ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬೆಂಗಳೂರು ಉತ್ತರ ಭಾಗದ ತುಮಕೂರು ರಸ್ತೆಯಿಂದ ಹೊಸೂರು ರಸ್ತೆವರೆಗಿನ 65 ಕಿ.ಮೀ ಉದ್ದದ ಪೆರಿಪೆರಲ್ ರಿಂಗ್ ರಸ್ತೆ ನಿರ್ಮಾಣ ಯೋಜನೆಗಾಗಿ 1818 ಎಕರೆ ರೈತರ ಜಮೀನುಗಳಿಗೆ 2005-2006 ರಲ್ಲಿ ಪ್ರಾರಂಭಿಕ ಅಧಿಸೂಚನೆ ಮತ್ತು 2007 ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು.

2006 ರಿಂದ 2023 ರವರೆಗೆ 18 ವರ್ಷಗಳೂ ಕಳೆದರೂ ಭೂ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿರುವುದಿಲ್ಲ, ಜಮೀನಿನ ಮಾಲೀಕರುಗಳಿಗೆ ಯಾವುದೇ ರೀತಿಯ ಪರಿಹಾರ ನೀಡಿರುವುದಿಲ್ಲ ಹಾಗೂ ಪರಿಸರ ಇಲಾಖೆ ಸೇರಿದಂತೆ ಸಂಬಂಧಪಟ್ಟ ಯಾವುದೇ ಇಲಾಖೆಗಳಿಂದ ಅನುಮತಿ ಸಹ ಪಡೆದುಕೊಂಡಿರುವುದಿಲ್ಲ, ಈ ಯೋಜನೆ ರೂಪಿಸಲು 18 ವರ್ಷಗಳ ವಿಳಂಬವಾಗಿದ್ದು ಯಾವುದೇ ರೀತಿಯ ಕಾರ್ಯಭಿವೃದ್ಧಿ ಪ್ರಗತಿ ನಡೆದಿಲ್ಲಾವಾದ್ದರಿಂದ, ಭೂ ಸ್ವಾಧೀನ ಕಾಯ್ದೆ ಹಾಗೂ ಬಿ.ಡಿ.ಎ ಕಾಯ್ದೆ ಪ್ರಕಾರ ತನ್ನ ತಾನೆ ಯೋಜನೆ ರದ್ದಾಗುವುಂತೆ ಕಾಯ್ದೆ ಹೇಳುತ್ತದೆ.

ಬಿ.ಡಿ.ಎ. ಮನಃ 2022 ರಲ್ಲಿ ಹೆಚ್ಚುವರಿಯಾಗಿ 750 ಜಮೀನನ್ನು ಮಿಸ್ಸಿಂಗ್ ಲಿಂಕ್, ನೈಸ್ ಇಂಟಿಗ್ರೇಷನ್, ಟೋಲ್, ಪ್ಲಾಜಾ ಇತರೆ ಯೋಜನೆಗಳಿಗೆ ಭೂ ಸ್ವಾಧೀನ ಪಡಿಸಿಕೊಳ್ಳಲು ಪತ್ರಿಕಾ ಪ್ರಕಟಣೆ ಹೊರಡಿಸುವ ಮೂಲಕ ವಿಳಂಬ ನೀತಿ ಅನುಸರಿಸುತ್ತಿದೆ.

ಜಮೀನುಗಳಾಗಿ ಪರಿವರ್ತನೆಯಾಗಿದೆ, 2006 ರಲ್ಲಿ ಪಿ.ಆರ್.ಆರ್ ರಸ್ತೆ ಸಾರ್ವಜನಕರಿಗೆ ರಸ್ತೆ ಅವಶ್ಯಕತೆ ಯಿತ್ತಾದರೂ ಹಿಂದಿನ ಸರ್ಕಾರಗಳು ರಸ್ತೆ ರೂಪಿಸಬಹುದಿತ್ತು, ಆದರೆ ಈಗ ಸಾವಿರಾರು ಮನೆ ಕಟ್ಟಡಗಳು, ಖರೀದಿಸಿರುವ ಬಡಾವಣೆಗಳ ನಿವೇಶನಗಳು ಸೇರಿದಂತೆ ಅಭಿವೃದ್ಧಿ ಹೊಂದಿರುವಂತಹ ಯೋಜನೆಯಿಂದ ಲಕ್ಷಾಂತರ ಮರಗಳು, ಜಲಮೂಲ 6 ಕೆರೆಗಳು, ನಾಶವಾಗಿ ವಾಹನಗಳ ಸಂಚಾರ ದಟ್ಟನೆಯಿಂದ ನಗರದ ಪರಿಸರ ಮಾಲಿನ್ಯ ಉಂಟಾಗುವ ಆತಂಕ ಎದುರಾಗಲಿದೆ. ಹಾಗೂ 17 ಕಡೆಗಳಲ್ಲಿ ಪೆಟ್ರೋನೆಂಟ್ ಗ್ಯಾಸ್ ಪೈಪ್ ಲೈನ್ ಸಹ ಸಂಪರ್ಕ ಹೊಂದುತ್ತದೆ. ಮತ್ತು ಈ ಯೋಜನೆಗೆ ಒಳಪಡುವ ಹಳ್ಳಿಗಳ ವ್ಯಾಪ್ತಿಯು ಅಭಿವೃದ್ಧಿ ಹೊಂದಿದ್ದು, ಜಮೀನುಗಳ ಮಾರುಕಟ್ಟೆ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಸುಮಾರು 17 ಪಾಲಿಕೆ ವಾರ್ಡ್‌ಗಳು ಸೇರ್ಪಡೆಯಾಗಿದ್ದು, ಇಲ್ಲಿಯೂ ಕೂಡ ಜಮೀನಿನ ಮಾರುಕಟ್ಟೆ ಬೆಲೆ ಪ್ರತಿ ಎಕರೆಗೆ 10 ರಿಂದ 14 ಕೋಟಿಗಳಷ್ಟು ದುಬಾರಿಯಾಗಿರುತ್ತದೆ. ಪ್ರಾಧಿಕಾರ ಹಾಗೂ ಹಿಂದಿನ ಸರ್ಕಾರಗಳು ಈ ಯೋಜನೆ ರೂಪಿಸಲು ಪರಿಹಾರ ಹಾಗೂ ಕಾಮಗಾರಿ ವೆಚ್ಚ ತಗಲುವ ವೆಚ್ಚ ಭರಿಸುವ ಎಲ್ಲಾ ಪ್ರಯತ್ನಗಳು ವಿಫಲವಾಗಿರುತ್ತದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಯೋಜನೆ ರೂಪಿಸುವುದು ಸಮಂಜಸವಲ್ಲವೆಂಬುವುದು ಸಂಘ ಹಾಗೂ ಅನೇಕ ರಂಘಗಳ ತಜ್ಞರು ಅಭಿಪ್ರಾಯ ಪಟ್ಟಿರುತ್ತಾರೆ. ಆದ್ದರಿಂದ

ತೀರ್ಮಾನಿಸಬೇಕಾದ ಎರಡು ವಿಷಯಗಳು

ಗೌರವನ್ನಿತ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಮನ ಮೋಹನ್ ಸಿಂಗ್ ರವರ ನೇತೃತ್ವದ ಕೇಂದ್ರ ಸರ್ಕಾರ 2013 ರ ಸಂಸತ್ತು ಅಧಿವೇಶನದಲ್ಲಿ ದೇಶದ ಎಲ್ಲಾ ರೈತರ ಹಿತಾದೃಷ್ಠಿಯಿಂದ, ಭೂ ಪರಿಹಾರ ಹಾಗೂ ಪುನರ್‌ವಸತಿ, ಭೂ ಸ್ವಾಧೀನ ಕಾಯ್ದೆ 2013 ರನ್ನು ಜಮ್ಮು ಕಾಶ್ಮೀರ ರಾಜ್ಯ ಹೊರತುಪಡಿಸಿ ಇಡೀ ಭಾರತದ ಎಲ್ಲಾ ರಾಜ್ಯಗಳಿಗೂ ಅನ್ವಯವಾಗುವಂತೆ ಕಾಯ್ದೆ ರೂಪಿಸಿತ್ತು, “ಈ ಕಾಯ್ದೆಯಂತೆಯೇ ಜಮೀನಿನ ರೈತರು 53504 ಹಾಗೂ ನಿವೇಶನದಾರರಿಗೆ ಭೂ ಪರಿಹಾರ ಹಾಗೂ ಸನರ್‌ವಸತಿ ನೀಡಿ. ಪಿ.ಆರ್‌.ಆ‌ ಯೋಜನೆ ರೂಪಿಸುವಂತೆ ತಿರ್ಮಾನಿಸಿ ಘೋಷಿಸಬೇಕು.

ಅಥವಾ

ಈಗಾಗಲೇ ಈ ಯೋಜನೆ ಅಧಿಸೂಚನೆಯಾಗಿ 18 ವರ್ಷಗಳಾಗಿದ್ದು ಯಾವುದೇ ಪ್ರಕ್ರಿಯೆ ಪ್ರಗತಿ ಕಾಣದೇ ವಿಳಂಬವಾಗಿರುವ ಕಾರಣ ಹಾಗೂ ತಮ್ಮ ತಮ್ಮ ಜಮೀನುಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾಣದೇ ಆರ್ಥಿಕ/ಸಾಮಾಜಿಕ ಶೈಕ್ಷಣಿಕವಾಗಿಯೂ ರೈತರು ಹಾಗೂ ನಿವೇಶನಗಳ ಕುಟುಂಬಗಳು ಬೀದಿ ಪಾಲಾಗುತ್ತಿವೆ.