ಬೆಂಗಳೂರು, ಫೆಬ್ರವರಿ 24, 2025

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ಫುಡ್ ಅಂಡ್ ಸಿವಿಲ್ ಸಪ್ಲೆ ಕಾರ್ಪೊರೇಷನ್ ಲೋಡಿಂಗ್ ಅಂಡ್ ಅನ್‌ಲೋಡಿಂಗ್ ಲೇಬರ್ಸ್ ಯೂನಿಯನ್' ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಜಿ.ಆರ್. ಶಿವಶಂಕರ್ ಅವರು ಮಾತನಾಡಿದರು. 

ಕರ್ನಾಟಕ ರಾಜ್ಯದ ಕೆ.ಎಫ್.ಸಿ.ಎಸ್.ಸಿ. ಗೋಡನ್ ಹಾಗೂ ಅನ್ನಭಾಗ್ಯ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಲೋಡಿಂಗ್ ಅಂಡ್ ಅನ್‌ಲೋಡಿಂಗ್ ಕಾರ್ಮಿಕರ ಬೃಹತ್ ಸಮ್ಮೇಳನ 28-02-2025ರಂದು ಶುಕ್ರವಾರ ಬೆಳಿಗ್ಗೆ 11-00 ಕ್ಕೆ ಬೆಂಗಳೂರಿನ ವಸಂತನಗರದಲ್ಲಿರುವ "ಡಾ.ಅಂಬೇಡ್ಕರ್ ಭವನ" ದಲ್ಲಿ ನಡೆಯಲಿದೆ.

ಈ ಸಮ್ಮೇಳನಕ್ಕೆ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಆಹಾರ ನಾಗರೀಕ ಸರಬರಾಜು, ಗ್ರಾಹಕರ ವ್ಯವಹಾರ ಇಲಾಖೆಯ ಸಚಿವರಾದ ಕೆ.ಹೆಚ್.ಮುನಿಯಪ್ಪನವರು ಮತ್ತು ಕಾರ್ಮಿಕ ಸಚಿವರಾದ ಸಂತೋಷ್ ಎಸ್.ಲಾಡ್ ರವರು ಭಾಗವಹಿಸುತ್ತಿದ್ದಾರೆ. ಇದಲ್ಲದೇ ಸಮ್ಮೇಳನದಲ್ಲಿ ಇಲಾಖೆಯ ಅಧ್ಯಕ್ಷರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಸಹ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ.

ಕರ್ನಾಟಕ ರಾಜ್ಯದ 223 ಗೋಡನ್‌ಗಳಲ್ಲಿ ಕೆಲಸ ಮಾಡುತ್ತಿರುವ ಲೋಡಿಂಗ್ ಅಂಡ್ ಅನ್‌ ಲೋಡಿಂಗ್ ಕಾರ್ಮಿಕರಲ್ಲದೇ ಅನ್ನಭಾಗ್ಯ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ 1200 ಜನ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ರಾಜ್ಯದ ಎಲ್ಲಾ ಜಿಲ್ಲೆ / ತಾಲ್ಲೂಕಿನಿಂದ ಭಾಗವಹಿಸುತ್ತಿದ್ದಾರೆ. 1973 ರಿಂದ ಕೆಲಸ ಮಾಡುತ್ತಿರುವ ಈ ಕಾರ್ಮಿಕರಿಗೆ ಈಗಾಗಲೇ ಎಲ್ಲಾ ಲೋಡಿಂಗ್ ಅಂಡ್ ಅನ್‌ ಲೋಡಿಂಗ್ ಕಾರ್ಮಿಕರಿಗೆ ಕಾರ್ಮಿಕ ಕಾಯಿದೆ ಪ್ರಕಾರ ನೀಡಬೇಕಿರುವ ಇ.ಎಸ್.ಐ., ಪಿ.ಎಫ್. ಅನ್ನು 05-01-2015ರಲ್ಲಿ ಕಡ್ಡಾಯವಾಗಿ ನೀಡಲು ಆದೇಶವಾಗಿದ್ದರು ರಾಜ್ಯದಲ್ಲಿರುವ ಉಪ ನಿರ್ದೇಶಕರು. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಹಾಗೂ ಸಾರಿಗೆ ಗುತ್ತಿಗೆದಾರರು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ. ಇದಲ್ಲದೇ ಗೋಡನ್‌ಗಳಲ್ಲಿ ಕೆಲಸ ಮಾಡುತ್ತಿರುವ ಹಮಾಲಿ ಹೆಸರು, ಹಾಜರಾತಿ ಪುಸ್ತಕ, ಗುತ್ತಿಗೆದಾರರು ಪಾವತಿಸಿರುವ ಕೂಲಿ ಮೊತ್ತ, ಇ.ಎಸ್.ಐ., ಪಿ.ಎಫ್.ಗೆ ಪಾವತಿಸಿದ ಮೊತ್ತ, ಪಾವತಿಸಿರುವ ದಿನಾಂಕ, ಖಾತೆ ಸಂಖ್ಯೆ ಹಾಗೂ ಹಮಾಲಿಗಳ ಸಹಿಯಿರಲು 21-01-20216ರಂದು ಆದೇಶವಿದ್ದರು ಇದನ್ನು ಗೋಡನ್ ವ್ಯವಸ್ಥಾಪಕರು, ಜಿಲ್ಲಾ ವ್ಯವಸ್ಥಾಪಕರು ಹಾಗೂ ಜಿಲ್ಲಾ ಉಪ ನಿರ್ದೇಶಕರು ಅನುಷ್ಠಾನಗೊಳಿಸುತ್ತಿಲ್ಲ.

ಇದಲ್ಲದೇ ಇನ್ನೂ ಲೋಡಿಂಗ್ ಅಂಡ್ ಅನ್‌ ಲೋಡಿಂಗ್ ಕಾರ್ಮಿಕರಿಗೆ ವಸತಿ ಹಾಗೂ ಇನ್ನೂ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿ ಸರ್ಕಾರದ ಗಮನಕ್ಕೆ ತರಲಾಗುವುದು. ಇದನ್ನು ತಮ್ಮ ಪತ್ರಿಕೆ/ನಿಲಯದ ವತಿಯಿಂದ ಪ್ರಕಟಿಸಲು ಈ ಮೂಲಕ ವಿನಂತಿಸಲಾಗುತ್ತಿದೆ.