ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ರಾಜರಾಜೇಶ್ವರಿನಗರ ವಲಯ, ಕೆಂಗೇರಿ ಉಪವಿಭಾಗ, ಹೆಮ್ಮಿಗೆಪುರ ವಾರ್ಡ್ ನಂ.198 ವ್ಯಾಪ್ತಿಯಲ್ಲಿ ಬರುವ ಕೊಡಿಪಾಳ್ಯ ಗ್ರಾಮದ ಚೂಡೇನಪುರ ಅಂಚೆ, ಕೆಂಗೇರಿ ಹೋಬಳಿಯ ಸರ್ವೆ ನಂ.12/1ಬಿ ಇಲ್ಲಿ2ನೇ ಅಡ್ಡರಸ್ತೆಯಲ್ಲಿ ಸಾರ್ವಜನಿಕರ ಓಡಾಟದ ರಸ್ತೆಗೆ ಅನಧಿಕೃತವಾಗಿ ಅಡ್ಡಲಾಗಿ ನಿರ್ಮಿಸಿದ್ದ ಗೇಟ್ ಅನ್ನು ತೆರವುಗೊಳಿಸಲಾಗಿದೆ.
ಮುಂದುವರಿದು ಮಾನ್ಯ ವಲಯ ಆಯುಕ್ತರು ರಾಜರಾಜೇಶ್ವರಿನಗರ ವಲಯ ಹಾಗೂ ಜಂಟಿ ಆಯುಕ್ತರು, ಆರ್.ಆರ್.ನಗರ ವಲಯ ರವರ ಆದೇಶದಂತೆ ಸದರಿ ಅನಧಿಕೃತ ಗೇಟ್ ಅನ್ನು ಇಂದು ಬೆಳಗ್ಗೆ ಜೆಸಿಬಿಯ ಮೂಲಕ ತೆರವುಗೊಳಿಸಲಾಗಿರುತ್ತದೆ.