ಬೆಂಗಳೂರು: ಪಠ್ಯ ಪರಿಷ್ಕರಣೆ ಕುರಿತಂತೆ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಪೋಷಕರಲ್ಲಿ ಗೊಂದಲ ಮೂಡಿದೆ. ಹೊಸ ಪಠ್ಯ ಪುಸ್ತಕಗಳು ಬರುವವರೆಗೂ ಹಳೆಯ ಪಠ್ಯ ಪುಸ್ತಕಗಳನ್ನೇ ಕೊಳ್ಳಬೇಕೇ ಅಥವಾ ಹೊಸ ಪುಸ್ತಕಗಳಿಗಾಗಿ ಕಾಯಬೇಕೆ ಎಂಬ ಬಗ್ಗೆ ಶಾಲಾ ವಿದ್ಯಾರ್ಥಿಗಳ ಪೋಷಕರಲ್ಲಿ ಗೊಂದಲ ಉಂಟಾಗಿದೆ.
'ಈಗಾಗಲೇ ಹಳೆಯ ಪಠ್ಯ ಪುಸ್ತಕ ಕೊಂಡಿದ್ದೇವೆ. ಮತ್ತೆ ಪಠ್ಯ ಪರಿಷ್ಕರಣೆ ಆದರೆ ಹೊಸದಾಗಿ ಪುಸ್ತಕ ಕೊಳ್ಳಬೇಕಾಗುತ್ತದೆಯೇ ಎಂಬ ಬಗ್ಗೆ ಶಾಲಾ ಶಿಕ್ಷಕರಿಗೂ ಮಾಹಿತಿ ಇಲ್ಲ. ಈ ಗೊಂದಲವನ್ನು ಸರ್ಕಾರ ಆದಷ್ಟು ಬೇಗ ನಿವಾರಿಸಬೇಕು' ಎಂದು ಕೋಣನಕುಂಟೆಯ ಕಪ್ಪಣ್ಣ ಹೇಳಿದರು.