*ಕರ್ನಾಟಕ ರೆಡ್ಡಿ ಜನಸಂಘದಿಂದ ನೂತನ ಸಚಿವರು, ಶಾಸಕರಿಗೆ ಸನ್ಮಾನ*
ओम धगाल - पूर्व प्रदेश कार्यकारिणी सदस्य भाजपा युवा मोर्चा
ओम धगाल की और से हिंडोली विधानसभा क्षेत्र एवं बूंदी जिले वासियों को रौशनी के त्यौहार दीपावली की हार्दिक बधाई व शुभकामनाएं
*ಸಮುದಾಯದ ಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧ – ಸಚಿವ ರಾಮಲಿಂಗಾ ರೆಡ್ಡಿ*
*ಬೆಂಗಳೂರು, ಜು, 12*; ರೆಡ್ಡಿ ಜನಾಂಗದಲ್ಲೂ ಬಡಜನರಿದ್ದು, ಸಮುದಾಯದ ಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ *ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ*.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ರೆಡ್ಡಿ ಜನ ಸಂಘದಿಂದ ವಿಧಾನಸಭೆಗೆ ರೆಡ್ಡಿ ಸಮುದಾಯದಿಂದ ಆಯ್ಕೆಯಾಗಿರುವ ನೂತನ ಶಾಸಕರು ಮತ್ತು ಸಚಿವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು. ರೆಡ್ಡಿ ಜನಾಂಗ ಸಾಮಾಜಿಕ, ಆರ್ಥಿಕವಾಗಿ ಮತ್ತಷ್ಟು ಬಲಿಷ್ಠವಾಗಬೇಕು. ಇದೇ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರದಲ್ಲಿ ರಾಜಕೀಯ ಪ್ರಾತಿನಿಧ್ಯ ದೊರೆತಿದ್ದು, ಇದು ಇನ್ನಷ್ಟು ಹೆಚ್ಚಾಗಬೇಕು. ಆಯ್ಕೆಯಾಗಿರುವ ಶಾಸಕರ ಜೊತೆಗೂಡಿ ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
*ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ*, ರೆಡ್ಡಿ ಜನಾಂಗ ಭವ್ಯ ಇತಿಹಾಸ ಹೊಂದಿದ್ದು, ಇದು ಜಾತಿಯಲ್ಲ. ಮಹತ್ವದ ಸಾಂಸ್ಕೃತಿಕ ನೆಲಗಟ್ಟನ್ನು ಹೊಂದಿದೆ. ಸಮುದಾಯ ಎಲ್ಲಾ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಉತ್ತಮ ಸಾಧನೆಯತ್ತ ಮುನ್ನಡೆದಿದೆ. ಇತ್ತೀಚಿನ ದಿನಗಳಲ್ಲಿ ಸಂಘದಲ್ಲಿ ಕ್ರಿಯಾತ್ಮಕ ಚಟುವಟಿಕೆ ಹೆಚ್ಚಾಗಿದೆ. ರಾಜ್ಯದಲ್ಲಿ ಉತ್ತಮ ಶಕ್ತಿಯನ್ನು ಹೊಂದಿರುವ ಸಮಾಜವಾಗಿ ಸಂಘಟಿತ ವಾಗಿದೆ. ನ್ಯಾಯದ ವಿರುದ್ಧ ಧಿಟ್ಟತನದಿಂದ ಹೋರಾಡುವ ಛಲ ಹೊಂದಿರುವ ರೆಡ್ಡಿ ಸಮುದಾಯದ ಮೂಲ ಗುಣ. ಇದರಿಂದಾಗಿ ರಾಜ್ಯದ ಜನಮಾನಸದಲ್ಲಿ ವಿಶೇಷ ಸ್ಥಾನಮಾನ ಹೊಂದಿದ್ದೇವೆ ಎಂದರು.
ಹರಿಹರ ತಾಲ್ಲೂಕಿನ ಎರೆ ಹೊಸಹಳ್ಳಿಯ ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.
ಕಾರ್ಯಕ್ರಮ ದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಎಚ್.ಕೆ ಪಾಟೀಲ್, ಶಾಸಕರುಗಳಾದ ಗಾಲಿ ಜನಾರ್ಧನ ರೆಡ್ಡಿ , ಎನ್.ಎಸ್ ಸುಬ್ಬಾರೆಡ್ಡಿ, ಎನ್.ಎಚ್ ಕೋನ ರೆಡ್ಡಿ, ಪ್ರಕಾಶ್ ಕೋಳಿವಾಡ, ನಾರಾ ಭರತ್ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ರೆಡ್ಡಿ ಜನಸಂಘದ ಅಧ್ಯಕ್ಷರಾದ ಎಸ್. ಜಯರಾಮ ರೆಡ್ಡಿ, ಉಪಾಧ್ಯಕ್ಷ ರಾದ ವೆಂಕಟ ಶಿವಾ ರೆಡ್ಡಿ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು