ಡಿಸಿಎಂ ಡಿ ಕೆ ಶಿವಕುಮಾರ್ ಅವರು ಭಾರತ-ಫ್ರೆಂಚ್ ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿ (IFCCI) ಪ್ರತಿನಿಧಿಗಳ ಜತೆ ಕುಮಾರಕೃಪಾ ಅತಿಥಿ ಗೃಹದಲ್ಲಿ ಶುಕ್ರವಾರ ಸಮಾಲೋಚನೆ ನಡೆಸಿದರು. ಮಂಡಳಿಯ ಸಾರ್ವಜನಿಕ ವ್ಯವಹಾರಗಳ ಸಲಹೆಗಾರ ಹಾಗೂ ಲೂಮಿಪ್ಲ್ಯಾನ್ ಸಂಸ್ಥೆಯ ಎಂಡಿ, ಸಿಇಓ ಶಾನ್ ವೆಂಕಟ್, ದಸ್ಸಾಲ್ಟ್ ಸಿಸ್ಟಮ್ಸ್ ಎಂಡಿ ದೀಪಕ್, ಸೀನಿಯರ್ ಸೇಲ್ಸ್ ಮ್ಯಾನೇಜರ್ ರಾಜಶೇಖರ್ ಸ್ವಾಮಿ, IFCCI ಭಾರತದ ಉಪಾಧ್ಯಕ್ಷ ಪ್ರಿಯಾಂಕ್, ಜೆ.ಸಿ. ಡೇಕಕ್ಸ್ ಸಂಸ್ಥೆಯ ಎಂ.ಡಿ. ಫ್ರೆಡಿರಿಕ್ ಬ್ರನ್, ಕಾರ್ಯನಿರ್ವಾಹಕ ಅಧ್ಯಕ್ಷ ಪ್ರಮೋದ್ ಭಂದುಲಾ, ಅಷ್ಟ್ರಕ್ಸ್ ಸ್ಥಾಪಕ ಮತ್ತು ಸಿಇಓ ಫ್ರೆಡಿರಿಕ್ ಮೆರಿ ಲಾಕೊಲ್ಲೆ, ಅಸ್ಟೋಮ್ ಸಂಸ್ಥೆಯ ಭಾರತದ ಎಂಡಿ ಭಾರತದ ಎಂಡಿ ಒಲಿವರ್ ಲೂಸಿನ್, ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್, ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ, ಬಿಡಿಎ ಕಾರ್ಯದರ್ಶಿ ಶಾಂತರಾಜು, ಟೌನ್ ಪ್ಲಾನಿಂಗ್ ಜಂಟಿ ನಿರ್ದೇಶಕ ನಾರಾಯಣಗೌಡ ಮತ್ತಿತರರು ಭಾಗವಹಿಸಿದ್ದರು.