ಬೆಂಗಳೂರು, ಮಾರ್ಚ್ 17, 2025

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಭಾರತೀಯ ಗೋ ಪರಿವಾರ್ ಚಾರಿಟಬಲ್ ಟ್ರಸ್ಟ್' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ರಾಷ್ಟ್ರೀಯ ಸ್ವಯಂಸೇವಕ ಸಂಘವು 1952ರ ತನ್ನ ನಿರ್ಣಯವನ್ನು ಈಗಲಾದರೂ ಅನುಷ್ಠಾನಗೊಳಿಸುವಂತಾಗಲು ರಾಷ್ಟ್ರೀಯ ಗೋರಕ್ಷಾ ಆಂದೋಲನ ಪ್ರಾರಂಭಿಸುವ ಧೈರ್ಯ ಮಾಡಲಿ ಒತ್ತಾಯಿಸಿದರು. 

(ಮಾರ್ಚ್ 21,22, 23 ರಂದು ಬೆಂಗಳೂರಿನ ಚೆನ್ನೇನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ RSS ಅಖಿಲ ಭಾರತ ಪ್ರತಿನಿಧಿ ಸಭಾದ ABPS ಬೈಠಕ್ ನಡೆಯಲಿರುವ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ) 1952 ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ತನ್ನ ಉನ್ನತ ನಿರ್ಣಯ ಸಭೆ ಆಗಿರುವ ಅಖಿಲ ಭಾರತ ಪ್ರತಿನಿಧಿಸಭಾದ ಬೈಠಕ್ ನಲ್ಲಿ ರಾಷ್ಟ್ರಾಧ್ಯಂತ ಗೋ ಹತ್ಯೆ ನಿಷೇಧ ಮಾಡಲು ಆಗಿನ ಕೇಂದ್ರ ಸರಕಾರವನ್ನು ಒತ್ತಾಯಿಸುವ ಮತ್ತು ಗೋರಕ್ಷ ಆಂದೋಲನವನ್ನು ಬೆಂಬಲಿಸುವಂತೆ ಇಡೀ ಭಾರತೀಯ ಸಮುದಾಯಕ್ಕೆ ಕರೆ ನೀಡುವ ನಿರ್ಣಯ ಕೈಗೊಂಡಿತ್ತು.

(ಹೀಗೆ ತೆಗೆದುಕೊಂಡ ನಿರ್ಣಯವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಯಾವತ್ತೂ ಅನುಷ್ಠಾನಗೊಳ್ಳುವಂತೆ ಕ್ರಮ ಕೈಗೊಳ್ಳುತ್ತಾದರೂ ಈ ವಿಚಾರದಲ್ಲಿ ಇನ್ನೂ ಕೂಡಾ ಅಂದರೆ 73 ವರ್ಷದ ನಂತರವೂ ಗುರಿಮುಟ್ಟುವ ಹೋರಾಟ ಮಾಡಬೇಕಷ್ಟೆ ) ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಮಪೂಜ್ಯ ಗುರೂಜಿ ( ಮಾಧವ ಸದಾಶಿವ ಗೊಳ್ವಲ್ಕರ್ ) ರವರು ಗೋಹತ್ಯೆ ನಿಷೇಧ ವಾಗಬೇಕೆಂದು ಸಹಿ ಸಂಗ್ರಹ (50 ಲಕ್ಷ )ಗಳನ್ನು ಒಟ್ಟು ಸೇರಿಸಿ ಆಗಿನ ಭಾರತದ ಅಧ್ಯಕ್ಷರಾಗಿದ್ದ ಡಾಕ್ಟರ್ ರಾಜೇಂದ್ರ ಪ್ರಸಾದ್‌ ರವರಿಗೆ ನೀಡಿದ್ದರು. ಆಗ ತಾನೇ ಸ್ಥಾಪಿಸಲ್ಪಟ್ಟಿದ್ದ ಭಾರತೀಯ ಜನಸಂಘ ( ಬಿಜೆಪಿಯ ಪೂರ್ವ ರೂಪ )ವು ಇದರಲ್ಲಿ ಕೈ ಜೋಡಿಸಿತು.