February 15, 2024
ಬೆಂಗಳೂರಿನಲ್ಲಿ ಹೊಸ ರೆಸ್ಟೋರೆಂಟ್ ಆರಂಭಿಸುವ ಮೂಲಕ ತನ್ನ ಅಸ್ತಿತ್ವ ವಿಸ್ತರಣೆ ಮಾಡಿದ ನ್ಯಾಂಡೋಸ್.
ಬೆಂಗಳೂರಿನ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ನ್ಯಾಂಡೋಸ್ ನ ಹೊಸ ರೆಸ್ಟೋರೆಂಟ್ ಉದ್ಘಾಟನೆಯಾಯಿತು. ಕನ್ನಡದ ಜನಪ್ರಿಯ ನಟಿಯರಾದ ಹರ್ಷಿಕಾ ಪೂಣಚ್ಚ ಹಾಗೂ ಐಂದ್ರಿತಾ ರೇ ಅವರು ನೂತನ ನ್ಯಾಂಡೋಸ್ ರೆಸ್ಟೋರೆಂಟ್ ಅನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನ್ಯಾಂಡೋಸ್ ಇಂಡಿಯಾದ ಸಿಇಓ ಸಮೀರ್ ಭಾಸಿನ್, ಮಾರ್ಕೆಟಿಂಗ್ ಮುಖ್ಯಸ್ಥರಾದ ಅನುಶ್ರೀ ಬೋಸ್, ಆಪರೇಷನ್ಸ್ ಡೈರೆಕ್ಟರ್ ಅಮಿತ್ ಭಯಾನ, ಮಾರ್ಕೆಟಿಂಗ್ ವಿಭಾಗದ ಡೆಪ್ಯುಟಿ ಮ್ಯಾನೇಜರ್ ಅನ್ಶುಲ್ ಅಗರ್ವಾಲ್ ಅವರು ಉಪಸ್ಥಿತರಿದ್ದರು.
ಬೆಂಕಿಯಲ್ಲಿ ಗ್ರಿಲ್ ಆದ ಪೆರಿಪಿರಿ ಚಿಕನ್ ಗೆ ನ್ಯಾಂಡೋಸ್ ರೆಸ್ಟೋರೆಂಟ್ ಹೆಸರುವಾಸಿಯಾಗಿದೆ.