೀಲರಾದ ಆರ್ ಆರ್ ಹಿರೇಮಠ್ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

 ಈ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್. ಆರ್. ಹಿರೇಮಠ್ ಅವರು 17-12 2021 ರಂದು ರಾಜ್ಯದಲ್ಲಿ ಖಾಲಿ ಇದ್ದ 88 ದಂತ ವೈದ್ಯಾಧಿಕಾರಿಗಳ ಹುದ್ದೆಗಳ ಪಟ್ಟಿಯ ಆಯ್ಕೆ ಪಟ್ಟಿಯಲ್ಲಿ ಆಯ್ಕೆಗೊಂಡಿರುವ ಅಭ್ಯರ್ಥಿಗಳು ಹಣ ನೀಡಿ ರೋಸ್ಟರ್ ಕಂ ಮೆರಿಟ್ ಪದ್ದತಿಯನ್ನು ಪಾಲಿಸದೆ ಅಕ್ರಮವಾಗಿ ಆಯ್ಕೆಯಾಗಿದ್ದಾರೆ ಆರೋಪಿಸಿದರು.

  ಇದೊಂದು ದೊಡ್ಡ ಮಟ್ಟದ ಅಕ್ರಮ ನೇಮಕಾತಿಯಾಗಿದ್ದು, ಕೋಟಿಗಟ್ಟಲೆ ಭ್ರಷ್ಟಾಚಾರ ನಡೆದಿದೆ. ಈ ಹಗರಣದಲ್ಲಿ ಮಾಜಿ ಆರೋಗ್ಯ ಸಚಿವರಾದ ಡಾ. ಕೆ. ಸುಧಾಕರ್ ಮತ್ತು ವಿಶೇಷ ನೇಮಕಾತಿ ಸಮಿತಿಯ ಮುಖ್ಯ ಆಡಳಿತ ಅಧಿಕಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಆದ ಜಿ. ಎನ್ ಮಂಜುನಾಥ ಸ್ವಾಮಿ ಹಾಗೂ ವಿಶೇಷ ನೇಮಕಾತಿ ಸಮಿತಿಯ ಎಲ್ಲಾ ಸಿಬ್ಬಂದಿಗೆ ಕೆಲವು ಅಭ್ಯರ್ಥಿಗಳು ಹಣ ನೀಡಿ ಆಯ್ಕೆಯಾಗಿದ್ದಾರೆ ಎಂದು ಆರೋಪಿಸಿದರು.

  ಈ ಹಿನ್ನಲೆಯಲ್ಲಿ 88 ದಂತ ವೈದ್ಯಾಧಿಕಾರಿಗಳ ನೇಮಕಾತಿಯನ್ನು ರಾಜ್ಯ ಸರ್ಕಾರ ರದ್ದುಪಡಿಸಬೇಕು. ಜೊತೆಗೆ ಈ ಹಗರಣವನ್ನು ರಾಜ್ಯ ಸರ್ಕಾರ ಉನ್ನತ ಮಟ್ಟದ ತನಿಖೆಗೆ ವಹಿಸಬೇಕೆಂದು ವಕೀಲರಾದ ಆರ್ ಆರ್ ಹಿರೇಮಠ್ ಅವರು ಒತ್ತಾಯಿಸಿದರು.