ಬೆಂಗಳೂರು, ಫೆಬ್ರವರಿ 27, 2025
ಇತ್ತೀಚಿನ ದಿನಗಳಲ್ಲಿ ಕನ್ನಡಿಗರ ಮೇಲೆ ನಿರಂತರವಾಗಿ ಮಹಾರಾಷ್ಟ್ರದ ಎಂಇಎಸ್ ಮರಾಠಿ ಪುಂಡರು ಹಲ್ಲೆ ನಡೆಸಿ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸುಗಳಿಗೆ ಕಪ್ಪು ಬಣ್ಣ ಚಾಲಕರಿಗೆ ಬಣ್ಣ ಬಳಿದು ಕನ್ನಡಿಗರ ಭಾವೈಕ್ಯತೆಗೆ ದಕ್ಕೆ ತಂದಿರುವ ಎಂಇಎಸ್ ಪುಂಡಾಟಿಕೆ ಖಂಡಿಸಿ ಕನ್ನಡಿಗರ ವಿಜಯ ಸೇನೆಯಿಂದ ಪಂಜಿನ ಮರೆವಣಿಗೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಸಿದರು.
ನಮ್ಮ ಕನ್ನಡಿಗರ ವಿಜಯ ಸೇನೆ ಅಧ್ಯಕ್ಷ ವಿಜಯ ಕುಮಾರ್ ಎಸ್ ಮಾತನಾಡಿ, ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವುದೇ ಕಾಯಕ ಮಾಡಿಕೊಂಡಿದ್ದಾರೆ ಇದಕ್ಕೆ ಕಾರಣ ನಮ್ಮಲ್ಲಿನ ರಾಜಕೀಯ ಮತ್ತು ಅಧಿಕಾರ ವ್ಯವಸ್ಥೆ ಬೆಳಗಾವಿ ಜಿಲ್ಲೆಯಲ್ಲಿರುವ ಎಲ್ಲಾ ಶಾಸಕರು ಕನ್ನಡಿಗರ ಮೇಲೆ ಹಲ್ಲೆಯನ್ನು ಖಂಡಿಸುವುದು ಬಿಟ್ಟು ತಮಗೆ ಸಂಬಂಧವಿಲ್ಲವೆಂಬಂತೆ ಇರುವುದನ್ನು ನೋಡಿದರೆ ಕೇವಲ ಮತಕ್ಕಾಗಿ ಇವರಿಗೆ ಕರ್ನಾಟಕ ಬೆಳಗಾವಿ ಬೇಕು ಅಂತ ಬಾಸವಾಗುತ್ತಿದೆ. ಕಳೆದ ವಾರ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿ ಕನ್ನಡಿಗರ ಭಾವನೆಯನ್ನು ಕೆರಳಿಸಿರುವ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಮತ್ತು ಬಸ್ ಚಾಲಕನ ಮೇಲೆ ಸುಳ್ಳು ಪೋಕ್ಸೋ ಮೊಕದ್ದಮೆ ದಾಖಲಿಸಿದ. ಸಿ. ಪಿ. ಐ. ಕಲ್ಯಾಣ್ ಶೆಟ್ಟಿಯವ ರನ್ನು ಕೂಡಲೇ ವಜಾಗೊಳಿಸಿ ಇವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಬೆಳಗಾವಿ ವಿಚಾರದಲ್ಲಿ ಸುಗ್ರೀವಾಜ್ಞೆ ಹೊರಡಿಸಿ ಮಹಾರಾಷ್ಟ್ರ ಪುಂಡರು ಕನ್ನಡಿಗರ ತಂಟೆಗೆ ಬಾರದಂತೆ ಎಚ್ಚರಿಕೆ ವಹಿಸುವುದರ ಜೊತೆಗೆ ರಕ್ಷಣೆಗೆ ನಿಲ್ಲಬೇಕು ಮರಾಠಿ ಪುಂಡರ ಕೃತ್ಯವನ್ನು ಖಂಡಿಸ ಬೇಕು ಮತ್ತು ಬೆಳಗಾವಿ ಜಿಲ್ಲೆಯ ಶಾಸಕರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಸಂಘಟನೆಯ ಸಲಹೆಗಾರ ಮೋಹನ್ ಕುಮಾರ್.ಬಿ. ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಪುಟ್ಟೆಗೌಡ ತೆಂಕನಹಳ್ಳಿ, ಮಹಿಳಾ ಘಟಕ ಅಧ್ಯಕ್ಷೆ ಸುಮತಿ,ಆಟೋ ನಾಗರಾಜ್, ರಂಜಿತ್, ನಾಗೇಶ್,ಹರೀಶ್ ಮತ್ತಿತರರು ಭಾಗವಹಿಸಿದ್ದರು