ಪತ್ರಕರ್ತರ ಹಕ್ಕುಗಳಿಗಾಗಿ ನಿರಂತರ ಹೋರಾಟ ಮಾಡುತ್ತಿರುವ ಇಂಟರ್ನ್ಯಾಷನಲ್ ಕೌನ್ಸಿಲ್ ಫಾರ್ ಜರ್ನಲಿಸ್ಟ್ ನಿರ್ದೇಶಕ ಬಿನ್ನಿಷ್ ಥಾಮಸ್ ಅವರಿಗೆ ಪತ್ರಕರ್ತರು ಜರ್ನಲಿಸ್ಟ್ ಅಡ್ವೊಕೇಟ್ ಎಂದು ಬಿರುದು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಪತ್ರಕರ್ತರ ಹಕ್ಕುಗಳ ಹೋರಾಟಗಾರ ಬಿನ್ನಿಸ್ ಥಾಮಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತದ ಸ್ಥಾನ 151 ಅಗಿರುವುದು ನಾಚಿಕೆಗೇಡಿನ ವಿಷಯ ಎಂದರು.
ಭಾರತದಲ್ಲಿ ಪತ್ರಕರ್ತರು ಅಭದ್ರತೆಯ ವಾತಾವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪತ್ರಕರ್ತರ ಹಕ್ಕುಗಳ ರಕ್ಷಣೆಗಾಗಿ ಮಸೂದೆ ತರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ. ಈ ಸಂಬಂಧ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದುರು.
ಡಿಸೆಂಬರ್ ನಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಪತ್ರಕರ್ತರ ರಕ್ಷಣಾ ಮಸೂದೆ ಮಂಡಿಸುವ ಸಾಧ್ಯತೆ ಇದೆ ಎಂದು ಬಿನ್ನಿಷ್ ಥಾಮಸ್ ವಿಶ್ವಾಸ ವ್ಯಕ್ತಪಡಿಸಿದರು.
ವೈದ್ಯರು ಹಾಗೂ ವಕೀಲರ ಹಕ್ಕುಗಳ ರಕ್ಷಣೆಗಾಗಿ ಮಸೂದೆ ಜಾರಿಗೆ ತದಿರುವಂತೆ ಪತ್ರಕರ್ತರ ರಕ್ಷಣೆಗಾಗಿ ಮಸೂದೆ ತರಲಾಗುತ್ತದೆ ಎಂದರು.