ಬೆಳಗಾವಿ : ಬೆಳಗಾವಿ ಜಿಲ್ಲೆಯ ಮಾಜಿ ಸಚಿವರು ಹಾಗೂ ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡರಾದ ಶ್ರೀ ಯುತ ಎ ಬಿ ಪಾಟೀಲ್ ಅವರ ಹುಟ್ಟು ಹಬ್ಬವನ್ನೂ ನಗರದ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಶ್ರೀ ಶ್ರೀ ಬಸವ ಜಯ ಮೃತುಂಜಯ ಮಹಾಸ್ವಾಮೀಜಿ ಅವರ ಗುರು ಮನೆಯಲ್ಲಿ ಶ್ರೀ ಗಳ ಸಮ್ಮುಖದಲ್ಲಿ ಸರಳವಾಗಿ ಆಚರಿಸಲಾಯಿತು.

Sponsored

महावीर कुल्फी सेन्टर - बूंदी

महावीर कुल्फी सेन्टर की और से बूंदी वासियों को दीपावली की हार्दिक बधाई व शुभकामनाएं

ಕೂಡಲ ಸಂಗಮ ಪೀಠದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಶ್ರೀ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಎ.ಬಿ ಪಾಟೀಲ್ ಅವರಿಗೆ ಶಾಲು ಹೊದಿಸಿ ಹಾರ ಹಾಕಿ ಫಲಪುಷ್ಪ ಮತ್ತು ಅವರ ರಾಜಕೀಯ ಜೀವನದ ಗುರುಗಳಾದ ಮಾಜಿ ಮುಖ್ಯಮಂತ್ರಿ ಗಳಾದ ಜೆ ಎಚ್ ಪಟೇಲ್ ಅವರ ಭಾವಚಿತ್ರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸಮುದಾಯದ ಶಾಸಕರುಗಳಾದ ವಿನಯ್ ಕುಲಕರ್ಣಿ, ವಿಜಯಾ ನಂದ ಕಾಶಪ್ಪನವರ್, ಬಾಬಾಸಾಹೇಬ್ ಕಿತ್ತೂರು, ಮತ್ತು ಪ್ರಕಾಶ್ ಹುಕ್ಕೇರಿ , ಬಿಬಿಎಂಪಿ ಮಾಜಿ ಉಪ ಮಹಾಪೌರರಾದ ಪುಟ್ಟ ರಾಜು ಸೇರಿದಂತೆ ಮುಖಂಡರುಗಳಾದ ರಾಜೂಗೌಡ, ಶಂಕರಗೌಡ ಬಿರಾದಾರ್, ಗುಂಡು ಪಾಟೀಲ್,ಸೇರಿದಂತೆ ಬೆಳಗಾವಿ ಜಿಲ್ಲೆಯ ಪಂಚಮ ಸಾಲಿ ಸಮುದಾಯದ ಮುಖಂಡರು ಕಾರ್ಯಕರ್ತರು ಈ ಹುಟ್ಟು ಹಬ್ಬದಲ್ಲಿ ಪಾಲ್ಗೊಂಡು ಶುಭಾಶಯ ಕೋರಿದರು. 

ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಮಾತನಾಡಿ ಸಮಾಜದ ಹಿರಿಯರು ಹಾಗೂ ಹಿರಿಯ ರಾಜಕೀಯ ಧುರೀಣರಾದ ಶ್ರೀಯುತ ಎಬಿ ಪಾಟೀಲ್ ಅವರಿಗೆ ಹುಟ್ಟು ಹಬ್ಬದ ಶುಭಾಶಿರ್ವಾದ ಗಳು. ದೇವರು ಇವರಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ ಆಯಸ್ಸು ಸುಖ ಸಂತೋಷ ಕೊಟ್ಟು ಮತ್ತು ರಾಜಕೀಯ ಜೀವನದಲ್ಲಿ ಇನ್ನಷ್ಟು ಒಳ್ಳೆಯ ಸ್ಥಾನ ಮಾನಗಳು ಸಿಗುವಂತಾಗಲಿ ಎಂದು ಶುಭ ಹಾರೈಸಿದರು.