ಬದಲಾಗಿ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಅಂಗನವಾಡಿಯವರಿಗೆ 2000 ರೂ ಪಡೆಯಬಹುದು ಎಂಬ ಹೇಳಿಕೆ ಬಜೆಟ್ ನಲ್ಲಿ ನೀಡಲಾಗಿದೆ. ಇದು ಸರಿಯಲ್ಲ. ಅಂಗನವಾಡಿ ನೌಕರರು ತಮ್ಮ ಶ್ರಮಕ್ಕೆ ಫಲದ ಭಾಗವಾಗಿ ಹೆಚ್ಚಳ ಕೇಳುತ್ತಿರುವುದು.

ವೇತನ ಹೆಚ್ಚಳ ಮತ್ತು ಉಚಿತ ಕೊಡುಗೆ ಎರಡು ಒಂದೆ ಅಲ್ಲ ಎಂಬುವುದನ್ನು ಈ ಮೂಲಕ ಹೇಳಲು ಇಚ್ಚಿಸುತ್ತವೆ.

ಮೇಲ್ಕಂಡ ಬೇಡಿಕೆಗಳಿಗಾಗಿ ರಾಜ್ಯದಲ್ಲಿ ಅಂಗನವಾಡಿ ನೌಕರರ ಎಲ್ಲಾ ಸಂಘಗಳು ಜಂಟಿಯಾಗಿ ಜುಲೈ 10 ರಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ(CDPO) ಕಛೇರಿಗಳ ಮುಂದೆ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಸಂಘರ್ಷಕ್ಕೆ ಎಡೆ ಮಾಡಿಕೊಡದೆ ಮಾತುಕತೆಯ ಮುಖಾಂತರ ಈ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಈ ಮೂಲಕ ವಿನಂತಿಸುತ್ತೆವೆ ಎಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಲಾಯಿತು.

ಎಸ್‌.ವರಲಕ್ಷ್ಮಿ – ಅಧ್ಯಕ್ಷರು, ರಾಜ್ಯ (CITU)ಜಿ.ಆರ್.ಶಿವಶಂಕರ್-ಅಧ್ಯಕ್ಷರು(TUCC) ಅಮ್ಜದ್. ಬಿ- ಅಧ್ಯಕ್ಷರು(AITUC), ಹೆಚ್.ಎಸ್.ಸುನಂದ- ಪ್ರಧಾನ ಕಾರ್ಯದರ್ಶಿCITU), ಎಮ್.ಜಯಮ್ಮ-ಪ್ರಧಾನ ಕಾರ್ಯದರ್ಶಿ(AITUC), ನಾಗರತ್ನ- ಪ್ರಧಾನ ಕಾರ್ಯದರ್ಶಿ(TUCC) ಗಿರಿಜಾ-ಜಿಲ್ಲಾಧ್ಯಕ್ಷರು(AITUC),ಪ್ರೇಮಾ-ಅಧ್ಯಕ್ಷರು(ಸ್ವತಂತ್ರ ಸಂಘಟನೆ) ಮತ್ತು ಉಮಾಮಣಿ-ಪ್ರಧಾನ ಕಾರ್ಯದರ್ಶಿ(ಸ್ವತಂತ್ರ ಸಂಘಟನೆ) ಪತ್ರಿಕಾ ಗೋಷ್ಥಿಯಲ್ಲಿ ಹಾಜರಿದ್ದರು.