ಬೆಂಗಳೂರು, ಫೆಬ್ರವರಿ 6, 2026: ಬೈಕ್ ಟ್ಯಾಕ್ಸಿಯಿಂದ ಆಟೋ, ಕಾರ್ ಹಾಗೂ ಗುಡ್ಸ್ ವಾಹನದ ಚಾಲಕರಿಗೆ ತೊಂದರೆ ಯಾಗುತ್ತಿದ್ದೂ*ಇಂಡಿಯನ್ ವೆಹಿಕಲ್ಸ್ ಡ್ರೈವರ್ ಟ್ರೇಡ್ ಯೂನಿಯನ್* ಹಾಗೂ *ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್* ಗಳು ತಕ್ಷಣ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿವೆ. ಮೋಟಾರ್ ವಾಹನಗಳ ಕಾಯ್ದೆ, 1988ರಲ್ಲಿ “ಬೈಕ್ ಟ್ಯಾಕ್ಸಿ”ಗೆ ಯಾವುದೇ ಸ್ಪಷ್ಟ ಹಾಗೂ ನೇರ ಅನುಮತಿ ಇಲ್ಲ. ಸುರಕ್ಷತಾ ವ್ಯವಸ್ಥೆಗಳಿಲ್ಲದ ದ್ವಿಚಕ್ರ ವಾಹನಗಳನ್ನು ವಾಣಿಜ್ಯ ಪ್ರಯಾಣಿಕರ ಸಾರಿಗೆಗೆ ಬಳಸುವುದು ಸಾರ್ವಜನಿಕ ಜೀವಭದ್ರತೆಗೆ ಗಂಭೀರ ಅಪಾಯಕಾರಿಯಾಗಿದೆ ಎಂದು ಚಾಲಕರ ಸಂಘಟನೆ ಗಳು ತಿಳಿಸಿದ್ದಾವೆ. ಅಪಘಾತ ಅಂಕಿ ಅಂಶಗಳನ್ನೇ ಗಮನಿಸಿದರೂ, ಬೈಕ್ ಟ್ಯಾಕ್ಸಿ ಗಳಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು ಎನ್ನುವುದು ಸ್ಪಷ್ಟವಾಗಿದೆ. ಪರವಾನಗಿ ಪಡೆಯುವುದು ಮೂಲಭೂತ ಹಕ್ಕು ಅಲ್ಲ ಎಂಬುದನ್ನು ಮಾನ್ಯ ಸುಪ್ರೀಂ ಕೋರ್ಟ್ ಹಲವು ತೀರ್ಪುಗಳಲ್ಲಿ ಸ್ಪಷ್ಟಪಡಿಸಿದ್ದು, ಸಾರ್ವಜನಿಕ ಹಿತಾಸಕ್ತಿಗಾಗಿ ಸಾರಿಗೆ ವ್ಯವಸ್ಥೆಯನ್ನು ನಿಯಂತ್ರಿಸುವ ಸಂಪೂರ್ಣ ಅಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ. ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡುವುದರಿಂದ ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ಉಂಟಾಗುವುದರ ಜೊತೆಗೆ, ರಸ್ತೆ ಅಪಘಾತಗಳ ಪ್ರಮಾಣ ಹೆಚ್ಚಳವಾಗುವ ಭೀತಿ ಇದೆ. ಅಲ್ಲದೆ, ನಿಯಮಾನುಸಾರ ಪರವಾನಗಿ ಪಡೆದು ತೆರಿಗೆ ಕಟ್ಟುವ ಆಟೋ–ಟ್ಯಾಕ್ಸಿ ಚಾಲಕರ ಜೀವನೋಪಾಯಕ್ಕೂ ಭಾರೀ ಹೊಡೆತ ಬೀಳಲಿದೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಚಾಲಕರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ಚಾಲಕ ಸಂಘಟನೆಗಳು ಎಚ್ಚರಿಸಿವೆ. ಈ ಕೂಡಲೇ,ಬೈಕ್ ಟ್ಯಾಕ್ಸಿ ಯ ವಿಚಾರವಾಗಿ ಕೇಂದ್ರ ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಬೇಕು. ಪತ್ರಿಕಾ ಪ್ರಕಟಣೆ ಯಲ್ಲಿ *ಇಂಡಿಯನ್ ವೆಹಿಕಲ್ಸ್ ಡ್ರೈವರ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ, ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷ ಸ್ನೇಹಜೀವಿ ಸಂತೋಷ್ ಕುಮಾರ್, ಹಾಗೂ ರಾಜ್ಯ ಪ್ರಧಾನಕಾರ್ಯದರ್ಶಿ ರಾಜು ಕನ್ನಡಿಗ ಅವರು ತಿಳಿಸಿದ್ದಾರೆ.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
सुदर्शन गैजेट स्टोर का वेस्ट पटेल नगर दिल्ली में हुआ भव्य शुभारंभ
सुदर्शन गैजेट स्टोर का वेस्ट पटेल नगर दिल्ली में हुआ भव्य शुभारंभ
बूंदी के प्रसिद्ध सुदर्शन...
आंगनबाड़ी कार्यकर्ताओं की हड़ताल के बाद पन्ना कलेक्टर का नया आदेश , आंगनबाड़ी सेवाएं किसी भी स्थिति में ना हो बाधित
----
कलेक्टर श्री संजय कुमार मिश्र ने आंगनबाड़ी कार्यकर्ताओं, मिनी आंगनबाड़ी कार्यकर्ताओं और...
અમદાવાદ માં 'બ્રહ્માસ્ત્ર' નું શાનદાર screening યોજાયું,જાણો કાસ્ટથી લઇને Story સુધીની તમામ જાણકારી
અમદાવાદ માં 'બ્રહ્માસ્ત્ર' નું શાનદાર screening યોજાયું,જાણો કાસ્ટથી લઇને Story સુધીની તમામ જાણકારી
અમદાવાદ સિવિલ મેડિસીટીની કિડની ઇન્સ્ટીટ્યુટને મળી ગર્ભાશયના ટ્રાન્સપ્લાન્ટની પરવાનગી
અમદાવાદ સિવિલ મેડિસીટીની કિડની ઇન્સ્ટીટ્યુટને ગર્ભાશયના પ્રત્યારોપણની પરવાનગી મળી છે. હવેથી કિડની...
Union Home Minister Amit Shah offers prayers in Gurudwara in Maharashtra's Nanded.
Union Home Minister Amit Shah offers prayers at Tathat Sachkhand Shri Hazur Abchalnagar Sahib in...