ಅರಸೀಕೆರೆ : ಅರಸೀಕೆರೆ ನಗರ ಪೊಲೀಸ್ ಠಾಣೆ ವತಿಯಿಂದ ಇಂದು ನಗರದ ಎಲ್ಲಾ ದ್ವಿಚಕ್ರ ವಾಹನ ರಿಪೇರಿ ಮಾಲೀಕರಿಗೆ ಸಭೆಯ ಏರ್ಪಡಿಸಲಾಗಿತ್ತು. ಈ ಸಭೆ ಸರ್ಕಲ್ ಇನ್ಸ್ಪೆಕ್ಟರ್ ಗಂಗಾಧರ್ ಹಾಗೂ ಸಬ್ ಇನ್ಸ್ಪೆಕ್ಟರ್ ಲತಾ. ಎನ್. ಜೆ ರವರು ದ್ವಿಚಕ್ರ ವಾಹನ ರಿಪೇರಿ ಮಾಲೀಕರು ಯಾವುದೇ ದ್ವಿಚಕ್ರ ವಾಹನಗಳಿಗೆ ಕರ್ಕಶ ಸೈಲೆನ್ಸರ್ ಅಳವಡಿಕೆ, ಅಪರಿಚತರು ದ್ವಿಚಕ್ರ ವಾಹನಗಳು ತಂದುಕೊಟ್ಟರೆ ನಂಬರ್ ಪ್ಲೇಟ್ ಅಳವಡಿಸುವುದು, ಕಳ್ಳತನ ವಾಹನ ಮಾರಾಟ ಮಾಡುವುದು ಕಾನೂನುಬಾಹಿರ ಆದ್ದರಿಂದ ಈ ರೀತಿಯ ಯಾವುದೇ ಕಾರ್ಯ ಮಾಡದಂತೆ ದ್ವಿಚಕ್ರ ವಾಹನ ರಿಪೇರಿ ಮಾಲೀಕರಿಗೆ ಸಲಹೆ ನೀಡಿದರು.