ಬೆಂಗಳೂರು, ಏಪ್ರಿಲ್ 12, 2025

ಅಸೋಸಿಯೇಷನ್‌ ಆಫ್ ಅಲಯನ್ಸ್ ಕ್ಲಬ್ ಇಂಟ‌ರ್ ನ್ಯಾಷನಲ್ ಡಿಸ್ಟ್ರಿಕ್ಟ್ 272 ವತಿಯಿಂದ ಜಿಲ್ಲೆ ಮಟ್ಟದ ಸಂಪುಟ ಸದಸ್ಯರ ಪದಗ್ರಹಣ ಸಮಾರಂಭ ಬೆಂಗಳೂರು ಗಾಂಧಿನಗರದ ಎಫ್‌ಕೆಸಿಸಿಐ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.

ಅಲಯನ್ಸ್‌ ಕ್ಲಬ್ ಇಂಟರ್ ನ್ಯಾಷನಲ್ ಎಂಬುದು ಭಾರತದ ಸ್ವದೇಶಿ ಸೇವಾ ಸಂಸ್ಥೆಯಾಗಿದ್ದು, ಕಳೆದ 18 ವರ್ಷಗಳಿಂದ ದೇಶದಾದ್ಯಂತ ಶ್ರದ್ಧೆಯುತ ಸಮಾಜಮುಖಿ ಚಟುವಟಿಕೆಗಳನ್ನು ನಿರ್ವಹಿಸುತ್ತಿದೆ. ಇದರ ಪ್ರಧಾನ ಕಚೇರಿ ನವದೆಹಲಿಯ ನೋಯ್ಡಾದಲ್ಲಿ ಇದೆ.

ಈ ವರ್ಷದ ಅಂತಾರಾಷ್ಟ್ರೀಯ ಅಧ್ಯಕ್ಷರಾಗಿರುವ ಅಲಯ್ ರಾಜಕುಮಾರ್ ಸಸ್ಸೇನಾ, ದಕ್ಷಿಣ ಪ್ರಾಂತ್ಯದ ಅಂತಾರಾಷ್ಟ್ರೀಯ ನಿರ್ದೇಶಕರಾಗಿರುವ ಅಲಯ್ ನಾಗರಾಜ್ ವಿ. ಬೈರಿ, ಪಿಐಡಿ ಅಲಯ್ ಜಿ.ಪಿ. ದಿವಾಕರ್, ಐಸಿಸಿ ಅಲಯ್ ಅಜಂತ ಎಸ್. ರಂಗಸ್ವಾಮಿ, ಅಲಯ್ ಎಂ. ಮುನಿಯಪ್ಪ, ಹಾಗೂ ಮಾಜಿ ಶಾಸಕ ಹಾಗೂ ಚಲನಚಿತ್ರ ನಟ ನ.ಲ. ನರೇಂದ್ರಬಾಬು ಅವರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದರು.

ಈ ವರ್ಷ ಏಪ್ರಿಲ್ 1ರಿಂದ ಅಧಿಕಾರ ವಹಿಸಿಕೊಂಡಿರುವ ಜಿಲ್ಲಾ ರಾಜ್ಯಪಾಲ ಅಲಯ್ ಡಾ. ಸತ್ಯವತಿ ಬಸವರಾಜ್ ನೇತೃತ್ವದಲ್ಲಿ ಸಂಪುಟ ಸದಸ್ಯರು ಪದಗ್ರಹಣ ಸ್ವೀಕರಿಸಿದರು.

ಜಿಲ್ಲಾ ಪಿಆರ್‌ಓ ಅಲಯ್ ಶೋಭಾ ವಿಶು ಸಮಾರಂಭದಲ್ಲಿ ಮಾತನಾಡಿ, “ಅಲಯನ್ಸ್‌ ಸಂಸ್ಥೆ ದೇಶ, ರಾಜ್ಯ ಮತ್ತು ಜಿಲ್ಲೆ ಮಟ್ಟದಲ್ಲಿ ಶಿಕ್ಷಣ, ಆಹಾರ ಸೇವೆ, ವೃದ್ಧಾಶ್ರಮ, ಅನಾಥಾಶ್ರಮ, ಆರೋಗ್ಯ ಶಿಬಿರ, ಸ್ವಚ್ಛತಾ ಅಭಿಯಾನ, ಸಸಿ ನೆಡುವಿಕೆ ಮುಂತಾದ ಹಲವಾರು ಸೇವಾ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ, "ಅಲಯನ್ಸ್ ಸಂಸ್ಥೆ ಪ್ರಪಂಚದಾದ್ಯಂತ 28 ದೇಶಗಳಲ್ಲಿ ವಿಸ್ತರಿಸಿಕೊಂಡಿದ್ದು, 2500ಕ್ಕೂ ಹೆಚ್ಚು ಕ್ಲಬ್‌ಗಳು ಮತ್ತು 30,000ಕ್ಕೂ ಹೆಚ್ಚು ಸದಸ್ಯರು ಈ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದಾರೆ. ಬೆಂಗಳೂರು ಜಿಲ್ಲೆ ಕಳೆದ ವರ್ಷ ಪ್ರಾರಂಭವಾಗಿ ಈಗಾಗಲೇ 35 ಕ್ಲಬ್‌ಗಳು ಹಾಗೂ 1000ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ,” ಎಂದು ಹೇಳಿದರು.