ದೆಹಲಿಯಲ್ಲಿ ಸಿನಿಮೀಯ ಶೈಲಿಯಲ್ಲಿ ದರೋಡೆ: ಬೆಚ್ಚಿಬಿದ್ದ ದೆಹಲಿ ಜನತೆ
ರಾಷ್ಟ್ರ ರಾಜಧಾನಿ ದೆಹಲಿಯ ಪ್ರಗತಿ ಮೈದಾನ್ ಸುರಂಗ ರಸ್ತೆಯಲ್ಲಿ "ಥಕ್ ಥಕ್" ಗ್ಯಾಂಗ್ ಖದೀಮರು ದರೋಡೆ ಮಾಡಿದ್ದಾರೆ. 2 ಬೈಕ್ ಗಳಲ್ಲಿ ಬಂದ ನಾಲ್ವರು ದರೋಡೆಕೋರರು ಚಲಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ, ಗನ್ ತೋರಿಸಿ ಕಾರಿನಲ್ಲಿದ್ದ ಬ್ಯಾಗ್ ಎಗರಿಸಿ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ.