ಬೆಂಗಳೂರು, ಮಾರ್ಚ್ 14, 2025 

ಬೆಂಗಳೂರಿನ ಆರ್.ಎಂ.ವಿ ಕ್ಲಬ್ ಹೌಸ್ ನಲ್ಲಿ ರೋಟರಿ ಬೆಂಗಳೂರು ರಾಜ್ ಮಹಲ್ ವತಿಯಿಂದ "ಮೊಬೈಲ್ ಬ್ರಿಡ್ಜ್ ಶಾಲೆ ಮತ್ತು ಗ್ರಂಥಾಲಯದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. 

 ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ ಮಹಲ್ ಕ್ಲಬ್ ನ ಅಧ್ಯಕ್ಷರಾದ ದೀಪಾ ಶಶಿಂದ್ರನ್, ರೋಟರಿ ಕ್ಲಬ್ ನ ಮಾಜಿ ಗವರ್ನರ್ ಆದ ರಾಜೇಂದ್ರ ರೈ, ರಾಜ್ ಮಹಲ್ ಕ್ಲಬ್ ನ ಕಾರ್ಯದರ್ಶಿಯಾದ ಸುಂದರ್ ಪ್ರಕಾಶ್, ಪ್ರಾಜೆಕ್ಟ್ ಡೈರೆಕ್ಟರ್ ಆದ ಕೀರ್ತಿ ಮೆಹತಾ ಅವರು ಪ್ರಮುಖ ಅತಿಥಿಗಳಾಗಿ ಭಾಗಿಯಾಗಿದ್ದರು. 

ಕಟ್ಟಡ ಕಾರ್ಮಿಕರ ಮಕ್ಕಳು, ಬಡವರ ಮಕ್ಕಳ ಶಿಕ್ಷಣಕ್ಕಾಗಿ 'ಮೊಬೈಲ್ ಬ್ರಿಡ್ಜ್ ಶಾಲೆ ಮತ್ತು ಗ್ರಂಥಾಲಯ'ವನ್ನು ಆರಂಭ ಮಾಡಿರುವುದಾಗಿ ದೀಪಾ ಶಶಿಂದ್ರನ್ ಅವರು ತಿಳಿಸಿದರು. ಕಟ್ಟಡಗಳ ಬಳಿಯಿರುವ ಕಟ್ಟಡ ಕಾರ್ಮಿಕರ ಮಕ್ಕಳಿರುವಲ್ಲಿಯೇ ಹೋಗಿ ಶಿಕ್ಷಣ ನೀಡುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ದೀಪಾ ಶಶಿಂದ್ರನ್ ಅವರು ತಿಳಿಸಿದರು. 

ಮುಂದಿನ ದಿನಗಳಲ್ಲಿ ಶಿಕ್ಷಣದ ಉನ್ನತೀಕರಣಕ್ಕಾಗಿ ಹೆಚ್ಚು ಮೊಬೈಲ್ ಬ್ರಿಡ್ಜ್ ಶಾಲೆ ಮತ್ತು ಗ್ರಂಥಾಲಯ'ಗಳನ್ನು ಆರಂಭಸುವುದಾಗಿ ರಾಜೇಂದ್ರ ರೈ ಅವರು ತಿಳಿಸಿದರು.