ಬೆಂಗಳೂರು, ಫೆಬ್ರವರಿ 25, 2025

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಕೆ. ಎನ್. ಫೌಂಡೇಶನ್ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

  ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಾರ್ಚ್ 1, 2025 ರಂದು ಕೆ.ಎನ್ .ಫೌಂಡೇಶನ್‌ ವತಿಯಿಂದ "ದ್ರೌಪದಿ ಪ್ರವರ ದರ್ಪಣ" ಕಾರ್ಯಕ್ರಮ ಆಯೋಜಿಸಲಾಗಿದೆ. 

  ವಹ್ನ್ನಿ ಕುಲ ಕ್ಷತ್ರಿಯ ಜನಾಂಗದ ಕರಗ ಪೂಜಾರಿಗಳು ಹಾಗು ಅವರ ಧರ್ಮ ಪತ್ನಿಯರು, ಎರಡಕ್ಕೂ ಹೆಚ್ಚು ಪದವಿ ಪಡೆದ ಮಹಿಳೆಯರು, ಮಹಿಳಾ ಸಾಧಕರು ಹಾಗು 18 ವರ್ಷದೊಳಗಿನ ಮಕ್ಕಳ ಸಾಧನೆಯನ್ನು ಗುರುತಿಸಿ ಗೌರವಿಸುವ ರಾಜ್ಯ ಮಟ್ಟದ ಸಾಂಸ್ಕೃತಿಕ ಮತ್ತು ಸನ್ಮಾನ ಕಾರ್ಯಕ್ರಮಕ್ಕೆ ಪತ್ರಿಕೆ ಹಾಗೂ ದೃಶ್ಯಮಾಧ್ಯಮದ ಸಂಪಾದಕರು ತಮ್ಮ ಪ್ರತಿನಿಧಿಗಳನ್ನು ಕಳುಹಿಸಿಕೊಡುವುದರ ಕುರಿತಂತೆ...

ವಹಿಕುಲ ಸಮುದಾಯದ ಕುಲದೇವತೆಯಾದ ಆದಿಶಕ್ತಿ ದೌಪದಿ ಅಮ್ಮನವರ ಪವಿತ್ರ ಸಂಪ್ರದಾಯಗಳನ್ನು ಶ್ರದ್ಧೆಯಿಂದ ನಡೆಸಿಕೊಂಡು ಬರುತ್ತಿರುವ ಕರಗ ಪೂಜಾರಿಗಳ ದಣಿವರಿಯದ ಭಕ್ತಿ ಮತ್ತು ಸೇವೆ ಅನನ್ಯವಾದದ್ದು. ಅವರನ್ನು ಗೌರವಿಸುವುದು ನಮ್ಮ ಪಾಲಿಗೆ ಬಂದಿರುವ ಪುಣ್ಯ ಕೆಲಸವೆಂದೇ ಭಾವಿಸುತ್ತೇವೆ. ಹೀಗಾಗಿ ಮಾ.1, 2025ರಂದು ರವೀಂದ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸುಮಾರು 200 ಕ್ಕೂ ಹೆಚ್ಚು ಕರಗ ಪೂಜಾರಿಗಳಿಗೆ "ಸುಕೃತ ಧರ್ಮಪಾಲ" ಎಂಬ ಬಿರುದು. ಕರಗ ಪೂಜಾರಿಗಳನ್ನು ಬೆಂಬಲಿಸುವ ಪತ್ನಿಯರ ನಿಸ್ವಾರ್ಥ ಸಮರ್ಪಣೆಯನ್ನು ಗುರುತಿಸಿ ಸುಮಾರು 200 ಕ್ಕೂ ಹೆಚ್ಚು ಕರಗ ಪೂಜಾರಿಗಳ ಧರ್ಮ ಪತ್ನಿಯರಿಗೆ ಸುಧರ್ಮ ಧರ್ಮಪತ್ನಿ ಎಂಬ ಬಿರುದು ನೀಡಲಾಗುತ್ತಿದೆ.

ಇದರ ಜೊತೆಗೆ ವಕ್ನಿಕುಲ ಕ್ಷತ್ರಿಯ ಜನಾಂಗದ ಮಹಿಳೆಯರ ಸಾಧನೆಯನ್ನು ಗುರುತಿಸುವ ಸಲುವಾಗಿ ರಾಜ್ಯ -ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕ್ಷೇತ್ರಗಳಲ್ಲಿ ಶ್ರೇಷ್ಠತೆ ಮತ್ತು ಶಕ್ತಿಯನ್ನು ಪ್ರದರ್ಶಿಸಿದ ಮಹಿಳೆಯರನ್ನು ಗೌರವಿಸಿ “ವಿಜಯಾದಿ ಶಕ್ತಿ" ಎಂಬ ಬಿರುದು ನೀಡಲಾಗುತ್ತಿದೆ. ಹಾಗೆಯೇ ವಗ್ನಿಕುಲ ಕ್ಷತ್ರಿಯ ಜನಾಂಗದ ಎರಡಕ್ಕೂ ಹೆಚ್ಚು ಪದವಿ ಪಡೆದ ವಿದ್ಯಾವಂತ ಮಹಿಳೆಯರನ್ನು ಗುರುತಿಸಿ ಪ್ರೋತ್ಸಾಹಿಸಲು ಸುಮಾರು 300 ಕ್ಕೂ ಹೆಚ್ಚು ಮಹಿಳೆಯರಿಗೆ "ಬಹುಪಾಂಡಿತ್ಯ ಯಜ್ಞಸೇನಿ" ಎಂಬ ಗೌರವಿಸಲಾಗುತ್ತದೆ. ಬಿರುದು ನೀಡಿ ಗೌರವಿಸಲಾಗುತ್ತದೆ.

ಕೆ.ಎನ್.ಫೌಂಡೇಷನ್ ಮಕ್ಕಳ ಭವಿಷ್ಯದ ಬಗ್ಗೆ ಭರವಸೆ ಇಟ್ಟಿರುತ್ತದೆ. ಹಾಗೂ ಅವರ ಬೆಂಬಲಕ್ಕೆ ಸದಾ ನಿಲ್ಲುತ್ತದೆ. ಅದರ ಭಾಗವಾಗಿ ವಕ್ನಿಕುಲ ಕ್ಷತ್ರಿಯ ಜನಾಂಗದ 18 ವರ್ಷದೊಳಗಿನ ಗಂಡು ಮತ್ತು ಹೆಣ್ಣು ಮಕ್ಕಳ ಸಾಧನೆ ಗುರುತಿಸುವ ಸಲುವಾಗಿ ರಾಜ್ಯ ಹಾಗು ಅಂತರ ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕರನ್ನು ಗೌರವಿಸಲು “ಶಂಕೋಧರಿ ಕುಮಾರಿ" ಮತ್ತು ವಹಿಕುಲ ಕ್ಷತ್ರಿಯ ಜನಾಂಗದ 18 ವರ್ಷದೊಳಗಿನ ಬಾಲಕರನ್ನು “ಅಭಿಮನ್ಯು ಮಾನ್ಯ" ಎಂಬ ಬಿರುದುಗಳನ್ನು ಕೊಟ್ಟು ಜನಾಂಗದ ಸಂಘಟನೆಗೆ ಮತ್ತು ಅಭಿವೃದ್ಧಿಗೆ ಉತ್ತೇಜನ ಕೊಟ್ಟು ಎಲ್ಲಾ ರೀತಿಯ ಶ್ರೇಯೋಭಿವೃದ್ಧಿಗಾಗಿ ಈ ನಿಸ್ವಾರ್ಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. enan ಇದು రాజ్య ಮಟ್ಟದ ಕಾರ್ಯಕ್ರಮವಾಗಿರುವುದರಿಂದ ಪತ್ರಿಕೆ ಹಾಗೂ ದೃಶ್ಯಮಾಧ್ಯಮದ ಸಂಪಾದಕರು ತಮ್ಮ ವರದಿಗಾರರನ್ನು ಕಾರ್ಯಕ್ರಮಕ್ಕೆ ಕಳುಹಿಸಿಕೊಟ್ಟು ರಾಜ್ಯಮಟ್ಟದ ವರದಿಯಾಗಿ ಪ್ರಕಟಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ.

ಕೆ.ಎನ್.ಫೌಂಡೇಶನ್ (ಗ್ರೂಪ್), ತನ್ನ ಸಾಮಾಜಿಕ ಸೇವೆಯ ಭಾಗವಾಗಿ "UTSAV - ಉತ್ಸವ್" (Uplifting Talented Students with Academics & Values (ಪ್ರತಿಭಾ ಪುರಸ್ಕಾರದ) ಮೂಲಕ ಶಿಕ್ಷಣದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳನ್ನು ಗೌರವಿಸುತ್ತಿದೆ. ಪರಿಸರ ಸ್ನೇಹಿ ಕಾರ್ಯಕ್ರಮಗಳು, ಯೋಗ, ಬೇಸಿಗೆ ಶಿಬಿರಗಳು, ಸ್ವಚ್ಛತಾ ಶಿಬಿರಗಳು, ಕರ ಕುಶಲ ಶಿಬಿರಗಳು, ಕ್ರೀಡೆ, ಪೋಷಕರ ಕ್ರೀಡೆ, ಶಿಕ್ಷಕರ . ದಿನಾಚರಣೆ, ಜಾನಪದ ಕಲೆ ಮತ್ತು ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳು, ಅನೇಕಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು, ವಿಶೇಷ ಚೇತನ, ಹಿರಿಯರು, ಸೇನೆಯಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸುವ ಸಲುವಾಗಿ “ಸಾಧಕರ ದಿನಾಚರಣೆ", ಆರೋಗ್ಯ ತಪಾಸಣಾ ಶಿಭಿರಗಳು, ಬಡ ಗರ್ಭಿಣಿ ಸ್ತ್ರೀಯರಿಗೆ "ಸಾಮೂಹಿಕ ಸೀಮಂತ" ಮಾಡುವ ಕಾರ್ಯಕ್ರಮ “ಶ್ರಮದಾನ ದಿನಾಚರಣೆ" ಹೀಗೆ ಅಸಂಖ್ಯಾತ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಸಾಂಸ್ಕೃತಿಕ ಸಂರಕ್ಷಣೆ: ಉತ್ಸವಗಳು, ಪ್ರದರ್ಶನಗಳು ಮತ್ತು ನಮ್ಮ ಶ್ರೀಮಂತ ಪರಂಪರೆಯನ್ನು ಗೌರವಿಸುವ ಪ್ರಶಸ್ತಿಗಳ ಮೂಲಕ ಸಾಂಪ್ರದಾಯಿಕ ಮೌಲ್ಯಗಳನ್ನು ಆಚರಿಸುವುದು.ಪರಿಸರ ಸಂರಕ್ಷಣೆ ಮತ್ತು ಸಮಾಜ ಕಲ್ಯಾಣ: ಸುಸ್ಥಿರ ಅಭ್ಯಾಸಗಳನ್ನು ಪ್ರತಿಪಾದಿಸುವುದು, ನಿರ್ಗತಿಕ ಕುಟುಂಬಗಳಿಗೆ ಆಹಾರವನ್ನು ಒದಗಿಸುವುದು ಮತ್ತು ಯೋಗ ಮತ್ತು ಧ್ಯಾನದ ಮೂಲಕ ಸಮಗ್ರ ಯೋಗಕ್ಷೇಮವನ್ನು ಬೆಂಬಲಿಸುವುದು.