ಫೆಬ್ರವರಿ 10, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು "ಪಾರಂಪರಿಕ ಕುಣಿಗಲ್ ಕುದುರೆ ಫಾರಂ ಉಳಿವಿಗಾಗಿ ಹೋರಾಟ ಸಮಿತಿ" ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ತುಮಕೂರು ಜಿಲ್ಲೆಯ ಕುಣಿಗಲ್ ನಗರದಲ್ಲಿ ಐತಿಹಾಸಿಕ ಕುದುರೆ ಫಾರಂ ಇದ್ದು, ಈ ಕುದುರೆ ಫಾರಂ ಸುಮಾರು 400 ಎಕರೆಗಳಿಗಿಂತ ಹೆಚ್ಚು ವಿಸ್ತೀರ್ಣವನ್ನು ಹೊಂದಿರುತ್ತದೆ. ಪ್ರಸ್ತುತವಾಗಿ ಈ ಕುದುರೆ ಫಾರಂನಲ್ಲಿ 180ಕ್ಕೂ ಹೆಚ್ಚು ಕುದುರೆಗಳು ಇವೆ. ಜೊತೆಗೆ ಕುದುರೆಗಳ ನಿರ್ವಹಣೆ ಮತ್ತು ಸಾಕಣಿಕೆಗಾಗಿ 170 ಕುಟುಂಬಗಳ ಸದಸ್ಯರು ದಿನನಿತ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ.
ಆದರೆ ಈಗ ಕೆಲವು ರಾಜಕಾರಣಿಗಳು ಕುಣಿಗಲ್ ಕುದುರೆ ಫಾರಂ ಅನ್ನು ತೆರವುಗೊಳಿಸಿ ಟೌನ್ ಶಿಪ್ ನಿರ್ಮಾಣ ಮಾಡುತ್ತೇವೆ ಎಂದು ಹೇಳಿಕೆ ನೀಡಿರುತ್ತಾರೆ. ರಾಜಕಾರಣಿಗಳ ಟೌನ್ ಶಿಪ್ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಪಾರಂಪರಿಕವಾದ ಕುಣಿಗಲ್ ಕುದುರೆ ಫಾರಂ ಅನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಕುಣಿಗಲ್ ಕುದುರೆ ಫಾರಂ ಅನ್ನು ತೆರವುಗೊಳಿಸಲು ಬಿಡುವುದಿಲ್ಲ ಎಂದು ಕುಣಿಗಲ್ ಕುದುರೆ ಫಾರಂ ಉಳಿವಿಗಾಗಿ ಹೋರಾಟ ಸಮಿತಿಯ ಸದಸ್ಯರು ಮಾಧ್ಯಮಗಳಿಗೆ ತಿಳಿಸಿದರು.