ಬೆಂಗಳೂರು, ಮಾರ್ಚ್ 1, 2025
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಫಿಲ್ಮ್ ಮೇಕರ್ಸ್ ಕೌನ್ಸಿಲ್ (ರಿ)' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಸಿನಿಮಾ ಪೈರೆಸಿ ತಡೆಗಟ್ಟುವುದು & ಸಿನಿಮಾ ಕ್ಷೇತ್ರದ ಹಲವು ಸಮಸ್ಯೆಗಳನ್ನು ಬಗೆಹರಿಸಲು, ಸಿನಿಮಾ ರಂಗದವರೆಲ್ಲರನ್ನೂ ಸೇರಿಸಿ ಕೆಲಸ ಮಾಡುವ ಬಗ್ಗೆ 'ಫಿಲ್ಮ್ ಮೇಕರ್ಸ್ ಕೌನ್ಸಿಲ್ (ರಿ)' ಸದಸ್ಯರು ಮಾತನಾಡಿದರು.
ಸಿನಿಮಾ ಪೈರೆಸಿಯನ್ನು ತಡೆಗಟ್ಟುವಲ್ಲಿ "ಫಿಲ್ಕ್ ಮೇಕರ್ಸ್ ಕೌನ್ಸಿಲ್ (ರಿ)" ಒಂದು ವರ್ಷದಿಂದ ಕೆಲಸ ಮಾಡುತ್ತಿದೆ. ಚಿತ್ರರಂಗಕ್ಕೆ ಪೈರೆಸಿಯು ಒಂದು ಮಾರಕ ಪಿಡುಗು ಆಗಿದ್ದು, ಚಲನಚಿತ್ರ ನಿರ್ಮಾಪಕರು ಇದರಿಂದ ತುಂಬಲಾರದ ನಷ್ಟವನ್ನು ಅನುಭವಿಸುತ್ತಿದ್ದಾರೆ. ಇದನ್ನು ತಡೆಗಟ್ಟಲು ಕಳೆದ ಒಂದು ವರ್ಷದಿಂದ "ಎಫ್ ಎಂ ಸಿ (ರಿ)" ಯು ಪೊಲೀಸ್ ಇಲಾಖೆ, ಸೈಬರ್ ಇಲಾಖೆ, ಜಂಟಿ ಕಾರ್ಯದರ್ಶಿಗಳು, ವಾರ್ತಾ ಇಲಾಖೆ, MI&B, ಸಿಬಿಎಫ್ಸಿ (CBFC) ಮತ್ತಿತರ ಇಲಾಖೆಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಈವರೆಗೆ 4 ವೆಬ್ ಪೊರ್ಟಲ್ ಮತ್ತು 2 ಮೊಬೈಲ್ ಆಪ್ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಆದರೆ ಈ ಡಿಜಿಟಲ್ ಯುಗದಲ್ಲಿ ಪೈರೆಸಿ ಪ್ರತಿಗಳು ವೆಬ್ ಪೋರ್ಟಲ್, ವೆಬ್ ಸೈಟ್ ಮತ್ತು ಮೊಬೈಲ್ ಆಪ್, ಟೆಲಿಗ್ರಾಮ್ ಗಳಲ್ಲಿ ಮತ್ತೆ ಮತ್ತೆ ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದು. ಬಿಡುಗಡೆಯಾದ ಚಲನಚಿತ್ರಗಳು ಅನಧಿಕೃತವಾಗಿ ನಿರ್ಮಾಪಕರಿಗೆ ತಿಳಿಯದೆ ಹರಡುತ್ತಿದೆ ಹಾಗು ಪ್ರದರ್ಶನಗೊಳ್ಳುತ್ತಿದೆ. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಇಲಾಖೆಗಳು ಕೈಚೆಲ್ಲಿದ್ದು, ಪೈರೆಸಿಯು ಬೆಳೆಯುತ್ತಿರುವ ಕಾರಣ ಇದನ್ನು ತಡೆಗಟ್ಟಲು, ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡುವುದು ಅನಿವಾರ್ಯವಾಗಿದೆ.
ಹಾಗೆಯೇ ಸಿನಿಮಾ ರಂಗವನ್ನು ಕಾಡುತ್ತಿರುವ ಇತರ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಇಂದಿನ ತುರ್ತಾಗಿದೆ. 1) ಮಲ್ಟಿಪ್ಲೆಕ್ಸ್ ಗಳ ಪ್ರದರ್ಶನ ಸಮಯ ಮತ್ತು ಟಿಕೆಟ್ ದರ ನಿಗದಿ, 2) UFO / QUBE ಮನೋಪಲಿ, 3) ವ್ಯವಸ್ಥಿತವಾದ ಸಿನಿಮಾ ರಿಲೀಸ್ ಯೋಜನೆ, 4) ಸಬ್ಸಿಡಿ ಮತ್ತು ಇತರ ಸಮಸ್ಯೆಗಳ ಬಗ್ಗೆ ಸರ್ಕಾರದೊಂದಿಗೆ ಮುಖಾಮುಖಿ, 5) ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಸಡ್ಡೆ ಮತ್ತು ಕಾರ್ಯ ನಿರ್ಲಕ್ಷತೆ 6) ಸಿನಿಮಾ ವಲಯಕ್ಕೆ ಸರ್ಕಾರದಿಂದ ಭದ್ರತೆ.
ಈ ನಿಟ್ಟಿನಲ್ಲಿ “ಎಫ್ ಎಂ ಸಿ (ರಿ)"ಯು ಎಲ್ಲರನ್ನೂ ಒಗ್ಗೂಡಿಸಿ ಕೆಲಸ ಮಾಡಲು ತನ್ನನ್ನು ತೊಡಗಿಸಿಕೊಂಡಿದೆ. 1 "ಫಿಲ್ಡ್ ಮೇಕರ್ಸ್ ಕೌನ್ಸಿಲ್ (ರಿ)" / FMC(R) ಸಿನಿಮಾ ಆಸಕ್ತರಿಗೆ ಮತ್ತು ಸಿನಿಮಾ ಕರ್ಮಿಗಳಿಗೆಂದೇ ಸ್ಥಾಪಿತವಾಗಿರುವ ಸಂಸ್ಥೆ. ಸಿನಿಮಾ ತಂತ್ರಜ್ಞರು ಮತ್ತು ಸಮಾನ ಮನಸ್ಕರೆಲ್ಲರೂ ಸಿನಿಮಾ ನಿರ್ಮಾಪಕರೊಂದಿಗೆ ಚರ್ಚಿಸಿ ಸಿನಿಮಾ ನಿರ್ಮಿಸಲು ಮೀಸಲಾಗಿರುವ ಸಿನಿಮಾ ಸಮುದಾಯವಾಗಿದೆ.
ಸಿನಿಮಾಗಾಗಿ ಈಥರ್
ಮೇಕರ್ಸ್ ಕೌನ್ಸಿಲ್ (ಆರ್)
ಫಿಲ್ಮ್ ಮೇಕರ್ಸ್ ಕೌನ್ಸಿಲ್ (ಆರ್)
ಫಿಲ್ಡ್ ಮೇಕರ್ಸ್ ಕೌನ್ಸಿಲ್ (ರಿ)
ಸಿನಿಮಾಗಾಗಿ ಒಟ್ಟಿಗೆ
• ಕನ್ನಡ ಚಲನಚಿತ್ರಗಳನ್ನು ಬೆಂಬಲಿಸುವುದು.
• ಚಲನಚಿತ್ರ ತಯಾರಕರ ಸಮುದಾಯ ಸಂಸ್ಥೆ.
• ಚಲನಚಿತ್ರ ಮೌಲ್ಯ ಮತ್ತು ಭದ್ರತೆಯ ಬಗ್ಗೆ ಜ್ಞಾನ.
• ಚಿತ್ರೀಕರಣ ಅನುಮತಿಯಿಂದ ಪ್ರಚಾರ ಹಾಗು ಬಿಡುಗಡೆಯವರೆಗೆ ಸಲಹೆ ಹಾಗು ಸೂಚನೆ.
• ಯುನೈಟೆಡ್ ನಿರ್ಮಾಪಕರು / ಸಂಪನ್ಮೂಲ ಹಂಚಿಕೆ.
• ಚಲನಚಿತ್ರ ತಯಾರಿಕೆ ಬಗ್ಗೆ ಸದಸ್ಯರಿಂದ ಉತ್ತಮ ಮೌಲ್ಯ ಮತ್ತು ಆದಾಯವನ್ನು ಚರ್ಚಿಸಲು ವೇದಿಕೆ, ಸ್ಕ್ರಿಪ್ಟ್ನಿಂದ ಸಂಗೀತ, ಸಿನಿಮಾ ತಯಾರಿಕೆ ಮತ್ತು ವಿತರಣೆ / ಟಿವಿ / ಒಟಿಟಿ ಪ್ಲಾಟ್ಫಾರ್ಮ್ಗಳೊಂದಿಗೆ ವ್ಯಾಪಾರ ಮಾಡುವ ಮಾರ್ಗದರ್ಶನ.
ಸಾಮಾಜಿಕ ಜಾಲತಾಣಗಳಲ್ಲಿ (Social media) "Film Makers Council" YouTube Channel ಮೂಲಕ ತರೆಕಾಣಲಿರುವ ಸಿನೆಮಾಗಳ ಬಗ್ಗೆ ಪ್ರೇಕ್ಷಕರಿಗೆ ಮಾಹಿತಿ ನೀಡುವ ಕಾರ್ಯಕ್ರಮ - "ಕಾಕಾ ಜೊತೆ ಈ ವಾರದ ಸಿನೆಮಾ". ಹೊಸ ಸಿನೆಮಾಗಳ ಬಗ್ಗೆ ಉಚಿತ ಮಾಹಿತಿ ಸಂಗ್ರಹಣೆ ಮತ್ತು ನೀಡುವಿಕೆ ಕಾರ್ಯಕ್ರಮ ಪ್ರಸಾರ ಮಾಡುತ್ತಿದ್ದೇವೆ. ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿರುವವರ ಜೊತೆ ಮಾತುಕತೆ ನಡೆಸಿ ಅವರ ಅನುಭವ ಹಂಚಿಕೆಯ ಕಾರ್ಯಕ್ರಮ “Let's Talk with Pavana" ನಡೆಸುತ್ತಿದ್ದೇವೆ. ಹೆಚ್ಚು ಹೆಚ್ಚು ಜನರನ್ನು ಚಿತ್ರಮಂದಿರಕ್ಕೆ ಕರೆತರುವಂತೆ ಮಾಡುವುದು ನಮ್ಮ ಪ್ರಾಮಾಣಿಕ ಪ್ರಯತ್ನ.
ಈ ಎಲ್ಲಾ ಕೆಲಸ ಕಾರ್ಯಗಳನ್ನು ಚಿತ್ರರಂಗದವರು ಮತ್ತು ಮಾಧ್ಯಮ ಮಿತ್ರರೊಂದಿಗೆ ಸೇರಿ ಮುಂದುವರಿಸಲು ಇಚ್ಛಿಸುತ್ತೇವೆ. ಈ ನಮ್ಮ “ಎಫ್ ಎಂ ಸಿ (ರಿ)"ಯ ಪ್ರಯತ್ನಕ್ಕೆ ತಮ್ಮೆಲ್ಲರ ಹಾರೈಕೆಯಿರಲಿ. ಈ ಎಲ್ಲಾ ವಿಷಯಗಳನ್ನು ನಿಮ್ಮ ಮಾಧ್ಯಮದಲ್ಲಿ ಪ್ರಕಟಿಸಿ ನಮ್ಮ ಈ ಪ್ರಯತ್ನಕ್ಕೆ ಬೆಂಬಲ ನೀಡಿ ಎಂದು ಕೇಳಿಕೊಳ್ಳುತ್ತೇವೆ.