ಬೆಂಗಳೂರು : ಕನಕಪುರ ರಸ್ತೆಯ ಜಿ.ಆರ್. ಇಂಟರ್‌ನ್ಯಾಷನಲ್ ಸ್ಕೂಲ್‌ನ ೧೨ನೇ ದರ್ಜೆ ವಿದ್ಯಾರ್ಥಿ ಧ್ರುವ ಆಡ್ವಣಿ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ಅಲ್ ಅನಿನಿನ್ ನಗರದಲ್ಲಿ ನಡೆದ ೩೪ನೇ ಅಂತಾರಾಷ್ಟಿçÃಯ ಬಯಾಲಜಿ ಒಲಂಪಿಯಾಡ್ (ಐಬಿಒ) ೨೦೨೩ರಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಭಾರತೀಯ ಉಪಖಂಡದ ನಾಲ್ವರು ವಿದ್ಯಾರ್ಥಿಗಳ ತಂಡದ ಸದಸ್ಯರಾಗಿದ್ದ ಧ್ರುವ ಅವರು ಬಯಾಲಜಿ ಒಲಂಪಿಯಾಡ್‌ನಲ್ಲಿ ಸ್ವರ್ಣಪದಕ ಜಯಿಸಿದ್ದಲ್ಲದೆ, ಭಾರತವು ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ವಿರಾಜಿಸುವಂತೆ ಮಾಡಿದರು. ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಭಾರತವು ಇದೇ ಮೊದಲ ಬಾರಿಗೆ ಎಲ್ಲ ಚಿನ್ನದ ಪದಕಗಳನ್ನೂ ಗೆದ್ದ ಸಾಧನೆ ಮಾಡಿದ್ದು ಉಲ್ಲೇಖನೀಯ.

ಎಲ್ಲ ನಾಲ್ಕು ಸ್ವರ್ಣ ಪದಕಗಳನ್ನು ಜಯಿಸಿದ ಭಾರತ ತಂಡದ ಸದಸ್ಯರಾಗಿದ್ದ ಧ್ರುವ ಆಡ್ವಾಣಿ ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ``ನಮಗೆ ೪ ಪ್ರಾಯೋಗಿಕ ಮತ್ತು ೨ ಸೈದ್ಧಾಂತಿಕ ಪರೀಕ್ಷೆಗಳಿದ್ದವು. ಅದು ಜೀವಶಾಸ್ತçಕ್ಕೆ ಸಂಬAಧಿಸಿದ ಪರೀಕ್ಷೆಯಾಗಿದ್ದರೂ, ಅದರಲ್ಲಿ ಗಣಿತಶಾಸ್ತç. ಸಂಖ್ಯಾಶಾಸ್ತç. ರಸಾಯನಶಾಸ್ತç, ಕಂಪ್ಯೂಟರ್ ಸೈನ್ಸ್ ಹಾಗೂ ಭೌತಶಾಸ್ತçದ ಅನ್ವಯಕ್ಕೆ ಸಂಬAಧಿಸಿದ ಪ್ರಶ್ನೆಗಳೂ ಇದ್ದವು! ನಾವು ಜೆಲ್ ಎಲೆಕ್ಟೊçÃಫೋರೆಸಿಸ್ ಬಳಸಿ ಡಿಎನ್‌ಎ ಪ್ರತ್ಯೇಕತೆಯನ್ನು ಯಶಸ್ವಿಯಾಗಿ ಮಾಡಿದೆವು, ಬ್ಯಾಕ್ಟೀರಿಯಾದ ಕಿಣ್ವಗಳ ಪರೀಕ್ಷೆ ಮತ್ತು ಪ್ರೆöÊಮರ್‌ಗಳ ವಿನ್ಯಾಸ ಇತ್ಯಾದಿಗಳನ್ನೂ ಮಾಡಿದೆವು'' ಎಂದು ಧ್ರುವ ಆಡ್ವಾಣಿ ಐಬಿಒ ಪರೀಕ್ಷೆಗಳ ಕುರಿತು ವಿವರಿಸಿದರು. ನಮಗೆ ಜೀವಶಾಸ್ತçದ ವಿವಿಧ ಆಯಾಮಗಳನ್ನು ತಿಳಿದುಕೊಳ್ಳುವ ಅವಕಾಶ ಒದಗಿತು. ದೇಶವನ್ನು ಪ್ರತಿನಿಧಿಸುವುದು ಮತ್ತು ಚಿನ್ನದ ಪದಕಗಳೊಂದಿಗೆ ಮರಳುವುದು ತುಂಬ ಗೌರವದ ಸಂಗತಿಯಾಗಿದೆ ಎಂದೂ ಹೇಳಿದರು.

ಈ ಸಾಧನೆಗಾಗಿ ಧ್ರುವ ಅವರನ್ನು ಅಭಿನಂದಿಸಿದ ಬೆಂಗಳೂರಿನ ಆರ್ಕಿಡ್ಸ್ ದಿ ಇಂಟರ್‌ನ್ಯಾಷನಲ್ ಸ್ಕೂಲ್‌ನ ಅಕಾಡೆಮಿಕ್ಸ್ ವಿಭಾಗದ ಉಪಾಧ್ಯಕ್ಷರಾಗಿರುವ ಸಾಕಿನಾ ಖಾಸಿಂ ಝೈದಿ ಅವರು, ``ಶಾಲೆಯ ಮಟ್ಟಿಗೆ ಇದೊಂದು ಅದ್ಭುತ ಸಾಧನೆಯೇ ಸರಿ. ಧ್ರುವ ಅವರ ಬಗ್ಗೆ ನಾವು ಅತೀವ ಹೆಮ್ಮೆ ಪಡುತ್ತೇವೆ. ಅವರು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಸಾಕಷ್ಟು ಶ್ರಮವಹಿಸಿ ಓದುತ್ತಿದ್ದಾರೆ. ಅವರ ಭವಿಷ್ಯ ಇನ್ನಷ್ಟು ಉಜ್ವಲವಾಗಲೆಂದು ಹಾರೈಸುತ್ತೇನೆ'' ಎಂದರು.

ಈ ವರ್ಷದ ಸ್ಪರ್ಧೆಯಲ್ಲಿ ೭೬ ದೇಶಗಳಿಂದ ೨೯೩ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಐಬಿಒದಲ್ಲಿ ಭಾಗವಹಿಸುವಿಕೆಯು ಮೂರು ಹಂತಗಳನ್ನು ಒಳಗೊಂಡಿತ್ತು - ಜೀವಶಾಸ್ತçದಲ್ಲಿ ರಾಷ್ಟಿçÃಯ ಪ್ರಮಾಣಿತ ಪರೀಕ್ಷೆ (ಎನ್‌ಎಸ್‌ಇಬಿ), ಬಳಿಕ ಇಂಡಿಯನ್ ನ್ಯಾಷನಲ್ ಬಯಾಲಜಿ ಒಲಂಪಿಯಾಡ್ (ಐಎನ್‌ಬಿಒ), ಹಾಗೂ ಅಂತಿಮವಾಗಿ ಓರಿಯೆಂಟೇಶನ್ ಕಮ್ ಸೆಲೆಕ್ಷನ್ ಕ್ಯಾಂಪ್ (ಒಸಿಎಸ್‌ಸಿ). ಐಬಿಒ ಎಂಬುದು ಜೀವಶಾಸ್ತçಕ್ಕೆ ಸಂಬAಧಿಸಿ ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಿಗೆ ಜಾಗತಿಕವಾಗಿ ಉನ್ನತ ದರ್ಜೆಯ ಸ್ಪರ್ಧೆಯನ್ನು ಆಯೋಜಿಸುವ ಸಂಸ್ಥೆಯಾಗಿದೆ ಮತ್ತು ಈ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನಕ್ಕಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ.