ಬೆಂಗಳೂರು, ಮಾರ್ಚ್ 8, 2025
ಬೆಂಗಳೂರಿನ ಅರಮನೆ ಮೈದಾನದ ಗಾರ್ಡೆನಿಯಾ ಸಭಾಂಗಣದಲ್ಲಿ 'ಈಡಿಗ ಜನಾಂಗದ ಇತಿಹಾಸ-ಅಭಿವೃದ್ಧಿಯ ಬಗ್ಗೆ ಒಂದು ಅವಲೋಕನ' ಚಿಂತನ-ಮಂಥನ ಸಭೆ' ನಡೆಯಿತು.
ಈ ಸಭೆಯಲ್ಲಿ ವಿಖ್ಯಾತಾನಂದ ಸ್ವಾಮೀಜಿ, ಅರುಣಾನಂದ ಸ್ವಾಮೀಜಿ, ಪ್ರಣವಾನಂದ ಸ್ವಾಮೀಜಿ, ಯೋಗೇಂದ್ರ ಸ್ವಾಮೀಜಿ ಬಿ.ಕೆ. ಹರಿಪ್ರಸಾದ್, ಚಿನ್ನೇಗೌಡರು, ಗೋಪಿ ಸೇರಿದಂತೆ ಈಡಿಗ, ಬಿಲ್ಲವ, ನಾಮಧಾರಿ, ದೀವರು ಸೇರಿದಂತೆ 28 ಉಪ ಪಂಗಡಗಳ ವಿವಿಧ ಪಕ್ಷಗಳ ಪ್ರಮುಖರು ಭಾಗಿಯಾಗಿದ್ದರು. ಆರ್ಯ ಈಡಿಗ, ಬಿಲ್ಲವ, ನಾಮಧಾರಿ, ದೀವರು ಇತ್ಯಾದಿ 26 ಉಪಪಂಗಡಗಳ ಮುಖಂಡರು ಭಾಗಿಯಾಗಿದ್ದರು.
ಜತೆಗೆ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯರು ಹಾಗೂ ಈಡಿಗ ಸಮುದಾಯದ ಪ್ರಮುಖ ನಾಯಕರಾದ ಬಿ.ಕೆ. ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.