ಬೆಂಗಳೂರು : ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಅಬ್ಬಿಗೆರೆ ಸರ್ಕಾರಿ ಪ್ರೌಢ ಶಾಲೆಯಲ್ಲಿ 2022 - 2023 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದಾಸರಹಳ್ಳಿ ಅಭಿವೃದ್ಧಿ ಹರಿಕಾರರು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ.ಎಸ್.ಮುನಿರಾಜಣ್ಣ ರವರು ಉದ್ಘಾಟಿಸಿ ಎಸ್.ಎಸ್.ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕರಿಸಿ ಶುಭಾಶಯಗಳನ್ನು ಕೋರಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ರಾಜೇಂದ್ರಣ್ಣ ರವರು ನಿಕಟಪೂರ್ವ ಬಿ.ಬಿ.ಎಂ.ಪಿ ಸದಸ್ಯರಾದ ಶ್ರೀ.ಕೆ.ನಾಗಭೂಷಣ್ ರವರು ಶ್ರೀ ಅಬ್ಬಿಗೆರೆ ಲೋಕೇಶ್ ರವರು ಶ್ರೀ.ಸೋಮಶೇಖರ್ ರವರು ಹಾಗೂ ಶಾಲಾ ಉಪನ್ಯಾಸಕರು ನಮ್ಮೆಲ ಮುಖಂಡರು ಉಪಸ್ಥಿತರಿದ್ದರು.