ಬೆಂಗಳೂರು, ಏಪ್ರಿಲ್ 4, 2025
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಬೆಂಗಳೂರು ನಗರ ಜಿಲ್ಲಾ ಮದ್ಯ ವ್ಯಾಪಾರಿಗಳ ಸಂಘ'ದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ರಾಜ್ಯ ಸರ್ಕಾರವು 'ಬೆಂಗಳೂರು ನಗರ ಜಿಲ್ಲಾ ಮದ್ಯ ವ್ಯಾಪಾರಿಗಳ ಸಂಘ'ದ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಈಗಾಗಲೇ ಕಾನೂನು ತಿದ್ದುಪಡಿ ಆಗಿರುವ ಆದೇಶಗಳಿಗೆ ಸಂಬಂಧಿಸಿದ ಬೇಡಿಕೆಗಳು
1. 2005 ರಲ್ಲಿ ತಿದ್ದುಪಡಿ ಆಗಿರುವ ಅಬಕಾರಿ ಕಾಯ್ದೆ ಕಲಂ 29 ನ್ನು ಪುನರ್ ವಿಮರ್ಶಿಸಿ ತಿದ್ದುಪಡಿ ಮಾಡುವ ಕುರಿತು ಮನವಿ.
2. ಸರ್ಕಾರಿ ಆದೇಶ ಸಂಖ್ಯೆ ಆಇ/36/ಇಡಬ್ಲ್ಯೂಪಿ/2018, ದಿನಾಂಕ-06/08/2020 ನ್ನು ರದ್ದೂಗೊಳಿಸುವ ಮತ್ತು ಆದೇಶ 20. 2.2.162.2.2-2017, 02-05/07/2018 ಇದನ್ನು ಮಾರ್ಪಾಡು ಮಾಡಿ ರೂಂಗಳನ್ನು ಹೆಚ್ಚಳ ಮಾಡುವ ಕುರಿತು ಮನವಿ.
3. ಎಂ.ಎಸ್.ಐ.ಎಲ್ ನನ್ನದುಗಳ ಕುರಿತು ನ್ಯಾಯ ಸಮ್ಮತವಾದ ತೀರ್ಮಾನ ಕೈಗೊಳ್ಳುವ ಕುರಿತು. ಗ್ರಾಮಾಂತರ ಪ್ರದೇಶಗಳಲ್ಲಿ ಸನ್ನದುಗಳನ್ನು ತೆರೆಯದೇ ನಗರದ ಮದ್ಯಭಾಗದಲ್ಲಿ ತೆರೆಯುತ್ತಿದ್ದಾರೆ. ನಿರೀಕ್ಷಿತ ವ್ಯವಹಾರ ಇಲ್ಲದೆ ಇರುವ ಸನ್ನದುಗಳನ್ನು ಬೇರೆಡೆಗೆ (ಗ್ರಾಮಾಂತರಕ್ಕೆ) ಸ್ಥಳಾಂತರಿಸಬೇಕು.
4. ಮಿಲಿಟರಿ ಕ್ಯಾಂಟೀನ್ ಸ್ಟೋರ್ಗಳ, DUTY FREE ಹೆಸರಿನಲ್ಲಿ ಬರುವ ನಕಲಿ ಮದ್ಯ, ಗೋವಾದಿಂದ ಬರುವ ಮದ್ಯ ಮತ್ತು ನಕಲಿ ಮದ್ಯ ತಯಾರಕರ ಕಳ್ಳಭಟ್ಟಿ ಕೇಂದ್ರಗಳ ಬಗ್ಗೆ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಕುರಿತು. CL8, CLBA ಮತ್ತು CL8B ಸನ್ನದು ಷರತ್ತುಗಳ ಪಾಲನೆಗೆ ಕ್ರಮ ಕೈಗೊಳ್ಳಬೇಕು.
5. ಮದ್ಯ/ಬಿಯರ್ ತಯಾರಿಕಾ ಕಂಪನಿಯವರು ನೀಡುತ್ತಿರುವ ಸ್ತ್ರೀಂಗಳ ಸಂಬಂಧ 11ಎ 3 . (No Distillery, Brewery, Winery shall introduce any discount scheme direct or indirectly for promoting the sale of their product) ಎಮ್.ಆರ್.ಪಿ ದರಕ್ಕಿಂತ ಕಡಿಮೆ ದರದಲ್ಲಿ ಮತ್ತು ಸ್ಟೀಂ ನೀಡುವ ಸನ್ನದುಗಳಿಗೆ ಗರಿಷ್ಠ ದಂಡನೆ ವಿಧಿಸಲು ಕಾನೂನು ರೂಪಿಸುವ 2016 ಕುರಿತು. ಸನ್ನದು ಷರತ್ತಿನಲ್ಲಿ ಇದನ್ನು ನಮೂದಿಸಬೇಕು.
6. ಪೊಲೀಸ್ ಇಲಾಖೆಯ ಹಸ್ತಕ್ಷೇಪ ಮತ್ತು ಅನಗತ್ಯವಾಗಿ ಸನ್ನದುಗಳನ್ನು ಬಂದ್ ಮಾಡುತ್ತಿರುವ ಕುರಿತು ಸರ್ಕಾರ ಮಧ್ಯ ಪ್ರವೇಶಿಸಿ ಇಲಾಖೆಗೆ ಸೂಕ್ತ ನಿರ್ದೇಶನ ನೀಡುವ ಕುರಿತು.
7. ಸನ್ನದುದಾರರಿಗೆ ವಿಧಿಸುವ ಸಾಮಾನ್ಯ ಮೊಕದ್ದಮೆಗಳಿಗೆ ರಾಜಿ ಮೂಲಕ ವಿಧಿಸುವ ದಂಡನೆ ಕಡಿಮೆ ಮಾಡಿ ಲೈಸೆನ್ಸ್ ರಹಿತವಾಗಿ ಮದ್ಯ ಮಾರಾಟ ಮಾಡುವವರ ದಂಡನೆ ಹೆಚ್ಚಳ ಮಾಡುವ ಕುರಿತು ಮತ್ತು ಡಾಬಾ, ಮಾಂಸಹಾರಿ ಹೊಟೇಲು, ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ನಿಯಂತ್ರಿಸಲು ಇನ್ನೂ ಕಠಿಣ ಕಾನೂನು ರಚಿಸುವ ಕುರಿತು.
8. CL2 ಮತ್ತು CL9 ಗಳ ಮದ್ಯ ಮಾರಾಟದ ವೇಳೆಯನ್ನು CL7 ನಂತೆ ಬದಲಾಯಿಸಿ ಬೆಳಿಗ್ಗೆ 9.00 ರಿಂದ ರಾತ್ರಿ 12.00 ರವರೆಗೆ ಮಾಡಲು ವಿನಂತಿಸುತ್ತಿದ್ದೇವೆ.
9. "AROED" ಅನ್ನು ಪುನರ್ ಪರಿಶೀಲಿಸಿ ರದ್ದುಗೊಳಿಸುವ ಕುರಿತು ಪತ್ರಿಕಾಗೋಷ್ಠಿ ನಡೆಸಿದರು.