ಬೆಂಗಳೂರು : ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡರ ಬಣ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಕಾರ್ಯಕರ್ತರ ಸಭೆಯಲ್ಲಿ ರಂಗಭೂಮಿ ಚಲನಚಿತ್ರ ಟಿವಿ ಕನ್ನಡ ಹೋರಾಟ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಕಾರ್ಯಕರ್ತರನ್ನು ಗೌರವಿಸಿದರು ಈ ಸಂದರ್ಭದಲ್ಲಿ ರಂಗ ತಜ್ಞರು ಹಾಗೂ ಹಿರಿಯ ಕಲಾವಿದರಾದ ಡಾಎಆರ್ ಗೋವಿಂದಸ್ವಾಮಿ, ಕಲಾವಿದ ಗಣೇಶ್ ರಾವ್, ಮೈಸೂರು ರಮಾನಂದ ಹಾಗೂ ಇತರರನ್ನು ಗೌರವಿಸಲಾಯಿತು.