ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮದ   ಪಾರಂಪರಿಕ ಕಟ್ಟಡಗಳ ಮೇಲೆ ಪ್ರವಾಸಿಗರು ಹತ್ತಿದ್ದಾರೆ. ಯೋಗ ನಂದೀಶ್ವರ ದೇಗುಲದ ಮುಂಭಾಗದ ಪಾರಂಪರಿಕ ಕಟ್ಟಡಗಳ ಮೇಲೆ ಪ್ರವಾಸಿಗರು ಹತ್ತಿದ್ದಾರೆ.

  ವಾರಾಂತ್ಯದಲ್ಲಿ ನಂದಿ ಗಿರಿಧಾಮಕ್ಕೆ ಹೆಚ್ಚು ಪ್ರವಾಸಿಗರು ಹೋಗುತ್ತಾರೆ. ಈ ವೇಳೆ ಪಾರಂಪರಿಕ ಕಟ್ಟಡಗಳ ಮೇಲೆ ಹತ್ತುವುದು ಸರ್ವೇ ಸಾಮಾನ್ಯವಾಗಿದೆ. ಕಟ್ಟಡಗಳ ಮೇಲೆ ಹತ್ತುವುದು ಅಪಾಯಕಾರಿಯೂ ಆಗಿದೆ. ಆದರೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸವೇ ಸರಿ.