ಬೆಂಗಳೂರು : ಪ್ರತಿ ಬಡಾವಣೆಗಳಲ್ಲಿ ನಾಟಕೋತ್ಸವಗಳು ನಡೆಯಬೇಕು ಎಂದು ಶಿಕ್ಷಣ ತಜ್ಞೆ, ನಾಟಕಗಾರ್ತಿ ಡಾ, ಗೀತಾ ರಾಮಾನುಜಮ್ ಹೇಳಿದರು,
ओम धगाल - पूर्व प्रदेश कार्यकारिणी सदस्य भाजपा युवा मोर्चा
ओम धगाल की और से हिंडोली विधानसभा क्षेत्र एवं बूंदी जिले वासियों को रौशनी के त्यौहार दीपावली की हार्दिक बधाई व शुभकामनाएं
ಅವರು ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘವು ಶ್ರೀಅಭಯ ಹಸ್ತ ಬಲಮುರಿ ಗಣಪತಿ ದೇವಸ್ಥಾನ ಸೇವಾ ಟ್ರಸ್ಟ್ ಸಹಯೋಗದಲ್ಲಿ ಸಿ. ಆರ್. ಸಿಂಹ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಮೂರು ದಿನಗಳ ನಾಟಕೋತ್ಸವ ಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿ ರಂಗಭೂಮಿಯ ಚಟುವಟಿಕೆಗಳು ಕಡಿಮೆಯಾಗುತ್ತಿರುವ ಸಮಯದಲ್ಲಿ ಈ ರೀತಿಯ ನಾಟಕೋತ್ಸವವನ್ನು ನಿರಂತರವಾಗಿ ಕಳೆದ 34 ವರ್ಷಗಳಿಂದ ಆಂಜನೇಯ ಅವರು ನಡೆಸಿಕೊಂಡು ಬಂದಿರುವುದು ಅಭಿನಂದನಿಯವಾದುದು ಎಂದರು.
ಇದೇ ಸಂದರ್ಭದಲ್ಲಿ ರಂಗಕರ್ಮಿ ಹಾಗು ಚಲನಚಿತ್ರ ನಟ ಮೂಗೂ ಸುರೇಶ್ ಅವರಿಗೆ ರಂಗಗೌರವವನ್ನು ಗಿಣಿರಾಮ ಧಾರವಾಹಿಯ ನಾಯಕ ನಟ ಋತ್ವಿಕ್ ಮಠದ್ ಅವರು ಸಲ್ಲಿಸಿದರು.
ಸಮಾರಂಭದಲ್ಲಿ ದೇವಾಲಯ ಟ್ರಸ್ಟ್ ಗೌ ಅಧ್ಯಕ್ಷ ರಾಮಪ್ಪ, ಕಾರ್ಯದರ್ಶಿ ಸಂಜೀವರೆಡ್ಡಿ, ಹಿರಿಯ ಪತ್ರಕರ್ತ ಎನ್ ಎಸ್ ಸುಧೀಂದ್ರರಾವ್, ಅಧ್ಯಕ್ಷ ಕುಮಾರ್, ಆಂಜನೇಯ ಸೇರಿದಂತೆ ನೂರಾರು ನಾಟಕಭಿಮಾನಿಗಳು ಉಪಸ್ಥಿರಿದ್ದರು.
ಡಿ ವೆಂಕಟರಮಣ ನಿರ್ದೇಶನದ ಐತಿಹಾಸಿಕ ರಣದುಂದುಬಿ ಮತ್ತು ಯು, ಗೋವಿಂದೇಗೌಡ ನಿರ್ದೇಶನದ ಹಾಸ್ಯ ನಾಟಕ ಹಳ್ಳಿಯಲ್ಲೊಂದು ಹರಿಕಥಾ ಪ್ರಸಂಗ ನಡೆಯಿತು.