ಫೆಬ್ರವರಿ 17, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು ಬೆಂಗಳೂರಿನ ಬಸವ ಸಮಿತಿಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

  ಮುಂಬರುವ 'ಬಸವ ಜಯಂತಿ 2024'ರ ಅಂಗವಾಗಿ ಬಸವ ಸಮಿತಿಯು "ರಾಜ್ಯಮಟ್ಟದ ಪ್ರಬಂಧ ಹಾಗೂ ಕವನಸ್ಪರ್ಧೆ"ಯನ್ನು ಆಯೋಜಿಸಿದೆ.

  ಆಸಕ್ತರು ಮಾರ್ಚ್ 31, 2024ರ ಒಳಗಾಗಿ ಪ್ರಬಂಧ ಹಾಗೂ ಕವನಗಳನ್ನು competition@basavasamithi.org ಇ-ಮೇಲ್ ಗೆ ಕಳುಹಿಸಬೇಕು.

  ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ದ್ವಿತೀಯ ಮತ್ತು ದ್ವಿತೀಯ ಬಹುಮಾನವಾಗಿ ನಗದು ರೂಪದಲ್ಲಿ ತಲ 25 ಸಾವಿರ, 10 ಸಾವಿರ ಮತ್ತು 5 ಸಾವಿರ ನೀಡಲಾಗುತ್ತದೆ.

  ಜೊತೆಗೆ ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ದ್ವಿತೀಯ ತೃತೀಯ ಬಹುಮಾನವಾಗಿ ನಗದು ರೂಪದಲ್ಲಿ ತಲಾ 10 ಸಾವಿರ, 5 ಸಾವಿರ, 3 ಸಾವಿರ ರೂಗಳನ್ನು ನೀಡಲಾಗುತ್ತದೆ ಎಂದು ಸಮಿತಿಯ ಸದಸ್ಯರು ಮಾಧ್ಯಮಗಳಿಗೆ ತಿಳಿಸಿದರು.