ಅಕ್ಟೋಬರ್ 19, 2023
ಬೆಂಗಳೂರಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರ ಕೇಂದ್ರ ಕಚೇರಿ ಮುಂದೆ ಸರ್ಕಾರಿ ಪಡಿತರ ವಿತರಕರು ಪ್ರತಿಭಟನೆ ನಡೆಸಿದರು.
ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ನಗದು ಬದಲು 10 ಕೆಜಿ ಅಕ್ಕಿ ನೀಡಬೇಕು. ಜತೆಗೆ ಪಡಿತರ ವಿತರಕರ ವಿವಿಧ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈ ಕೂಡಲೇ ಈಡೇರಿಸಬೇಕೆಂದು ಬೆಂಗಳೂರು ನಗರ ಸರ್ಕಾರಿ ಪಡಿತರ ವಿತರಕರ ಹಿತರಕ್ಷಣಾ ಸಂಘದ ಅಧ್ಯಕ್ಷರಾದ ಜೆ. ಬಿ. ಕುಮಾರ್ ಅವರು ಒತ್ತಾಯಿಸಿದರು.