ಬೆಂಗಳೂರು, ಮಾರ್ಚ್ 17, 2025
ಬಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಮಾದಿಗ ಮೀಸಲಾತಿ ಹೋರಾಟ ಜನಜಾಗೃತಿ ಸಮಿತಿ' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷರಾದ ಎಂ.ಸಿ ಶ್ರೀನಿವಾಸ್ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಸಮುದಾಯದಕ್ಕೆ ಒಳ ಮೀಸಲಾತಿ ನೀಡಿದ ನಂತರ ಬ್ಯಾಕ್ ಲಾಗ್ ಹುದ್ದೆ ಭರ್ತಿ ಮಾಡಬೇಕು ಎಂದು ಮಾದಿಗ ಮೀಸಲಾತಿ ಹೋರಾಟ ಜನಜಾಗೃತಿ ಸಮಿತಿ' ಸದಸ್ಯರು ಒತ್ತಾಯಿಸಿದರು.
ಪರಿಶಿಷ್ಟ ಜಾತಿಗಳಲ್ಲಿರುವ 101 ಉಪ ಜಾತಿಗಳಿಗೆ ಆಯಾ ಜಾತಿ ಜನಸಂಖ್ಯಾವಾರು ಮೀಸಲಾತಿ ನಿಗದಿಗಾಗಿ ದೇಶದಲ್ಲಿ ಕಳೆದ 35 ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿದ್ದು, ಆಳುವ ಪಕ್ಷಗಳ ಓಟ್ ಬ್ಯಾಂಕ್ ರಾಜಕಾರಣದಿಂದಾಗಿ ನಿರ್ಲಕ್ಷಿತ ಹಾಗೂ ಶೋಷಿತ ಸಮುದಾಯ ಸಾಮಾಜಿಕ ನ್ಯಾಯದಿಂದ ವಂಚಿತವಾಗುತ್ತಿದೆ.
ದಕ್ಷಿಣ ಭಾರತ ರಾಜ್ಯಗಳ ನಿರಂತರ ಹೋರಾಟದಿಂದಾಗಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪಿನ ಅನ್ವಯ ಪರಿಶಿಷ್ಟರಲ್ಲಿ ಜನಸಂಖ್ಯಾವರು ಮೀಸಲಾತಿ ನಿಗದಿ ಆಯಾ ರಾಜ್ಯ ಸರ್ಕಾರಗಳ ಜವಾಬ್ದಾರಿಯೆಂದು ಐತಿಹಾಸಿನ ತೀರ್ಪನ್ನು ನೀಡಿದ್ದರೂ, ಆಳುವ ಸರ್ಕಾರಗಳು ಅವಕಾಶ ವಂಚಿತರಿಗೆ ನ್ಯಾಯ ದೊರಕಿಸಿಕೊಡಲು ಮುಂದಾಗುತ್ತಿಲ್ಲ. ಕರ್ನಾಟಕ ದಲ್ಲಿ 1972ರ ಎಲ್.ಜಿ. ಹಾವನೂರ ವರದಿ ನಂತರ ಪರಿಶಿಷ್ಟರಲ್ಲಿನ ಬಹುಸಂಖ್ಯಾತ ಮಾದಿಗ ಸಮಾಜವು ರಾಜಕೀಯವಾಗಿ, ಶೈಕ್ಷಣಿಕವಾಗಿ ತುಂಬಾ ಅನ್ಯಾಯಕ್ಕೊಳ ಗಾಗಿದೆ. ಇದರಿಂದ ಕಳೆದ 30 ವರ್ಷಗಳಿಂದ ನಿರಂತರ ಹೋರಾಟಗಳನ್ನು ನಡೆಸುತ್ತಿದೆ. ಇದೀಗ ಸಮಾಜಕ್ಕೆ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ. ಹೋರಾಟಗಾರರು ಯಾವುದೇ ತ್ಯಾಗಕ್ಕೂ ಸಿದ್ದರಾಗಿದ್ದು, ಉರಿ ಬಿಸಿಲಿನಲ್ಲಿಯು ನಿರಂತರ ಪಾದಯಾತ್ರೆ ಸಭೆ ಸಮಾರಂಭಗಳನ್ನು ನಡೆಸುತ್ತಿದ್ದಾರೆ.
ಇದರ ಮುಂದುವರೆದ ಭಾಗವಾಗಿ ದಿನಾಂಕ; 19.3.2025 ರಂದು ಫ್ರೀಡಂ ಪಾರ್ಕ್, ಬೆಂಗಳೂರು ಇಲ್ಲಿ ನಮ್ಮ ಸಂಘಟನೆ ಹಾಗೂ ಒಳಮೀಸಲಾತಿ ಜಾರಿಗಾಗಿ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟ ಈ ಸಂಘಟನೆಗಳು ಸಮಾವೇಶವನ್ನು ಹಮ್ಮಿಕೊಂಡಿದ್ದು, ನಾಡಿನ ಎಲ್ಲ ದಲಿತ ಸಂಘಟನೆಗಳು, ಹೋರಾಟಗಾರರು, ಭಾಗವಯಿಸಲಿದ್ದಾರೆ. ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರಕ್ಕೆ ಅಂತಿಮ ಎಚ್ಚರಿಕೆಯನ್ನು ನೀಡಲಾಗುವುದು.