December 11, 2023
ಬೆಂಗಳೂರಿನ ಮತ್ತಿಕೆರೆಯಲ್ಲಿರುವ ಐಡಿಎಲ್ ಫೌಂಡೇಶನ್ ಸಂಸ್ಥೆಯ ಕಚೇರಿಯಲ್ಲಿ ಅಂಧ ವಿಶೇಷ ಚೇತನರಿಗೆ ಉಚಿತವಾಗಿ ದವಸ ಧಾನ್ಯಗಳು ಹಾಗೂ ಬೆಡ್ ಶೀಟ್ ಗಳನ್ನು ವಿತರಿಸಲಾಯಿತು.
ಐಡಿಎಲ್ ಸಂಸ್ಥೆಯ ಅಧ್ಯಕ್ಷರಾದ ಡಾ. ಶೈನಿ ಗ್ರೇಸ್ ಅವರು ಅಂಧ ವಿಶೇಷ ಚೇತನರಿಗೆ ದವಸ ಧಾನ್ಯ ಹಾಗೂ ಬೆಡ್ ಶೀಟ್ಗಳನ್ನು ಹಂಚಿಕೆ ಮಾಡಿದರು. ಸುಮಾರು 75 ಹೆಚ್ಚು ಅಂದ ವಿಶೇಷ ಚೇತನರಿಗೆ ದವಸಧಾನ್ಯ, ಬೆಡ್ ಶೀಟ್ ಹಾಗೂ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ವಿಶೇಷ ಉಡುಗೊರೆ ನೀಡಲಾಯಿತು. ಈ ಕಾರ್ಯಕ್ರಮವು ರೋಟರಿ ಕ್ಲಬ್ ಸಂಸ್ಥೆಯ ಸಹಯೋಗದಲ್ಲಿ ನಡೆಯಿತು.