ಬಿ.ಸೋಮಶೇಖರ್ ಅಭಿಮಾನಿ ಬಳಗದ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ, ಪೌರ ಕಾರ್ಮಿಕರಿಗೆ ಬೆಡ್ ಶೀಟ್, ಸೀರೆ ವಿತರಣೆ, ರಕ್ತದಾನ ಶಿಬಿರ, ಶಾಲಾಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ ಸಮಾರಂಭ

ಜಯನಗರ: ಬಿ.ಸೋಮಶೇಖರ್ ಅಭಿಮಾನಿ ಬಳಗದ ವತಿಯಿಂದ ರಾಜ್ಯ ಬಿಜೆಪಿ ಒಬಿಸಿ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿ ಮಾಜಿ ಸದಸ್ಯರಾದ ಬಿ.ಸೋಮಶೇಖರ್ ರವರು ಹುಟ್ಟುಹಬ್ಬದ ಅಚರಣೆಯನ್ನು ಅರ್ಥಪೂರ್ಣವಾಗಿ ಅಭಿಮಾನಿಗಳು, ಸ್ನೇಹಿತರು ನಡುವೆ ಅಚರಿಸಲಾಯಿತು.

ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ, ಪೌರ ಕಾರ್ಮಿಕರಿಗೆ ಬೆಡ್ ಶೀಟ್, ಮತ್ತು ಮಹಿಳೆಯರಿಗೆ ಸೀರೆ ವಿತರಣೆ, ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್, ಆಟೋ ಚಾಲಕರಿಗೆ ಸಮವಸ್ತ್ರ ಬಿ.ಸೋಮಶೇಖರ್ ರವರು, ಶ್ರೀಮತಿ ಮಾಲತಿ ಸೋಮಶೇಖರ್ ರವರು ವಿತರಿಸಿದರು.

ಮಾಜಿ ಮಹಾಪೌರರಾದ ಎಸ್.ಕೆ.ನಟರಾಜ್, ಮಾಜಿ ಪಾಲಿಕೆ ಸದಸ್ಯರುಗಳಾದ ಎ.ಹೆಚ್.ಬಸವರಾಜ್, ಶ್ರೀಮತಿ ಲಕ್ಷ್ಮಿನಟರಾಜ್, ಗೋವಿಂದನಾಯ್ಡ, ಲಕ್ಷ್ಮಿಕಾಂತ್ , ಕಬ್ಬಾಳ್ ಉಮೇಶ್ ರವರು, ಜಯಕರ್ನಾಟಕ ಸಂಘಟನೆಯ ದೀಪುಗೌಡ ರವರು, ಬಿಜೆಪಿ ಪಕ್ಷದ ಪ್ರಮುಖ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

*ಬಿ.ಸೋಮಶೇಖರ್ ರವರು* ಮಾತನಾಡಿ ಕಾಯಕ ಯೋಗಿ ಶ್ರೀ ಬಸವೇಶ್ವರರು, ದಾಸಶೇಷ್ಠ ಕನಕದಾಸರ ಚಿಂತನೆಗಳು ಆದರ್ಶಗಳನ್ನು ಇಟ್ಟುಕೊಂಡಿರುವ ಬಿಜೆಪಿ ಪಕ್ಷ ಎಲ್ಲ ವರ್ಗ, ಸಮುದಾಯಕ್ಕೆ ಅವಕಾಶ ನೀಡಿದ್ದಾರೆ.

ರಾಷ್ಚ್ರೀಯ ಸ್ವಯಂ ಸೇವಕ ಸಂಘ ನನಗೆ ಶಿಸ್ತ್ರು, ಸಂಘಟನೆ ಮತ್ತು ಹೋರಾಟ ಮತ್ತು ಜನ ಸೇವೆ ಮಾಡಲು ಸ್ಪೂರ್ತಿ, ಪೇರಣೆ ನೀಡಿತು.

ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ,ನನಗೆ ಪಕ್ಷ ಗುರುತಿಸಿ ಎರಡು ಬಾರಿ ಬೃಹತ್ ಮಹಾನಗರ ಪಾಲಿಕೆ ಸದಸ್ಯನಾಗಿ ಜನಸೇವೆ ಮಾಡಲು ಅವಕಾಶ ನೀಡಿತು.

ಬಿಜೆಪಿ ಪಕ್ಷದಲ್ಲಿ ಹಿಂದುಳಿದ ವರ್ಗದವರಿಗೆ ಸರ್ಕಾರ ಆಡಳಿತದಲ್ಲಿ ಇದ್ದಾಗ ಮತ್ತು ಪಕ್ಷದಲ್ಲಿ ಹೆಚ್ಚಿನ ಅವಕಾಶ ನೀಡಿದ್ದಾರೆ.

ಮುಂಬರುವ ಜಿಬಿಎ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಪಂಚ ಪಾಲಿಕೆಗಳಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವುದು ಖಚಿತ ಎಂದು ಹೇಳಿದರು.