ಬೆಂಗಳೂರು, ಫೆಬ್ರವರಿ 27, 2025

ದಿನಾಂಕ 1 ಜುಲೈ 2022ರಿಂದ 31 ಜುಲೈ 2024ರ 

ಅವಧಿಯಲ್ಲಿ ನಿವೃತ್ತರಾಗಿರುವ ಅಧಿಕಾರಿ ಹಾಗೂ ನೌಕರರುಗಳಿಗೆ ಯಾವಮಾನದಂಡವನ್ನು ಇಟ್ಟುಕೊಂಡು ಆರನೇ ವೇತನ ಆಯೋಗದ ಸೌಲಭ್ಯಗಳನ್ನು ನೀಡಿದ್ದಾರೆ ನಮಗೆ 7ನೇ ವೇತನ ಆಯೋಗದ ಪ್ರಕಾರ ನಿವೃತ್ತಿ ಸೌಲಭ್ಯ ನೀಡುವಂತೆ ಪರಿಷ್ಕೃತ ಆದೇಶ ಹೊರಡಿಸಲು ಒತ್ತಾಯಿಸಿ ಅನಿರ್ಧಿಷ್ಟ ಅವಧಿ ಧರಣಿ ಸತ್ಯಾಗ್ರಹ ನಡೆಯಲಿದೆ.

ಆತ್ಮೀಯ ನಿವೃತ್ತ ಅಧಿಕಾರಿ ಹಾಗೂ ನೌಕರವರ್ಗದವರೇ ಈಗಾಗಲೇ ನಮ್ಮ ವೇದಿಕೆವತಿಯಿಂದ ತಮ್ಮೆಲ್ಲರ ಅಪೇಕ್ಷೆಯಂತೆ, ದಿನಾಂಕ 28ರಂದು ಅನಿರ್ದಿಷ್ಟ ಅವಧಿ ಮುಷ್ಕರಕ್ಕೆ ಎಲ್ಲಾ ರೀತಿಯಿಂದ ಸಜ್ಜಾಗಿದ್ದೇವೆ, ಈ ಹೋರಾಟ ನಮ್ಮ ವೇದಿಕ ಕೊನೆಯ ಹೋರಾಟವಾಗಿದ್ದು ಇದನ್ನು ನಾವು ಎಲ್ಲರೂ ಸೇರಿಮಾಡಲೇಬೇಕು. ಈ ಸಂದರ್ಭದಲ್ಲಿ ತಮ್ಮೆಲ್ಲರ ಸಹಕಾರ ಅತಿಅವಶ್ಯಕ ಎಂದು ಭಾವಿಸಿ ತಮ್ಮೆಲ್ಲರಿಗೂ ಈ ಮೂಲಕ ವಿನಂತಿಸುವದೇನೆಂದರೆ ಈ ಸಾರಿ ನಾವು ಸರ್ಕಾರಕ್ಕೆ ಬಲಪ್ರದರ್ಶನವನ್ನು ಮಾಡುವ ಮೂಲಕ ನಮ್ಮ ನ್ಯಾಯೋಚಿತವಾದ ಬೇಡಿಕೆಯನ್ನು ಈಡೇರಿಸಿಕೊಳ್ಳಬೇಕು. ಈಗಾಗಲೇ 28 ಸಚಿವರು ಸಹ ನಮ್ಮಪರವಾಗಿ ಮುಖ್ಯಮಂತ್ರಿಗಳವರಿಗೆ ಪತ್ರ ಬರೆದಿದ್ದಾರೆ. 20ನೇ ತಾರೀಕು ನಡೆದ, ಸಚಿವ ಸಂಪುಟ ಸಭೆಯಲ್ಲಿ ನಮ್ಮ ವಿಷಯ ಬರದೆ ಇರುವುದರಿಂದ, ಮೊದಲೇ ವೇದಿಕೆ ತೀರ್ಮಾನಿಸಿದಂತೆ ದಿನಾಂಕ 28 ಫೆಬ್ರವರಿ 2025 ರಂದು ಅನಿರ್ದಿಷ್ಟ ಅವಧಿ ಮುಷ್ಕರ ನಡೆಯುತ್ತದೆ. ಯಾವುದೇ ಕಾರಣಕ್ಕೂ ಹಿಂದೆ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ನಾವು ನಿವೃತ್ತರು. ಮನೆಯಲ್ಲಿ ಇರುವುದಕ್ಕಿಂತ ಫ್ರೀಡಂಪಾರ್ಕಲ್ಲಿ ಇರುವುದು ಒಳ್ಳೆಯದು ಅಲ್ಲವೇ? ಅದರ ಜೊತೆಗೆ ನಾವು ನಮ್ಮ ಅನ್ಯಾಯವನ್ನು ಸರಿಪಡಿಸಿಕೊಳ್ಳಬಹುದು ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯ ನೌಕರರು ಕುಟುಂಬ ಸಮೇತರಾಗಿ ರೈಲು ಬಸ್ಸುಗಳಲ್ಲಿ ಟಿಕೆಟ್ಗಳನ್ನು ಬುಕ್ಕಾಡಿಸಿ, ಧರಣಿ. ಯಲ್ಲಿ ಭಾಗವಹಿಸಲು ಬರುತ್ತಿದ್ದಾರೆ/ ಬಂದಿದ್ದಾರೆ. ಇನ್ನುಳಿದವರು ಇಂದೇ ನಿಮ್ಮ ಟಿಕೆಟ್ಗಳನ್ನ ಬುಕ್ಕಾಡುವ ಮೂಲಕ, ಬೆಂಗಳೂರಿನ ಹೋರಾಟದಲ್ಲಿ ಪಾಲ್ಗೊಳ್ಳಲು ತಯಾರಾಗಿ ಬರಬೇಕೆಂದು ತಮ್ಮಲ್ಲಿ ವಿನಂತಿ ಇದು ಅನಿರ್ದಿಷ್ಟ ಅವಧಿ ಧರಣಿ ಆಗಿರುವುದರಿಂದ ಈಗಲೂ ಬಂದು ಭಾಗವಹಿಸಲು ಅವಕಾಶವಿದೆ. ಸರ್ಕಾರಕ್ಕೆ ನಮ್ಮದು ಕೇವಲ ಒಂದೇ ಒಂದು ಬೇಡಿಕೆ 7ನೇ ವೇತನ ಆಯೋಗದಲ್ಲಿ ಕೆಲಸ ಮಾಡಿರುವ ತಮ್ಮೆಲ್ಲರಿಗೂ ಸರ್ಕಾರ ಆರನೇ ವೇತನಕ್ಕೆ ಸಂಬಂಧಿಸಿದಂತೆ ನಿವೃತ್ತ ಸೌಲಭ್ಯಗಳನ್ನು ನೀಡಿರುವುದು.

ಸರ್ಕಾರ ದಿನಾಂಕ 1 ಜುಲೈ 2022 ರಿಂದ ದಿನಾಂಕ 31 ಜುಲೈ 2024ರ ಅವಧಿಯಲ್ಲಿ ನಿವೃತ್ತರಾಗಿರುವ ಅಧಿಕಾರಿ ಹಾಗೂ ನೌಕರರುಗಳಿಗೆ ಯಾವ ಮಾನದಂಡವನ್ನು ಇಟ್ಟುಕೊಂಡು ಆರನೇ ವೇತನ ಆಯೋಗದ ಸೌಲಭ್ಯಗಳನ್ನು ನೀಡುತ್ತಿದ್ದಾರೆ? ಇದಕ್ಕೆ ಸರ್ಕಾರ ಸಂಬಂಧಿಸಿದ ಉತ್ತರವನ್ನು ಈ ವೇದಿಕೆಗೆ ಬಂದು ನೀಡಬೇಕು ಎಂದು ಒತ್ತಾಯ ನಮ್ಮದು ನಾವು ಕಳೆದ 30, 40 ವರ್ಷಗಳ ಕಾಲ ಸರ್ಕಾರ, ಸಾರ್ವಜನಿಕರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದ್ದು ನಿಜವಾಗಲೂ ಸರ್ಕಾರಕ್ಕೆ ನಮಗೆ ನೀಡುವ ಹಣದಿಂದ ತೊಂದರೆ ಆಗುತ್ತದೆ ಎಂಬುದನ್ನು ಮನಗಾಣಿಸಿದಲ್ಲಿ ನಾವು ಸರ್ಕಾರವನ್ನು ಒತ್ತಾಯಿಸುವುದಿಲ್ಲ. ಎಷ್ಟೋ ಜನ ನಿವೃತ್ತ ನೌಕರರು ಬಾಡಿಗೆಯನ್ನು ಕೊಡಲು ಆಗದೆ ಯಾರದೋ ಕಟ್ಟೆಯ ಮೇಲೆ, ದೇವಸ್ಥಾನಗಳಲ್ಲಿ, ಮರಗಳ ಕೆಳಗಡೆ ತಮ್ಮ ಮನೆಯ ಸಾಮಾನುಗಳನ್ನು ಇಟ್ಟುಕೊಂಡು ಹೆಂಡತಿ ಮಕ್ಕಳನ್ನು ಸಾಕುತ್ತಿರುವ ದೃಶ್ಯ ಈ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಸರ್ಕಾರಕ್ಕೆ ನಾಚಿಕೆ ಎಂಬ ಶಬ್ದದ ಅರ್ಥ ಗೊತ್ತಿದ್ದರೆ ಕೂಡಲೇ ನಮಗಾಗಿರುವ ಅನ್ಯಾಯವನ್ನು ಸರಿಪಡಿಸಬೇಕು ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ಈ ಹೋರಾಟದಿಂದ ನಮ್ಮ ಎಲ್ಲಾ ನಿವೃತ್ತ ನೌಕರ ಮಿತ್ರರುಗಳು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂಬ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರದ ಮುಖ್ಯಸ್ಥರಾಗಿರುವ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರನ್ನು ರಾಜ್ಯದ ಎಲ್ಲೆಡೆ ಪ್ರವಾಸದಲ್ಲಿರುವ ಸಂದರ್ಭದಲ್ಲಿ ಅವರ ಪ್ರವಾಸ ಬರುವ ಸ್ಥಳದಲ್ಲಿ ನಮ್ಮ ಎಲ್ಲ ನಿವೃತ್ತ ನೌಕರರು ಮನವಿಯನ್ನು ನೀಡಿ ಬೇಡಿಕೊಂಡಿದ್ದಾರೆ. ವೇದಿಕೆಯ ಪ್ರಧಾನ ಸಂಚಾಲಕನಾದ ನಾನು ನಮ್ಮೆಲ್ಲ ವೇದಿಕೆಯ