ಬೆಂಗಳೂರು, ಮಾರ್ಚ್ 20, 2025
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಿಗೆ ಪಡೆದ (ದಸ್ತು) ಪತ್ರ ಬರಹಗಾರರ ಒಕ್ಕೂಟ' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ರಾಜ್ಯ ಸರ್ಕಾರವು 'ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಿಗೆ ಪಡೆದ (ದಸ್ತು) ಪತ್ರ ಬರಹಗಾರರ ಒಕ್ಕೂಟ' ಸದಸ್ಯರಿಗೆ ಅಧಿಕೃತ ಲಾಗಿನ್ ಐಡಿ ನೀಡಬೇಕೆಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಸರ್ಕಾರವು ನೋಂದಣಿ ಇಲಾಖೆಯಲ್ಲಿ ಕಾವೇರಿ-2.0 ತಂತ್ರಾಂಶ ಜಾರಿಗೊಳಿಸಿದ ನಂತರ ಸಾರ್ವಜನಿಕರಿಗೆ Citizen Login ವ್ಯವಸ್ಥೆ ಕಲ್ಪಿಸಿರುವುದು ಸರಿಯಷ್ಟೆ. Citizen Login ನಿಂದ ಯಾರು ಬೇಕಾದರೂ ನೋಂದಣಿ ದಸ್ತಾವೇಜುಗಳನ್ನು ಅಪ್‌ಲೋಡ್ ಮಾಡಬಹುದಾಗಿರುತ್ತದೆ. ಇದರಿಂದ ಸೈಬರ್/ಡಿ.ಟಿ.ಪಿ. ಸೆಂಟರ್‌ಗಳವರು ದಸ್ತಾವೇಜುಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲದೇ ಇರುವ ಅನಧಿಕೃತ ವ್ಯಕ್ತಿಗಳು ದಸ್ತಾವೇಜುಗಳನ್ನು ಮನ ಬಂದಂತೆ ಅಪ್‌ಲೋಡ್ ಮಾಡಿ ತಪ್ಪು ತಪ್ಪಾಗಿ ಆಸ್ತಿಯನ್ನು ಇನ್ಯಾವುದೋ ಇಂಡೆಕ್ಸ್‌ನಲ್ಲಿ ರಿಜಿಸ್ಟರ್ ಮಾಡಿಸುತ್ತಿರುವುದು ಕಂಡು ಬಂದಿರುತ್ತದೆ. ಇದರಿಂದ ಅನಧಿಕೃತ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿ ಎಲ್ಲಾ ರೀತಿಯಿಂದಲೂ ಅನಧಿಕೃತ ಮಧ್ಯವರ್ತಿಗಳಿಂದಲೇ ಕಛೇರಿಗೆ ತೊಂದರೆಯಾಗಿ ಇದರಿಂದ ಸರ್ಕಾರದ ಬೊಕ್ಕಸಕ್ಕೆ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕ ಸಂಗ್ರಹವಾಗದೆ ನಷ್ಟ ಉಂಟಾಗುತ್ತಿರುತ್ತದೆ.
ನಮ್ಮ ರಾಜ್ಯದ ಬಹುತೇಕ ಗ್ರಾಮಾಂತರ ಪ್ರದೇಶದ ರೈತಾಪಿ ವರ್ಗದ ಜನ ಇ-ಮೇಲ್ ಐಡಿ ಹೊಂದದೇ ಇರುವುದರಿಂದ ಹಾಗೂ ಇ-ಮೇಲ್/ಗಣಕ ಯಂತ್ರ ಬಳಸುವ ತಿಳುವಳಿಕೆ/ ಅನುಭವ ಇಲ್ಲದೇ ಇರುವುದರಿಂದ Citizen Login ನಲ್ಲಿ ತಮಗೆ ಸಂಬಂಧಿಸಿದ ದಸ್ತಾವೇಜುಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಕಷ್ಟ ಸಾಧ್ಯವಾಗಿರುತ್ತದೆ.
ದಸ್ತಾವೇಜುಗಳು 1) ಕಾನೂನಾತ್ಮಕವಾಗಿ ಜಾರಿಗೊಳ್ಳುವಿಕೆ 2) ನಿಖರತೆ ಮತ್ತು
3) ದಸ್ತಾವೇಜುಗಳಲ್ಲಿ ಒಳಗೊಂಡ ಪಕ್ಷಕಾರರ ಹಕ್ಕುಗಳ ರಕ್ಷಿಸುವಿಕೆಯನ್ನು ಖಚಿತ ಪಡಿಸಿಕೊಳ್ಳಬೇಕಾದ್ದರಿಂದ ದಸ್ತಾವೇಜುಗಳನ್ನು ಬರೆಯುವುದು ತಯಾರಿಸುವುದು ಬಹು ಮುಖ್ಯ ಪಾತ್ರವನ್ನು ಅಧಿಕೃತ ಪತ್ರ ಬರಹಗಾರರು ಸಾರ್ವಜನಿಕರಿಗೆ ನಿಖರತೆಯಿಂದ ಕೆಲಸ ನಿರ್ವಹಿಸಿಕೊಂಡು ಬಂದಿರುತ್ತೇವೆ. 2 . "A document is intended to be an evidence and has to stand the test of law". อದಸ್ತಾವೇಜುಗಳನ್ನು ಬರೆಯುವ ಕೆಲಸವು ಬಹಳ ಜವಾಬ್ದಾರಿಯುತ ಕೆಲಸವಾಗಿದ್ದು ಇದನ್ನು ಇಲ್ಲಿಯವರೆವಿಗೂ ಮತ್ತು ಇನ್ನು ಮುಂದೆಯು ನಿರ್ವಹಿಸಿಕೊಂಡು ಬರುವವರಾಗಿರುತ್ತೇವೆ. ಆದಾಗ್ಯೂ ಅನಧಿಕೃತ ವ್ಯಕ್ತಿಗಳು ಸರ್ಕಾರಕ್ಕೂ ಮತ್ತು ಸಾರ್ವಜನಿಕರಿಗೆ ಮೋಸ ಮಾಡಬೇಕೆಂಬ ಉದ್ದೇಶ ಹೊಂದಿರುವವರು Citizen-Login ದುರುಪಯೋಗ ಪಡಿಸಿಕೊಂಡು ಸೈಬರ್/ ಡಿ.ಟಿ.ಪಿ. ಕೇಂದ್ರಗಳಲ್ಲಿ ಅನಧಿಕೃತ ವ್ಯಕ್ತಿಗಳು ದಸ್ತಾವೇಜುಗಳನ್ನು ತಯಾರಿಸುತ್ತಿರುವುದು ನೋಂದಣಿ ಕಾಯ್ದೆ 1908 ರ ಕಲಂ 80ಜಿ. ಯ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ.
ದಿನಾಂಕ:
ನಮ್ಮ ರಾಜ್ಯದಲ್ಲಿ ಅಧಿಕೃತ ಪರವಾನಿಗೆ ಪಡೆದ ಸುಮಾರು 24000 ಪತ್ರ ಬರಹಗಾರರು ಕರ್ತವ್ಯ ನಿರ್ವಹಿಸುತ್ತಿದ್ದು. ನಮ್ಮ ಜೊತೆಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿರುವವರು, ನಮ್ಮ ಮತ್ತು ಅವರ ಕುಟುಂಬದವರು ಸೇರಿ ಸುಮಾರು 4 ಲಕ್ಷ ಜನ ಮೇಲ್ಪಟ್ಟು ಇದೇ ಉದ್ಯೋಗದ ಮೇಲೆ ಅವಲಂತರಾಗಿರುತ್ತೇವೆ. ನಮ್ಮಗಳಿಗೆ ಈ ಕೆಲಸವನ್ನು ಬಿಟ್ಟು ಬೇರೆ ಯಾವುದೇ ರೀತಿ ಉದ್ಯೋಗ ಬರುವುದಿಲ್ಲ ಹಾಗೂ ಇರುವುದಿಲ್ಲ.
ನಮ್ಮ ನೆರೆ ರಾಜ್ಯವಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಈಗಾಗಲೆ ಪತ್ರಬರಹಗಾರರಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ವೆಂಡರ್ ಲಾಗಿನ್ ನೀಡಿದ್ದು ಅದರಂತೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮನವಿ ಯೊಂದಿಗೆ ಆಂಧ್ರಪ್ರದೇಶ-ತೆಲಂಗಾಣದಲ್ಲಿ ಸರ್ಕಾರದವರು ನೀಡಿರುವ Vendor Login Photo ಪ್ರತಿಯನ್ನು ಸಹ ಲಗತ್ತಿಸಿರುತ್ತೇವೆ. ನಮ್ಮ ರಾಜ್ಯದ ಅಧಿಕೃತ ಪರವಾನಿಗೆ ಪಡೆದ ಪತ್ರ ಬರಹಗಾರರಿಗೆ ಪ್ರತ್ಯೇಕ Deed writer Login ನೀಡುವುದು.