ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಅಕ್ಷರ ಕಲ್ಚರಲ್ ಅಕಾಡೆಮಿ' ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಫೆಬ್ರವರಿ 17ರಂದು ಅಕ್ಷರ ಕಲ್ಚರಲ್ ಅಕಾಡೆಮಿಯ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು. 

ಈ ಸಮಾರಂಭವು ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ನಾಗರತ್ನ ಗೌರಿಪ್ರಸಾದ್ ಅವರ ನೇತೃತ್ವದಲ್ಲಿ ನಡೆಯಲಿದೆ. 

'ನಮ್ಮ ಸಂಸ್ಥೆಯ ವಾರ್ಷಿಕೋತ್ಸವ ಪ್ರಯುಕ್ತ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ಹಮ್ಮಿ ಕೊಂಡಿದ್ದು ಸಂಗೀತ,ಜಾನಪದ, ಯಕ್ಷಗಾನ ಭರತ ನಾಟ್ಯ ಡೊಳ್ಳು ಕುಣಿತ ಹಾಗೂ ಸಮಾಜದಲ್ಲಿ ಗಣನೀಯ ಸೇವೆ ಮಾಡಿದ ಗಣ್ಯರಿಗೆ ಅಕ್ಷರ ರಾಜ್ಯ ಪ್ರಶಸ್ತಿ ಪ್ರಧಾನ ಹಮ್ಮಿ ಕೊಂಡಿದ್ದು ಈ ಕಾರ್ಯಕ್ರಮದ ಉದ್ಘಾಟನೆ ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ನೆರವೇರಿಸಲಿದ್ದು. ಘನ ಅಧ್ಯಕ್ಷತೆಯನ್ನು ಸನ್ಮಾನ್ಯ ಶ್ರೀ ದಿನೇಶ್ ಗುಂಡೂರಾವ್ ಮಾನ್ಯ ಆರೋಗ್ಯ ಸಚಿವರು ವಹಿಸಲಿದ್ದಾರೆ ಮುಖ್ಯ ಅತಿಥಿಗಳು. ಖ್ಯಾತ ಚಲನಚಿತ್ರ ನಟರು ಪ್ರಣಯ ರಾಜ ಶ್ರೀನಾಥ್,ಎಸ್ ನಾರಾಯಣ್, ಶ್ರೀಮತಿ ಶಾಂತಾ ಕುಮಾರಿ,ಮಾಜಿ ಮಹಾಪೌರರು. ಶ್ರೀ ಸಾರಾ ಗೋವಿಂದ್ ನಿರ್ಮಾಪಕರು ಕನ್ನಡ ಹೋರಾಟಗಾರರು,ಶ್ರೀ ಬಾಲಕೃಷ್ಣ ಹೆಚ್ ಸಿ. ಶಾಸಕರು ಮಾಗಡಿ ಹಾಗೂ ಅಧ್ಯಕ್ಷರು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ.ಶ್ರೀ ಎಂ ಎನ್ ಸುರೇಶ್.ಖ್ಯಾತ ನಿರ್ಮಾಪಕರು ಅಧ್ಯಕ್ಷರು ಮಲ್ಲೇಶ್ವರ ಕೋ ಆಪರೇಟಿವ್ ಬ್ಯಾಂಕ್, ಶ್ರೀ ಎಂ ಶಿವರಾಜ್.ಮಾಜಿ ಪಾಲಿಕೆ ಸದಸ್ಯರು.ಮಾಜಿ ಬಿಬಿಎಂಪಿ ವಿರೋಧ ಪಕ್ಷದ ನಾಯಕರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.