ನವೆಂಬರ್ 21, 2023
ಬೆಂಗಳೂರಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ನವೆಂಬರ್ 27ರಿಂದ ಡಿಸೆಂಬರ್ 7ರವರೆಗೆ ಸೀಳು ತುಟಿ, ಸೀಳು ಅಂಗುಳ ಹಾಗೂ ಸುಟ್ಟ ಗಾಯಗಳಿಂದಾದ ವಿರೂಪಗಳ ಉಚಿತ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.
ಈ ಶಿಬಿರವು ಆದಿಚುಂಚನಗಿರಿ ಆಸ್ಪತ್ರೆ ಹಾಗೂ ರೋಟರಿ ಬೆಂಗಳೂರು ಉತ್ತರ 3192 ಇವರ ಸಹಯೋಗದಲ್ಲಿ ನಡೆಯಲಿದೆ. ಅಮೆರಿಕದ ನುರಿತ ತಜ್ಞ ವೈದ್ಯರ ತಂಡವು ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ.
ಸಾರ್ವಜನಿಕರು ಈ ಶಿಬಿರದ ಆದಿಚುಂಚನಗಿರಿ ಆಸ್ಪತ್ರೆ ತಂಡ ಹಾಗೂ ರೋಟರಿ ಬೆಂಗಳೂರು ಉತ್ತರ 3192 ಸದಸ್ಯರು ಮನವಿ ಮಾಡಿದರು.