ಬೆಂಗಳೂರು: ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ, ನಿರ್ಮಾಪಕ ಹಾಗೂ ಗೀತರಚನಾಕಾರರಾಗಿದ್ದಂತ ಸಿ.ವಿ ಶಿವಶಂಕರ್ (90) ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಮೂಲಕ ಇನ್ನಿಲ್ಲವಾಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಬೆಳದಿದೆ ನೋಡಾ ಬೆಂಗಳೂರು, ನಾ ನೋಡಿ ನಲಿಯುವ ಕಾರವಾರ, ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ, ಹೋಗದಿರಿ ಸೋದರರೇ ಸೇರಿದಂತೆ ವಿವಿಧ ಪ್ರಸಿದ್ಧ ಗೀತೆಗಳ ಹಿಂದಿನ ರಚನಾಕಾರರಾಗಿದ್ದವರು ಸಿ.ವಿ ಶಿವಶಂಕರ್.

ಇಂದು ಅವರು ಪೂಜೆ ಮುಗಿಸಿ, ಮನೆಯಲ್ಲಿ ಇದ್ದಾಗ ಹೃದಯಾಘಾತಕ್ಕೆ ಒಳಗಾಗಿ ದಿಢೀರ್ ಸಾವನ್ನಪ್ಪಿದ್ದಾರೆ. ನಟನಾಗಿ, ಗೀತರಚನಾಕಾರರಾಗಿ, ನಿರ್ದೇಶಕ, ನಿರ್ಮಾಪಕರಾಗಿದ್ದಂತ ಸಿ.ವಿ ಶಿವಶಂಕರ್ ಇನ್ನಿಲ್ಲವಾಗಿದ್ದಾರೆ.

ಸಿ.ವಿ ಶಿವಶಂಕರ್ ನಮ್ಮಊರು, ಮನೆ ಕಟ್ಟಿ ನೋಡು, ಕನ್ನಡದ ಕುವರ ಸೇರಿದಂತೆ ವಿವಿಧ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಎಳೆಯರ ಗೆಳೆಯರು ಎಂಬ ಕಿರುಚಿತ್ರ ಕೂಡ ಮಾಡಿದದರು. ರಾಣಿ-ರಾಜು ಬಿಎ, ಆರೋಗ್ಯ ಪಿಶಾಟಿ ಸೇರಿದಂತೆ ಕೆಲ ನಾಟಕ ರಚಿಸಿದ್ದರು.

ಇಂತಹ ಸಿ.ವಿ ಶಿವಶಂಕರ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ರಾಜ್ ಕುಮಾರ್ ಪ್ರಶಸ್ತಿ ಕೂಡ ಸಂದಿತ್ತು.