*ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ‘ಬೆಂಗಳೂರು ಆರ್ಟ್ಸ್ ಆಂಡ್ ಕ್ರಾಫ್ಟ್ ಮೇಳ*
ಬೆಂಗಳೂರು, ಜುಲೈ 7, 2023: ಗ್ರ್ಯಾಂಡ್ ಫ್ಲಿಯಾ ಮಾರ್ಕೆಟ್ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ ಬೆಂಗಳೂರು ಆರ್ಟ್ಸ್ ಆಂಡ್ ಕ್ರಾಫ್ಟ್ ಮೇಳವು ಜುಲೈ 7ರಿಂದ ಜುಲೈ 16ರವರೆಗೆ 10 ಹತ್ತು ದಿನಗಳ ಕಾಲ ನಡೆಯಲಿದೆ.
ಇನ್ನು ಈ ಮೇಳವನ್ನು ನಟಿ ಹಾಗೂ ರೂಪದರ್ಶಿಯರಾದ ಭೂಮಿ ಶೆಟ್ಟಿ ಹಾಗೂ ದೀನಾ ಪೂಜಾರಿ ಅವರು ಉದ್ಘಾಟಿಸಿ ಸಂಭ್ರಮ ಪಟ್ಟರು.
ನಟಿ ಭೂಮಿ ಈ ಮೇಳದ ಕುರಿತು ಮಾತನಾಡುತ್ತಾ “ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ರತಿಯೊಬ್ಬ ಕಲಾವಿದನು ಕೂಡ ತಮ್ಮ ಕಲಾ ಪ್ರದರ್ಶನವನ್ನು ಈ ಮೇಳದಲ್ಲಿ ಮಾಡಿದ್ದಾರೆ. ಇಲ್ಲಿ ವಿನೂತನ ವಿನ್ಯಾಸದ ಆಭರಣಗಳು, ಉಡುಪುಗಳು, ಕರಕುಶಲ ವಸ್ತುಗಳನ್ನು ನೋಡಬಹುದು. 10 ದಿನಗಳ ಕಾಲ ಈ ಮೇಳ ನಡೆಯಲಿದ್ದು ಎಲ್ಲರೂ ಭಾಗವಹಿಸಿ ಹಾಗೇ ನಮ್ಮ ಬೆಂಬಲವನ್ನು ಪ್ರತಿಯೊಬ್ಬ ಕಲಾವಿದರಿಗೂ ನೀಡೋಣ” ಎಂದರು.
ಇನ್ನು ದೀನಾ ಪೂಜಾರಿಯವರು ಈ ಮೇಳದ ಕುರಿತು ತಮ್ಮ ಮಾತುಗಳನ್ನು ಹಂಚಿಕೊಂಡಿದ್ದು ಹೀಗೆ “ಈ ಮೇಳದಲ್ಲಿ ಭಾಗವಹಿಸುವುದಕ್ಕೆ ಬಹಳ ಖುಷಿಯಾಗುತ್ತಿದೆ. ಭಾರತದಾದ್ಯಂತ ಇರುವ ಕರಕುಶಲ ವಸ್ತುಗಳು ಇಲ್ಲಿ ಒಂದೇ ಸೂರಿನಡೀ ಲಭ್ಯವಿದೆ ಎಲ್ಲವೂ ಒಂದುಕ್ಕಿಂತ ಒಂದು ಸುಂದರವಾಗಿದೆ. ರಾಜಸ್ತಾನಿ ಬೆಡ್ ಶೀಟ್ ಗಳು, ಆಭರಣಗಳು, ಕಲಾಕೃತಿಗಳು ಎಲ್ಲವೂ ಇಲ್ಲಿ ಸಿಗಲಿವೆ. ಎಲ್ಲರೂ ತಪ್ಪದೇ ಈ ಮೇಳಕ್ಕೆ ಭೇಟಿ ನೀಡಿ” ಎಂದು ಹೇಳಿದರು.
10 ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ಬಗೆ ಬಗೆಯ ಕರಕುಶಲ ವಸ್ತುಗಳು, ಅಲಂಕಾರಿಕ ವಸ್ತುಗಳು, ನಾನಾ ವಿನ್ಯಾಸದ ಉಡುಪುಗಳು, ಆಟಿಕೆಗಳು ಸೇರಿದಂತೆ ಬೆಂಗಳೂರಿನ ಜನತೆಗೆ ಮುದ ನೀಡುವಂತಹ ನಾನಾ ಬಗೆಯ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯಲಿದೆ. ಹೆಂಗಳೆಯರ ಆಕರ್ಷಣೆಗೆಂದು ಆಭರಣಗಳು, ಬೆಡ್ ಲೈನೆನ್, ಕಲಾಕೃತಿಗಳು, ಪೀಠೋಪಕರಣಗಳು, ಮ್ಯಾಟ್ ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಈ ಪ್ರದರ್ಶನದಲ್ಲಿರಲಿವೆ.
ಸ್ಥಳ: ಚಿತ್ರಕಲಾ ಪರಿಷತ್
ದಿನಾಂಕ: ಜುಲೈ 7 ರಿಂದ ಜುಲೈ 16 ರವರೆಗೆ
ಸಮಯ-ಬೆಳಿಗ್ಗೆ 11.30ರಿಂದ