ಡಿಸೆಂಬರ್ 21, 2023
ಬೆಂಗಳೂರಿನ ಯುವನಿಕಾ ಸಭಾಂಗಣದಲ್ಲಿ ಇಂದು "15ನೇ ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮದ ಸಮಾರೋಪ ಸಮಾರಂಭ" ನಡೆಯಿತು.
ಈ ಸಮಾರೋಪ ಸಮಾರಂಭದಲ್ಲಿ 'ಕ್ರೀಡಾ ಇಲಾಖೆ' ಹಾಗೂ 'ಯುವ ಸಬಲೀಕರಣ ಇಲಾಖೆ'ಯ ಪ್ರಧಾನ ಕಾರ್ಯದರ್ಶಿಯಾದ ಮಂಜುನಾಥ್ ಪ್ರಸಾದ್ ಹಾಗೂ ನೆಹರು ಯುವ ಕೇಂದ್ರದ ನಿರ್ದೇಶಕರಾದ ನಟರಾಜ್ ಅವರು ಉಪಸ್ಥಿತರಿದ್ದರು.
ಒಂದು ವಾರದ ಕಾಲ ನಡೆದ ಈ ಕಾರ್ಯಕ್ರಮವು ಕೇಂದ್ರದ ಯುವ ವ್ಯವಹಾರ ಮತ್ತು ಕ್ರೀಡಾ ಇಲಾಖೆ, ಕೇಂದ್ರದ ಗೃಹ ಇಲಾಖೆ, ಕರ್ನಾಟಕದಲ್ಲಿ ನೆಹರು ಯುವ ಕೇಂದ್ರ ಸಂಘಟನೆ, ಕರ್ನಾಟಕ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಿ ಆರ್ ಪಿ ಎಫ್, ಬಿಎಸ್ಎಫ್ ಸಹಯೋಗದಲ್ಲಿ ನಡೆಯಿತು.